
ಮುಂಬಯಿ – ಬೋರಿವಲಿಯಲ್ಲಿ ಮುಂಬರುವ ನವೆಂಬರ್‌ನಲ್ಲಿ ನಡೆಯಲಿರುವ ‘ಸಂಸದರ ಕ್ರೀಡಾ ಮಹೋತ್ಸವ ೨೦೨೫’ ರಲ್ಲಿ ನೌವಾರಿ ಸೀರೆ ಉಟ್ಟು ನಡೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಉತ್ತರ ಮುಂಬಯಿನ ಬಿಜೆಪಿ ಸಂಸದ ಪಿಯೂಷ್ ಗೋಯಲ್ ಅವರು ಈ ಮಹೋತ್ಸವವನ್ನು ಆಯೋಜಿಸಿದ್ದಾರೆ. ‘ಭಾರತೀಯ ಸಂಸ್ಕೃತಿ, ಸ್ವದೇಶಿ ಮತ್ತು ಸಾಂಪ್ರದಾಯಿಕ ಉಡುಪಿಗೆ ಗೌರವ ನೀಡುವುದು’, ಈ ಸ್ಪರ್ಧೆಯ ಹಿಂದಿನ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು. ‘ಸೀರೆಯು ಸಾಂಪ್ರದಾಯಿಕ ಉಡುಪಾಗಿರುವುದರಿಂದ, ನೌವಾರಿ ಸೀರೆ ಉಟ್ಟು ನಡೆಯುವ ಸ್ಪರ್ಧೆಯಿಂದ ಹಳೆಯ ಸಂಪ್ರದಾಯಕ್ಕೆ ಪುನಶ್ಚೇತನ ಸಿಗಲಿದೆ’ ಎಂದೂ ಅವರು ಹೇಳಿದರು.

ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಈ ಸೀರೆ ಧರಿಸಿ ೨ ರಿಂದ ೩ ಕಿ.ಮೀ. ನಡೆಯಬೇಕಾಗುತ್ತದೆ. ಪ್ರಸ್ತುತ ಉದ್ಯೋಗಸ್ಥ ಮಹಿಳೆಯರು ಬಹಳ ವಿರಳವಾಗಿ ಸೀರೆ ಉಡುತ್ತಾರೆ. ಸೀರೆ ಉಟ್ಟು ವಾಹನದಲ್ಲಿ ಪ್ರಯಾಣಿಸುವುದು ಮತ್ತು ಇಡೀ ದಿನ ಕಛೇರಿಯಲ್ಲಿ ಓಡಾಡುವುದು ಸಾಧ್ಯವಾಗದ ಕಾರಣ ಈ ಉಡುಗೆ ಕಾಲಬಾಹಿರವಾಗುತ್ತಿದೆ. ಸರಳ ಸೀರೆ ಉಟ್ಟು ನಡೆಯುವುದು ಕೂಡಾ ಹೊಸ ಪೀಳಿಗೆಯ ಯುವತಿಯರಿಗೆ ಕೌಶಲ್ಯದ ಭಾಗವಾಗಿ ಮಾರ್ಪಟ್ಟಿದೆ. ‘ವಾಕಥಾನ್’ (ನಡಿಗೆಯ ಮೂಲಕ ಜಾಗೃತಿ) ಈ ಉಪಕ್ರಮವನ್ನು ‘ಪ್ರತಿದಿನ ನಡೆಯಿರಿ, ಆರೋಗ್ಯ ಕಾಪಾಡಿ’ ಎಂಬ ಸಂದೇಶ ನೀಡಲು ಹಮ್ಮಿಕೊಳ್ಳಲಾಗಿದೆ. ಇದರ ಮೂಲಕ ಸಾಮೂಹಿಕವಾಗಿ ನಡೆಯುವ ರೂಢಿ ಬೆಳೆಸಲು ಪ್ರಯತ್ನಿಸಲಾಗುವುದು.
ಈ ಸ್ಪರ್ಧೆಗಾಗಿ ನವೆಂಬರ್ ೨ ರವರೆಗೆ ಪೋರ್ಟಲ್‌ನಲ್ಲಿ ನೋಂದಣಿ ನಡೆಯಲಿದೆ. ಈ ಮಹೋತ್ಸವದಲ್ಲಿ (ಚೀಣಿ ಕೋಲು) ವಿಟಿ-ದಾಂಡು, (ಕುಂಟಾಟ) ಲಂಗಡಿ, ಲಗೋರಿ, ಮಲ್ಲಖಂಬ, ಕಬಡ್ಡಿ, ಖೋ-ಖೋ ಮುಂತಾದ ಭಾರತೀಯ ಆಟಗಳ ಜೊತೆಗೆ ಕ್ರಿಕೆಟ್, ಅಥ್ಲೆಟಿಕ್ಸ್, ವಾಲಿಬಾಲ್ ಆಟಗಳನ್ನು ಕೂಡಾ ‘ಖೇಲೇಗಾ ಇಂಡಿಯಾ, ತೋ ಬಢೇಗಾ ಇಂಡಿಯಾ’ ಎಂಬ ಘೋಷವಾಕ್ಯದಡಿಯಲ್ಲಿ ನಡೆಸಲಾಗುವುದು.
ಸಂಪಾದಕೀಯ ನಿಲುವುಆಧುನಿಕ ಬಟ್ಟೆಗಳಿಗಿಂತ ಸಾಂಪ್ರದಾಯಿಕ ಬಟ್ಟೆಗಳಲ್ಲಿ ಹೆಚ್ಚು ಸಾತ್ತ್ವಿಕತೆ ಇರುತ್ತದೆ; ಏಕೆಂದರೆ ಸಾಂಪ್ರದಾಯಿಕ ಬಟ್ಟೆಗಳು ಒಂದೇ ವಸ್ತ್ರವಾಗಿರುತ್ತದೆ ಮತ್ತು ಅವುಗಳನ್ನು ಸರಿಯಾದ ಪದ್ಧತಿಯಲ್ಲಿ ಧರಿಸುವುದರಿಂದ ದೈವಿಕ ಚೈತನ್ಯವು ಆಕರ್ಷಿತವಾಗುತ್ತವೆ ಹಾಗೂ ಸಾಂಪ್ರದಾಯಿಕ ಬಟ್ಟೆ ಧರಿಸುವ ಮಹಿಳೆಗೆ ಪ್ರಯೋಜನಕಾರಿಯಾಗಿದೆ. ಇದರಿಂದ ಮಹಿಳೆಯ ಸುತ್ತಲಿನ ಸಕಾರಾತ್ಮಕತೆ ಹೆಚ್ಚುವುದರಿಂದ ಹೆಚ್ಚು ಉತ್ಸಾಹದಿಂದ ಕೂಡಿರುತ್ತಾರೆ. ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ಅನೇಕ ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಇಂತಹ ವಿವಿಧ ಸಂಶೋಧನೆಯನ್ನು ಮಾಡಿದೆ! |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !