
ಝಬುವಾ (ಮಧ್ಯಪ್ರದೇಶ): ದೀಪಾವಳಿಯ ದಿನದಂದು ಯುವಕನೊಬ್ಬ ‘ವಿಭಿನ್ನತೆ’ ತೋರಿಸುವ ಹುಚ್ಚಿನಲ್ಲಿ ಸುತ್ಳಿ ಬಾಂಬ್ ಅನ್ನು ನೇರವಾಗಿ ತನ್ನ ಬಾಯಲ್ಲಿ ಇಟ್ಟುಕೊಂಡು ಸಿಡಿಸಿದ ಪರಿಣಾಮ ಆತನ ದವಡೆ ಛಿದ್ರವಾಗಿದೆ. ಈ ಘಟನೆ ಬಾಚಿಖೇಡಾ ಎಂಬ ಗ್ರಾಮದಲ್ಲಿ ವರದಿಯಾಗಿದೆ.
ಈ ಗ್ರಾಮದ ೧೮ ವರ್ಷದ ರೋಹಿತ್ ಎಂಬ ಯುವಕ ‘ಗಾಯ್ ಗೋಹರಿ’ ಉತ್ಸವ ನೋಡಲು ಬಂದಿದ್ದನು. ಉತ್ಸವ ಮುಗಿದ ನಂತರ ಜನರ ಗಮನ ಸೆಳೆಯಲು ತನ್ನ ಬಾಯಲ್ಲಿ ಪಟಾಕಿ ಇಟ್ಟು ಸಿಡಿಸಲು ಪ್ರಾರಂಭಿಸಿದ. ಮೊದಲು ಅವನು ೬ ಸಣ್ಣ ಪಟಾಕಿಗಳನ್ನು ಬಾಯಲ್ಲಿ ಅದುಮಿ ಸಿಡಿಸಿದ. ‘ಜನ ಪ್ರಭಾವಿತರಾಗಿದ್ದಾರೆ’, ಎಂದು ಆತನಿಗೆ ಅನಿಸಿದ ನಂತರ, ಉತ್ಸಾಹದಲ್ಲಿ ಒಂದು ಸುತ್ಳಿ ಬಾಂಬ್ ಅನ್ನು ಬಾಯಲ್ಲಿ ಇಟ್ಟು ಬೆಂಕಿ ಹಚ್ಚಿದನು. ಕೆಲವೇ ಕ್ಷಣಗಳಲ್ಲಿ ಅವನ ದವಡೆಯ ತುಂಡುಗಳು ಚೆಲ್ಲಾಪಿಲ್ಲಿಯಾದವು ಮತ್ತು ರಕ್ತಸ್ರಾವ ಪ್ರಾರಂಭವಾಯಿತು. ಆತನನ್ನು ತಕ್ಷಣವೇ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಪ್ರಾಥಮಿಕ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ರತ್ಲಾಮ್‌ಗೆ ಕಳುಹಿಸಲಾಯಿತು.
ಪಟಾಕಿ ಸಿಡಿದು ಯುವಕನ ಸಾವು
ಉತ್ತರ ಪ್ರದೇಶದ ನೋಯ್ಡಾದ ಛಿಜಾರ್ಸಿ ಕಾಲೋನಿಯ ೨೦ ವರ್ಷದ ಶಿವಾ ಎಂಬ ಯುವಕ ಪಟಾಕಿಯ ಮೇಲೆ ಸ್ಟೀಲ್ ಗ್ಲಾಸ್ ಇಟ್ಟು ಸಿಡಿಸಿದನು. ಪಟಾಕಿ ಸಿಡಿಯುತ್ತಿದ್ದಂತೆ ಗ್ಲಾಸ್‌ನ ತುಂಡುಗಳು ಸಿಡಿದು ಅದರ ಕೆಲವು ತುಂಡುಗಳು ಯುವಕನ ದೇಹದೊಳಗೆ ನುಗ್ಗಿದವು. ಪರಿಣಾಮವಾಗಿ ಆತನಿಗೆ ಗಂಭೀರ ಗಾಯಗಳಾದವು. ಆತನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು; ಆದರೆ ಚಿಕಿತ್ಸೆ ಪಡೆಯುತ್ತಿರುವಾಗ ಆತನು ಸಾವನ್ನಪ್ಪಿದನು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!