೩ ಗಂಟೆಗಳವರೆಗಿನ ಪ್ರಯಾಣ ೧೦ ರಿಂದ ೧೨ ನಿಮಿಷಗಳಲ್ಲಿ, ೫೦೦ ರೂಪಾಯಿ ಬಾಡಿಗೆ!

ನವ ದೆಹಲಿ – ಭಾರತದ ಆಕಾಶದಲ್ಲಿ ೨೦೨೮ ರ ವೇಳೆಗೆ ‘ಏರ್ ಟ್ಯಾಕ್ಸಿ’ ಪ್ರಾರಂಭವಾಗುವ ಸಾಧ್ಯತೆ ಇದೆ. ಪಂಜಾಬ್‌ನ ಮೊಹಾಲಿ ಮೂಲದ ‘ನಲ್ವಾ ಏರೋ’ ಎಂಬ ಸಂಸ್ಥೆಯು ದೇಶೀಯ ‘ಇವಿಟೋಲ್’ (ಎಲೆಕ್ಟ್ರಿಕ್ ವರ್ಟಿಕಲ್ ಟೇಕ್ ಆಫ್ ಅಂಡ್ ಲ್ಯಾಂಡಿಂಗ್) ‘ಏರ್ ಟ್ಯಾಕ್ಸಿ’ಯನ್ನು ಅಭಿವೃದ್ಧಿಪಡಿಸಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯವು ಈ ಟ್ಯಾಕ್ಸಿಗೆ ‘ವಿನ್ಯಾಸ ಸಂಸ್ಥೆ ಅನುಮೋದನೆ ಪ್ರಮಾಣಪತ್ರ’ವನ್ನು ನೀಡಿದೆ.
೧. ಆರಂಭದಲ್ಲಿ ಈ ಟ್ಯಾಕ್ಸಿ ದೆಹಲಿ ಎನ್‌ಸಿಆರ್ (ರಾಷ್ಟ್ರೀಯ ರಾಜಧಾನಿ ಪ್ರದೇಶ) ನಲ್ಲಿ ಪ್ರಾರಂಭವಾಗಲಿದೆ. ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆನಂದ್ ವಿಹಾರ, ನೋಯ್ಡಾ, ಗಾಜಿಯಾಬಾದ್ ಮತ್ತು ಪಾಣಿಪತ್‌ಗೆ ಪ್ರಯಾಣಿಸಲು ೧ ರಿಂದ ೩ ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ‘ಏರ್ ಟ್ಯಾಕ್ಸಿ’ಯಿಂದ ಈ ಪ್ರಯಾಣ ೧೦ ರಿಂದ ೧೨ ನಿಮಿಷಗಳಲ್ಲಿ ಮಾಡಬಹುದು. ವಿಮಾನ ನಿಲ್ದಾಣದಿಂದ ಆನಂದ್ ವಿಹಾರದವರೆಗೆ ಆರಂಭಿಕ ಬಾಡಿಗೆ ಪ್ರತಿ ವ್ಯಕ್ತಿಗೆ ಅಂದಾಜು ೫೦೦ ರೂಪಾಯಿಗಳು ಇರಬಹುದು. ದೆಹಲಿಯ ನಂತರ ಈ ಸೌಲಭ್ಯವು ಮುಂಬಯಿ, ಕೋಲ್ಕತ್ತಾ ಮತ್ತು ಬೆಂಗಳೂರು ಸೇರಿದಂತೆ ಇತರ ದೊಡ್ಡ ನಗರಗಳಲ್ಲಿಯೂ ಪ್ರಾರಂಭವಾಗಲಿದೆ.
೨. ಭಾರತದ ಪ್ರಸ್ತುತ ನಗರ ಮೂಲಸೌಕರ್ಯದಲ್ಲಿ ಇದು ಸಾಧ್ಯವಿದೆ, ಅಂದರೆ ಮೆಟ್ರೋ ನಿಲ್ದಾಣಗಳು ಮತ್ತು ದೊಡ್ಡ ಕಟ್ಟಡಗಳ ಛಾವಣಿಯ ಮೇಲೆ ‘ಏರ್ ಟ್ಯಾಕ್ಸಿ’ ಇಳಿಯಬಹುದು.
೩. ‘ಇವಿಟೋಲ್’ನಲ್ಲಿ ೮ ‘ರೋಟರ್’ ಯಂತ್ರಗಳಿವೆ. ಅವುಗಳಲ್ಲಿ ೨ ನಿಷ್ಕ್ರಿಯಗೊಂಡರೂ ಸಹ, ವಿಮಾನವು ಕೆಳಗೆ ಬೀಳುವುದಿಲ್ಲ. ಅಂತಹ ಪರಿಸ್ಥಿತಿಯಲ್ಲೂ ಅದು ಸುರಕ್ಷಿತವಾಗಿ ಇಳಿಯಬಹುದು ಎಂದು ‘ನಲ್ವಾ ಏರೋ’ದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕುಲಜಿತ್ ಸಿಂಗ್ ಸಂಧು ಮಾಹಿತಿ ನೀಡಿದರು. ‘ಏರ್ ಟ್ಯಾಕ್ಸಿ’ಯು ಹೆಲಿಕಾಪ್ಟರ್‌ಗಿಂತ ಸುರಕ್ಷಿತವಾಗಿದೆ. ಹೆಲಿಕಾಪ್ಟರ್‌ಗೆ ಹೋಲಿಸಿದರೆ ಇದು ೧೦ ಪಟ್ಟು ಹೆಚ್ಚು ಶಾಂತವಾಗಿದೆ ಮತ್ತು ಸಾರಿಗೆ ವೆಚ್ಚವು ೯೦% ರಷ್ಟು ಅಗ್ಗವಾಗಿರುತ್ತದೆ.
೪. ಪ್ರಸ್ತುತ ವಿಶ್ವದಲ್ಲಿ ಸಂಯುಕ್ತ ಅರಬ್ ಎಮಿರೇಟ್ಸ್, ಅಮೆರಿಕಾ ಮತ್ತು ಚೀನಾ ದಂತಹ ಕೆಲವು ದೇಶಗಳು ಈ ತಂತ್ರಜ್ಞಾನದ ಮೇಲೆ ವೇಗವಾಗಿ ಕೆಲಸ ಮಾಡುತ್ತಿವೆ. ಜಾಗತಿಕ ಹೂಡಿಕೆ ಸಂಸ್ಥೆ ‘ಮೋರ್ಗನ್ ಸ್ಟಾನ್ಲಿ’ ಯ ವರದಿಯ ಪ್ರಕಾರ, ‘೨೦೫೦ ರ ವೇಳೆಗೆ ‘ಇವಿಟೋಲ್’ ಮಾರುಕಟ್ಟೆಯ ಗಾತ್ರ ೯ ಟ್ರಿಲಿಯನ್ (ಒಂದರ ಮುಂದೆ ೧೨ ಸೊನ್ನೆಗಳು) ಅಮೆರಿಕನ್ ಡಾಲರ್‌ಗಳಷ್ಟು ತಲುಪಬಹುದು.’
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !