ತಮಿಳುನಾಡಿನಲ್ಲಿ ಡಿಎಂಕೆ ಸರಕಾರದ ಹಿಂದಿ ದ್ವೇಷ

ಚೆನ್ನೈ – ತಮಿಳುನಾಡಿನಲ್ಲಿ ಹಿಂದಿ ಭಾಷೆಯ ಪ್ರಚಾರವನ್ನು ನಿಯಂತ್ರಿಸಲು ಡಿಎಂಕೆ ಸರಕಾರವು ಮಸೂದೆಯನ್ನು ತಂದಿದೆ. ಈ ಮಸೂದೆ ಅಂಗೀಕಾರವಾಗಿ ಕಾನೂನಾಗಿ ಪರಿವರ್ತನೆಗೊಂಡರೆ, ತಮಿಳುನಾಡು ರಾಜ್ಯದಲ್ಲಿ ಹಿಂದಿ ಹಾಡುಗಳು, ಚಲನಚಿತ್ರಗಳು ಮತ್ತು ಜಾಹೀರಾತುಗಳ ಮೇಲೆ ನಿಷೇಧ ಹೇರಲಾಗುತ್ತದೆ.
🚨 DMK’s Dangerous Drama!
Reports suggest the Tamil Nadu govt is planning a ban on Hindi songs & films! 🎬🚫
This isn’t about language; it’s about division. The DMK is once again stoking anti-Hindi sentiments to inflame regionalism for votes! 😡
When will this separatist… pic.twitter.com/42QAHTPkC9
— Sanatan Prabhat (@SanatanPrabhat) October 15, 2025
೧. ಈ ನಿರ್ಧಾರವು ತಮಿಳು ಭಾಷೆ ಮತ್ತು ರಾಜ್ಯದ ಸಾಂಸ್ಕೃತಿಕ ಗುರುತನ್ನು ರಕ್ಷಿಸಲು ಅವಶ್ಯಕ ಎಂದು ಡಿಎಂಕೆ ಸರಕಾರ ಹೇಳಿದೆ.
೨. ಈ ಮಸೂದೆಯ ಕರಡು ಕುರಿತು ಚರ್ಚಿಸಲು ಸರಕಾರವು ತಜ್ಞರೊಂದಿಗೆ ತುರ್ತು ಸಭೆಯನ್ನು ನಡೆಸಿತ್ತು. ಡಿಎಂಕೆ ಸರಕಾರದ ಪ್ರಕಾರ, ಈ ಉಪಕ್ರಮವು ಕೇಂದ್ರ ಸರಕಾರದಿಂದ ಹಿಂದಿ ಭಾಷೆಯನ್ನು ಹೇರುವ ಪ್ರಯತ್ನದ ವಿರುದ್ಧ ನಡೆಯುತ್ತಿರುವ ದ್ರಾವಿಡ ಚಳುವಳಿಯ ಐತಿಹಾಸಿಕ ನಿಲುವನ್ನು ಬಲಪಡಿಸುತ್ತದೆ.
೩. ಡಿಎಂಕೆ ಹಿರಿಯ ನಾಯಕ ಟಿ.ಕೆ.ಎಸ್. ಇಳಂಗೋವನ ಅವರು, ‘ನಾವು ಸಂವಿಧಾನದ ವಿರುದ್ಧ ಏನನ್ನೂ ಮಾಡುವುದಿಲ್ಲ. ನಾವು ಸಂವಿಧಾನವನ್ನು ಪಾಲಿಸುತ್ತೇವೆ. ನಮ್ಮ ವಿರೋಧ ಹಿಂದಿ ಹೇರಿಕೆಗೆ ಹೊರತು ಹಿಂದಿ ಭಾಷೆಗೆ ಅಲ್ಲ’ ಎಂದು ತಿಳಿಸಿದರು.
೪. ಡಿಎಂಕೆ ಸರಕಾರದ ಈ ನಿರ್ಧಾರದ ಬಗ್ಗೆ ಭಾಜಪ ತೀವ್ರ ಟೀಕೆ ಮಾಡಿದೆ. ಭಾಜಪ ನಾಯಕ ವಿನೋಜ್ ಸೆಲ್ವಂ ಅವರು ಈ ನಿರ್ಧಾರವನ್ನು ‘ಅವಿವೇಕದ’ ನಿರ್ಧಾರ ಎಂದು ಟೀಕಿಸಿದರು. ಭಾಷೆಯನ್ನು ರಾಜಕೀಯ ಸಾಧನವಾಗಿ ಬಳಸಬಾರದು ಎಂದು ಅವರು ಹೇಳಿದರು. ಡಿಎಂಕೆ ಸರಕಾರವು ವಿವಿಧ ನ್ಯಾಯಾಲಯ ಪ್ರಕರಣಗಳಲ್ಲಿನ ವೈಫಲ್ಯಗಳನ್ನು ಮುಚ್ಚಿಹಾಕಲು ಮತ್ತು ಇತರ ವಿವಾದಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಇಂತಹ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತರುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಂಪಾದಕೀಯ ನಿಲುವುತನ್ನ ರಾಜಕೀಯ ಸ್ವಾರ್ಥಕ್ಕಾಗಿ ಇಂತಹ ನಿರ್ಧಾರಗಳನ್ನು ತೆಗೆದುಕೊಂಡು ತಮಿಳು ಜನತೆಯಲ್ಲಿ ಹಿಂದಿ ದ್ವೇಷವನ್ನು ಸೃಷ್ಟಿಸುತ್ತಿರುವ ಡಿಎಂಕೆ ಸರಕಾರ! ಇಂತಹ ಪ್ರತ್ಯೇಕತಾವಾದಿ ಧೋರಣೆಯ ಸರಕಾರದಿಂದ ಸಮಾಜಕ್ಕೆ ಏನು ಪ್ರಯೋಜನವಾಗಲಿದೆ? |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”