
ಶಾಲೆಗೆ ಹೋಗುವ ಮಕ್ಕಳಿಗೆ ಯಾವಾಗಲೂ ‘ಬೆತ್ತ’ದ ಭಯ ಇರುತ್ತಿತ್ತು. ಹಿಂದಿನ ಕಾಲದಲ್ಲಿ ಶಿಕ್ಷಕರು ಬೆತ್ತವನ್ನು ಬಳಸಬಹುದಿತ್ತು; ಆದರೆ ಈಗ ಮಕ್ಕಳಿಗೆ ಬೆತ್ತ ಬಳಸುವ ಮೊದಲು ಶಿಕ್ಷಕರು ೧೦ ಬಾರಿ ಯೋಚಿಸಬೇಕಾಗುತ್ತದೆ; ಏಕೆಂದರೆ ಪೋಷಕರ ವಿರೋಧ ! ಬೆತ್ತವನ್ನು ಪ್ರತ್ಯಕ್ಷವಾಗಿ ಯಾವಾಗ ಬಳಸಬೇಕು ಮತ್ತು ಅದರ ಭಯವನ್ನು ಹೇಗೆ ಇಡಬೇಕು ಎಂಬುದು ಶಿಕ್ಷಕರಿಗೆ ಚೆನ್ನಾಗಿ ತಿಳಿದಿರುತ್ತದೆ. ಅಂತಹ ಒಂದು ಬೆತ್ತ ಮತ್ತು ಅದನ್ನು ಬಳಸುವ ಸಂಘಟನೆಯ ಭಯ ಮತ್ತು ಆತಂಕವು ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಿದೆ. ಆದ್ದರಿಂದ ಅದು ನಿರಂತರವಾಗಿ ಈ ಸಂಘಟನೆಯನ್ನು ನಿಷೇಧಿಸಲು ಪ್ರಯತ್ನಿಸುತ್ತಿದೆ. ಇಲ್ಲಿಯವರೆಗೆ ಕಾಂಗ್ರೆಸ್ ಸರಕಾರವು ೩ ಬಾರಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ನಿಷೇಧ ಹೇರಿ ನಂತರ ಅದನ್ನು ತೆಗೆದುಹಾಕಿದೆ, ಆದರೂ ಕಾಂಗ್ರೆಸ್‌ಗೆ ತೃಪ್ತಿಯಾಗಿಲ್ಲ. ಯಾವಾಗ ಮುಸಲ್ಮಾನರು ಮತ್ತು ಪ್ರಗತಿಪರರ (ಅಧೋಗಾಮಿಗಳ) ಮತಗಳು ಕಾಂಗ್ರೆಸ್‌ಗೆ ಹೆಚ್ಚು ಬೇಕಾಗುತ್ತದೆಯೋ ಅಥವಾ ಹಿಂದೂದ್ವೇಷವನ್ನು ತೋರಿಸಬೇಕಾಗುತ್ತದೆಯೋ ಆವಾಗಲೆಲ್ಲಾ ಕಾಂಗ್ರೆಸ್ ಪಕ್ಷವು ಸಂಘವನ್ನು ಟೀಕಿಸುತ್ತದೆ ಅಥವಾ ಅದನ್ನು ನಿಷೇಧಿಸಲು ಪ್ರಯತ್ನಿಸುತ್ತದೆ. ಈಗ ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರಕಾರದ ಸಚಿವರು ಮತ್ತು ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ ಖರ್ಗೆ ಅವರು ಸಂಘದ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಶಾಖೆಗಳ ಮೇಲೆ ನಿಷೇಧ ಹೇರಲು ಆಗ್ರಹಿಸಿದ್ದಾರೆ. ಇದರ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದರ ಬಗ್ಗೆ ಪರಿಶೀಲಿಸಿ ಯೋಗ್ಯ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ. ‘ಸಂಘದ ಶಾಖೆಯಲ್ಲಿ ಕಲಿಸುವ ಆತ್ಮರಕ್ಷಣೆ ತರಬೇತಿಯಲ್ಲಿ ಬಳಸಲಾಗುವ ಲಾಠಿಯ ಬಗ್ಗೆ ಸಮಾಜಕ್ಕೆ ಭಯವಿದೆ. ರಾಜ್ಯದ ಮಕ್ಕಳು, ಯುವಕರು ಮತ್ತು ಸಮಾಜದ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಈ ನಿಷೇಧವನ್ನು ಹೇರಬೇಕು’ ಎಂದು ಪ್ರಿಯಾಂಕ ಖರ್ಗೆ ಅವರು ಆಗ್ರಹಿಸಿದ್ದಾರೆ. ಖಾಸಗಿ ಸಭಾಂಗಣಗಳಲ್ಲಿ ಈ ನಿಷೇಧವನ್ನು ಹೇರುವ ಬೇಡಿಕೆ ಇದರಲ್ಲಿಲ್ಲ ಎಂಬುದನ್ನು ಗಮನಿಸಬಹುದು. ‘ಸಂಘದ ಪ್ರಾತ್ಯಕ್ಷಿಕೆಗಳ ಬಗ್ಗೆ ಭಯವಿದೆ’ ಎಂದು ನೀಡಲಾದ ಕಾರಣವು ಭಯ ಇರುವುದು ಜನರಿಗಾಗಿಯೇ ಅಥವಾ ದೇಶದ್ರೋಹಿಗಳು, ಮತಾಂಧರು, ಹಿಂದೂದ್ವೇಷಿಗಳಿಗಾಗಿಯೇ ಎಂಬುದು ಸುಲಭವಾಗಿ ಗಮನಕ್ಕೆ ಬರುತ್ತದೆ. ಸಂಘದ ಲಾಠಿಯ ಪ್ರಹಾರವು ಅಂತಹ ಜನರ ಮೇಲೆ ಯಾವಾಗಲೂ ಆಗಿದೆ. ಅದರ ಬಗ್ಗೆ ಈ ಜನರಿಗೆ ಯಾವಾಗಲೂ ಭಯವಿದ್ದ ಕಾರಣ ನಿರಂತರವಾಗಿ ಸಂಘದ ಬಗ್ಗೆ ಕೆಟ್ಟದಾಗಿ ಮಾತನಾಡಲು ಪ್ರಯತ್ನಿಸುತ್ತಾರೆ. ಇದೇ ಕಾರಣಕ್ಕೆ ಅವರನ್ನು ಸಂತುಷ್ಟಗೊಳಿಸಲು ಕಾಂಗ್ರೆಸ್ ಈ ನಿಷೇಧ ಹೇರಲು ಆಗ್ರಹಿಸಿದೆ. ಕಾಂಗ್ರೆಸ್ ಅನ್ನು ಅಧಿಕಾರದಲ್ಲಿ ಕೂರಿಸಿದ ನಂತರ ಇಲ್ಲಿಯ ವರೆಗೆ ತೆಗೆದುಕೊಂಡ ಹಿಂದೂದ್ವೇಷಿ ನಿರ್ಧಾರಗಳನ್ನು ನೋಡಿದರೆ, ರಾಜ್ಯದ ಹಿಂದೂಗಳು ಪಶ್ಚಾತ್ತಾಪ ಪಟ್ಟಿದ್ದಾರೆಯೇ ? ಎಂಬ ಪ್ರಶ್ನೆ ಇದೆ, ಅದೇ ರೀತಿ ಭಾಜಪ ಕೂಡ ಇದರ ಬಗ್ಗೆ ಯೋಚಿಸಬೇಕು. ಕರ್ನಾಟಕದಲ್ಲಿ ಭಾಜಪದ ಭ್ರಷ್ಟಾಚಾರದ ಕಾರಣದಿಂದಲೇ ಜನ ಅದನ್ನು ಅಧಿಕಾರದಿಂದ ಕೆಳಗಿಳಿಸಿ ಮತ್ತೆ ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದಾರೆ. ಇದರಲ್ಲಿ ಎರಡೂ ಬಾರಿ ಹಿಂದೂಗಳಿಗೇ ಹಾನಿಯಾಗಿದೆ, ಎಂದು ಈ ಬೇಡಿಕೆಯಿಂದ ಗಮನಕ್ಕೆ ಬರುತ್ತದೆ. ಮತ್ತೊಂದೆಡೆ, ನೆಹರೂ ಅವರಿಂದ ರಾಜೀವ ಗಾಂಧಿ ಅವರ ವರೆಗೆ ಕಾಂಗ್ರೆಸ್ ನಾಯಕರು ಸಂಘವನ್ನು ಹೊಗಳಿ ಅದರ ಸಹಾಯವನ್ನು ಪಡೆದಿದ್ದಾರೆ. ಈ ವೈರುಧ್ಯವನ್ನು ಗಮನಿಸಬೇಕು.

ಕಾಂಗ್ರೆಸ್‌ನಿಂದಲೇ ಸಂಘದ ಶ್ಲಾಘನೆ !
೧೯೬೨ ರ ಭಾರತ-ಚೀನಾ ಯುದ್ಧದ ಸಮಯದಲ್ಲಿ, ನೆಹರೂ ಅವರ ವಿನಂತಿಯ ಮೇರೆಗೆ ಸಂಘವು ತಕ್ಷಣವೇ ಸಾವಿರಾರು ಸ್ವಯಂಸೇವಕರನ್ನು ಗಡಿಪ್ರದೇಶಗಳಲ್ಲಿ, ನಾಗರಿಕ ರಕ್ಷಣೆ, ಸಾರಿಗೆ, ಆಹಾರ ವಿತರಣೆ, ಶಿಸ್ತು ಮತ್ತು ನಿರಾಶ್ರಿತರ ಸೇವೆಗಾಗಿ ಕಳುಹಿಸಿತು. ನೆಹರೂ ಅವರು ಆ ಸಮಯದಲ್ಲಿ ‘ಸಂಘದ ಕಾರ್ಯವು ಅತ್ಯುತ್ತಮ ದೇಶಭಕ್ತಿಯಾಗಿದೆ’ ಎಂದು ಒಪ್ಪಿಕೊಂಡರು ಮತ್ತು ೧೯೬೩ ರಲ್ಲಿ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಸಂಘವನ್ನು ಔಪಚಾರಿಕವಾಗಿ ಭಾಗವಹಿಸಲು ಆಹ್ವಾನಿಸಿದರು. ಆ ಸಮಯದಲ್ಲಿ ಸಂಘದ ಸ್ವಯಂಸೇವಕರು ಪಥಸಂಚಲನ ಮಾಡಿದ್ದರು, ಈ ಘಟನೆ ಇಂದಿಗೂ ಅಧಿಕೃತ ದಾಖಲೆಗಳಲ್ಲಿ ಇದೆ. ನೆಹರೂ ಅವರು ಸಂಘದ ವಿಚಾರಗಳನ್ನು ಒಪ್ಪಲಿಲ್ಲ; ಆದರೆ ಅವರ ಕಾರ್ಯಶಕ್ತಿ ಮತ್ತು ಸಂಘಟನಾಶಿಸ್ತನ್ನು ಶ್ಲಾಘಿಸಿದರು. ೧೯೬೫ ರ ಭಾರತ-ಪಾಕಿಸ್ತಾನ ಯುದ್ಧದ ನಂತರ ಅನೇಕ ಸ್ವಯಂಸೇವಕರಿಗೆ ಗೃಹ ಸಚಿವಾಲಯದಿಂದ ಪ್ರಶಂಸಾಪತ್ರಗಳನ್ನು ನೀಡಲಾಯಿತು. ಸಂಕಷ್ಟದ ಸಮಯದಲ್ಲಿ ಸಂಘದ ಕೊಡುಗೆಯಿಂದಾಗಿ ಆ ಕಾಲದ ಕೆಲವು ಕಾಂಗ್ರೆಸ್ ಮುಖ್ಯಮಂತ್ರಿಗಳು ಕೂಡ ಸಂಘದ ಕಾರ್ಯಕರ್ತರನ್ನು ಸಾರ್ವಜನಿಕವಾಗಿ ಶ್ಲಾಘಿಸಿದರು. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ೧೯೭೧ ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಸಂಘದ ಸ್ವಯಂಸೇವಕರು ನಿರಾಶ್ರಿತರ ಸೇವೆ, ರಕ್ತದಾನ ಶಿಬಿರಗಳು ಮತ್ತು ಗಡಿ ಪ್ರದೇಶಗಳಲ್ಲಿ ಕಾರ್ಯನಿರತರಾಗಿದ್ದರು. ಆ ಸಮಯದಲ್ಲಿ ಇಂದಿರಾ ಗಾಂಧಿ ಅವರು ಅವರ ದೇಶಸೇವೆಗಾಗಿ ಸಂಘಕ್ಕೆ ಧನ್ಯವಾದ ಅರ್ಪಿಸಿದ್ದರು. ಇಂದಿರಾ ಗಾಂಧಿ ಅವರು ೧೯೮೦ ರಲ್ಲಿ ಒಂದು ಖಾಸಗಿ ಸಂಭಾಷಣೆಯಲ್ಲಿ ಸಂಘದ ಕಾರ್ಯಕರ್ತರ ಶಿಸ್ತು ಮತ್ತು ನಿಸ್ವಾರ್ಥ ಮನೋಭಾವವನ್ನು ಗಮನಿಸಿದ್ದರು. ರಾಜೀವ್ ಗಾಂಧಿ ಸರಕಾರವು ೧೯೮೬ ರಲ್ಲಿ ಶ್ರೀರಾಮಜನ್ಮಭೂಮಿಯ ಬಾಗಿಲುಗಳನ್ನು ತೆರೆಯಲು ನಿರ್ಧರಿಸಿತು ಮತ್ತು ‘ರಾಮಾಯಣ’ ಧಾರಾವಾಹಿಯನ್ನು ದೂರದರ್ಶನದಲ್ಲಿ ತೋರಿಸಲೂ ಅನುಮತಿ ನೀಡಿತು. ಆ ಸಮಯದಲ್ಲಿ ಸಂಘದ ಸಾಂಸ್ಕೃತಿಕ ರಾಷ್ಟ್ರೀಯತೆಯ ಕಲ್ಪನೆಯ ಬಗ್ಗೆ ರಾಜೀವ ಗಾಂಧಿ ಅವರು ‘ಸಾಂಸ್ಕೃತಿಕ ಪ್ರಜ್ಞೆಯು ರಾಷ್ಟ್ರವನ್ನು ಒಗ್ಗೂಡಿಸುವ ಶಕ್ತಿ’ ಎಂದು ಹೇಳಿಕೆ ನೀಡಿದ್ದರು.
ಕಾಂಗ್ರೆಸ್‌ನಿಂದ ಟೀಕೆ
ಕಾಂಗ್ರೆಸ್ ಯಾವಾಗಲೂ ಸಂಘದ ಮೇಲೆ ‘ಹಿಂದೂ ರಾಷ್ಟ್ರ’ದ ಕಲ್ಪನೆಯನ್ನು ಮುಂದಿಟ್ಟು ಧಾರ್ಮಿಕ ವಿಭಜನೆಯನ್ನು ಹೆಚ್ಚಿಸುತ್ತಿದೆ ಎಂದು ಆರೋಪಿಸುತ್ತದೆ. ‘ಸಂಘದ ಹಿಂದುತ್ವನಿಷ್ಠ ಸಿದ್ಧಾಂತದಿಂದಾಗಿ ದೇಶದ ಅಲ್ಪಸಂಖ್ಯಾತ ಸಮುದಾಯಗಳು ಭಯಭೀತಗೊಳ್ಳುತ್ತಾರೆ’ ಎಂಬುದು ಕಾಂಗ್ರೆಸ್‌ನ ನಿಲುವಾಗಿದೆ. ಇದೇ ಅಲ್ಪಸಂಖ್ಯಾತರಿಂದ, ಅಂದರೆ ಮುಸಲ್ಮಾನರಿಂದ ಹಿಂದೂಗಳು ಭಯಭೀತಗೊಂಡಿದ್ದಾರೆ ಎಂದು ಕಾಂಗ್ರೆಸ್‌ಗೆ ಎಂದಿಗೂ ಅನಿಸುವುದಿಲ್ಲ ಎಂಬುದನ್ನು ಗಮನಿಸಬೇಕು. ಇದೇ ಕಾಂಗ್ರೆಸ್ ಮೋಹನದಾಸ ಗಾಂಧಿಯವರ ಹತ್ಯೆಯ ನಂತರ ಸಾವಿರಾರು ಬ್ರಾಹ್ಮಣರನ್ನು ಹತ್ಯೆ ಮಾಡುವುದರ ಜೊತೆಗೆ ಅವರ ಅಪಾರ ಆರ್ಥಿಕ ನಷ್ಟವನ್ನು ಮಾಡಿದೆ. ಇದೇ ಕಾಂಗ್ರೆಸ್‌ನ ನಾಯಕರು ಇಂದಿರಾ ಗಾಂಧಿಯವರ ಹತ್ಯೆಯ ನಂತರ ಮೂರೂವರೆ ಸಾವಿರ ಸಿಖ್ಖರನ್ನು ಹತ್ಯೆ ಮಾಡಿದರು. ಇದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಗೋಹತ್ಯೆ ನಿಷೇಧಕ್ಕಾಗಿ ನಡೆಸಿದ ಪ.ಪೂ. ಕರಪಾತ್ರಿ ಮಹಾರಾಜರ ಮೆರವಣಿಗೆಯ ಮೇಲೆ ಗೋಲಿಬಾರ್ ಮಾಡಿ ಅನೇಕ ಸಂತರು ಮತ್ತು ಸಾಧುಗಳನ್ನು ಕೊಲ್ಲಿಸಲಾಗಿತ್ತು. ಕಾಶ್ಮೀರದಲ್ಲಿ ಹಿಂದೂಗಳು ವಲಸೆ ಹೋಗಬೇಕಾಯಿತು, ಅವರ ಹತ್ಯಾಕಾಂಡವಾಯಿತು, ಆದರೂ ಕಾಂಗ್ರೆಸ್‌ಗೆ ಎಂದಿಗೂ ದುಃಖವಾಗಲಿಲ್ಲ. ಅಂತಹ ಕಾಂಗ್ರೆಸ್‌ಗೆ ಸಂಘದ ಮೇಲೆ ಆರೋಪ ಮಾಡಲು ಎಂದಿಗೂ ನಾಚಿಕೆಯಾಗಲಿಲ್ಲ. ‘ಸಂಘವು ತನ್ನನ್ನು ತಾನು ಸಾಮಾಜಿಕ ಸಂಸ್ಥೆ ಎಂದು ಹೇಳಿಕೊಂಡರೂ, ಅದರ ಪರೋಕ್ಷ ರಾಜಕೀಯ ಪ್ರಭಾವವು (ವಿಶೇಷವಾಗಿ ಜನಸಂಘ, ನಂತರ ಭಾಜಪ) ಹೆಚ್ಚುತ್ತಿದೆ’ ಎಂಬುದು ಕಾಂಗ್ರೆಸ್‌ನ ಟೀಕೆಯಾಗಿತ್ತು. ಮೋಹನದಾಸ ಗಾಂಧಿಯವರ ಹತ್ಯೆಯ ನಂತರ ಕಾಂಗ್ರೆಸ್ ಸಂಘದ ಮೇಲೆ ದ್ವೇಷದ ಸಿದ್ಧಾಂತವನ್ನು ಹರಡುತ್ತಿದೆ ಎಂದು ಆರೋಪಿಸಿ ಇದೇ ಕಾರಣಕ್ಕಾಗಿ ಮೊದಲ ನಿಷೇಧವನ್ನು ಹೇರಿತು. ಕಾಂಗ್ರೆಸ್‌ನ ಕೆಲವು ನಾಯಕರ ಪ್ರಕಾರ ಸಂಘವು ಕಾಂಗ್ರೆಸ್ ವಿರೋಧಿ ಜನಭಾವನೆಯನ್ನು ಕೆರಳಿಸುತ್ತದೆ ಮತ್ತು ಅವರ ರಾಜಕೀಯ ನಿಯಂತ್ರಣಕ್ಕೆ ಸವಾಲು ಹಾಕುತ್ತದೆ. ಆದ್ದರಿಂದ ಸಂಘಕ್ಕೆ ‘ಪ್ರಜಾಪ್ರಭುತ್ವವಿರೋಧಿ ಪ್ರವೃತ್ತಿ’ ಎಂಬ ಹಣೆಪಟ್ಟಿ ಹಚ್ಚಲಾಯಿತು. ಕಾಂಗ್ರೆಸ್‌ನವರು ಎಷ್ಟು ಪ್ರಜಾಪ್ರಭುತ್ವವಾದಿ ಎಂಬುದು ಜಗತ್ತಿಗೆ ತಿಳಿದಿದೆ. ಪ್ರಜಾಪ್ರಭುತ್ವವಿರೋಧಿ ಮಾರ್ಗದಿಂದ ವಿರೋಧ ಪಕ್ಷಗಳ ಎಷ್ಟು ರಾಜ್ಯ ಸರಕಾರಗಳನ್ನು ಕಾಂಗ್ರೆಸ್ ವಿಸರ್ಜಿಸಿದೆ ಎಂಬುದಕ್ಕೆ ಲೆಕ್ಕವೇ ಇಲ್ಲ. ಅಂತಹ ಕಾಂಗ್ರೆಸ್‌ಗೆ ಸಂಘವನ್ನು ಪ್ರಜಾಪ್ರಭುತ್ವವಿರೋಧಿ ಎಂದು ಹೇಳಲು ನೈತಿಕ ಹಕ್ಕಿಲ್ಲ. ಕರ್ನಾಟಕದ ಕಾಂಗ್ರೆಸ್ ಸರಕಾರವು ನಿಷೇಧದ ಬೇಡಿಕೆಯ ಮೇಲೆ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ನೋಡಬೇಕು. ‘ವಿನಾಶಕಾಲೇ ವಿಪರೀತ ಬುದ್ಧಿಃ ?’ (ಅರ್ಥ : ವಿನಾಶಕಾಲ ಹತ್ತಿರ ಬಂದಾಗ ಬುದ್ಧಿ ಭ್ರಷ್ಟವಾಗುತ್ತದೆ) ಎಂದು ಹೇಳಲಾಗುತ್ತದೆ. ‘ಕಾಂಗ್ರೆಸ್ ಈಗ ನಿಷೇಧ ಹೇರಿದರೆ, ಅದರ ವಿನಾಶಕಾಲ ಹತ್ತಿರ ಬಂದಿದೆ’ ಎಂಬುದನ್ನು ಅದು ನೆನಪಿಡಬೇಕು.
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !
ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಿ.ಕೆ ಶಿವಕುಮಾರ್
‘ಭಾರತದಲ್ಲಿ ವಾಸಿಸಲು ನನಗೆ ನಾಚಿಕೆಯಾಗುತ್ತದೆ !’
”ವಂದೇ ಮಾತರಂ” ಅನ್ನು ಪೂರ್ಣವಾಗಿ ಹಾಡುವುದು ರಾಷ್ಟ್ರೀಯ ಸ್ವಯಂಸೇವಕ ಸಂಘದ ನೀತಿಯ ಭಾಗ! (ವಂತೆ)
‘ಹೊಸ ಸಚಿವ ಸಂಪುಟದಲ್ಲಿ ಮುಸ್ಲಿಮರಿಗೆ ಕನಿಷ್ಠ ೩ ಹುದ್ದೆಗಳನ್ನು ನೀಡಬೇಕಂತೆ !’
ರಾಜ್ಯದಲ್ಲಿ ಮುಸ್ಲಿಂ ಸಮುದಾಯವೇ ಎಲ್ಲಕ್ಕಿಂತ ದೊಡ್ಡದು!