ಕೇರಳದ ಕಾನ್ವೆಂಟ್ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿನಿ ಹಿಜಾಬ್ ಧರಿಸಿ ಬಂದಿದ್ದರಿಂದ ಉದ್ವಿಗ್ನತೆ : Kerala Hijab Row

ಶಾಲೆಗೆ 2 ದಿನ ರಜೆ ಘೋಷಣೆ

(ಹಿಜಾಬ್ ಎಂದರೆ ಮುಸ್ಲಿಂ ಮಹಿಳೆಯರು ತಲೆ ಮತ್ತು ಕುತ್ತಿಗೆಯನ್ನು ಮುಚ್ಚಲು ಧರಿಸುವ ವಸ್ತ್ರ)

ಕೊಚ್ಚಿ (ಕೇರಳ) – ಇಲ್ಲಿನ ಪಲ್ಲೂರುಥಿ ಪ್ರದೇಶದಲ್ಲಿರುವ ‘ಸೆಂಟ್ ರೀಟಾ ಪಬ್ಲಿಕ್ ಸ್ಕೂಲ್’ನಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಹಿಜಾಬ್ ಧರಿಸಿದ್ದರಿಂದ ವಿವಾದ ಉಂಟಾಗಿದೆ. ಈ ಕಾರಣದಿಂದಾಗಿ ಶಾಲೆಯು ಅಕ್ಟೋಬರ್ 13 ಮತ್ತು 14 ರಂದು 2 ದಿನಗಳ ರಜೆ ಘೋಷಿಸಿದೆ.

ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಹೆಲೆನಾ ಆರಸಿ ಅವರು ಪತ್ರವೊಂದನ್ನು ಬಿಡುಗಡೆ ಮಾಡಿ,

1. ಒಬ್ಬ ವಿದ್ಯಾರ್ಥಿನಿಯು ಸಮವಸ್ತ್ರದ ಬದಲಿಗೆ ಹಿಜಾಬ್ ಧರಿಸಲು ಪ್ರಾರಂಭಿಸಿದ್ದಳು. ಇದಕ್ಕೆ ಶಾಲಾ ಆಡಳಿತ ಮಂಡಳಿಯು ಆಕ್ಷೇಪ ವ್ಯಕ್ತಪಡಿಸಿ, ಆಕೆಯನ್ನು ಶಾಲೆಯ ಪ್ರವೇಶದ್ವಾರದಲ್ಲಿ ತಡೆದಾಗ, ವಿದ್ಯಾರ್ಥಿನಿಯ ಪೋಷಕರು ಇದು ಧಾರ್ಮಿಕ ಹಕ್ಕು ಎಂದು ಹೇಳಿ ಗದ್ದಲ ಸೃಷ್ಟಿಸಿದ್ದಾರೆ.

2. ವಿದ್ಯಾರ್ಥಿನಿ ಮತ್ತು ಆಕೆಯ ಕುಟುಂಬದ ಒತ್ತಡದಿಂದಾಗಿ ಕೆಲವು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಪರಿಣಾಮವಾಗಿ, ಪೋಷಕ-ಶಿಕ್ಷಕರ ಸಂಘದೊಂದಿಗೆ ಚರ್ಚಿಸಿದ ನಂತರ 2 ದಿನಗಳ ರಜೆ ನೀಡಲು ನಿರ್ಧರಿಸಲಾಯಿತು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದರು.

‘ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ’ದ ವ್ಯಕ್ತಿಗಳಿಂದ ಉದ್ವಿಗ್ನತೆ

ಶಾಲೆಯ ಶಿಕ್ಷಕ-ಪೋಷಕರ ಸಂಘದ ಸದಸ್ಯರಾದ ಜೋಶಿ ಕೈತವಳಪ್ಪಿಲ್ ಅವರು ಮಾತನಾಡಿ, ಕಳೆದ 30 ವರ್ಷಗಳಿಂದ ಶಾಲೆಯಲ್ಲಿ ಒಂದೇ ರೀತಿಯ ಸಮವಸ್ತ್ರವಿದೆ ಮತ್ತು ಎಲ್ಲಾ ಧರ್ಮದ ವಿದ್ಯಾರ್ಥಿಗಳು ಅದನ್ನು ಪಾಲಿಸುತ್ತಾರೆ. ಸಂಬಂಧಿಸಿದ ವಿದ್ಯಾರ್ಥಿನಿ 4 ತಿಂಗಳ ಕಾಲ ಈ ನಿಯಮವನ್ನು ಪಾಲಿಸಿದ್ದಳು; ಆದರೆ ಅಕ್ಟೋಬರ್ 10 ರಿಂದ ಆಕೆ ತಲೆಯನ್ನು ಮುಚ್ಚಲು (ಹಿಜಾಬ್ ಧರಿಸಲು) ಪ್ರಾರಂಭಿಸಿದಳು. ಶಾಲೆ ಇದನ್ನು ನಿರಾಕರಿಸಿದಾಗ, ವಿದ್ಯಾರ್ಥಿನಿಯ ಪೋಷಕರು ಆಕೆಯನ್ನು ತಲೆ ಮುಚ್ಚಿಕೊಂಡು ಬರಲು ಅನುಮತಿಸುವಂತೆ ಒತ್ತಾಯಿಸಿದರು. ಅವರು ಕೆಲವು ಜನರೊಂದಿಗೆ ಶಾಲೆಗೆ ಬಂದು ಚಿತ್ರೀಕರಣ ಮಾಡಿ ಗದ್ದಲ ಮಾಡಲು ಪ್ರಾರಂಭಿಸಿದರು. ಇದರಿಂದ ಮಕ್ಕಳು ಮತ್ತು ಶಿಕ್ಷಕರು ಹೆದರಿದರು; ಆದ್ದರಿಂದ ಶಾಲೆಯನ್ನು ಮುಚ್ಚಬೇಕಾಯಿತು. ‘ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ’ ಎಂಬ ಇಸ್ಲಾಮಿಕ್ ಪಕ್ಷಕ್ಕೆ ಸಂಬಂಧಿಸಿದ ವ್ಯಕ್ತಿಗಳ ಬೆಂಬಲದಿಂದಾಗಿ ಈ ವಿವಾದ ಹೆಚ್ಚಾಗಿದೆ. (ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ಪಕ್ಷವಿದು. ಇದರ ಮೇಲೂ ನಿಷೇಧ ಹೇರುವ ಅವಶ್ಯಕತೆ ಇದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ! – ಸಂಪಾದಕರು)

‘ಹಿಜಾಬ್ ಧರಿಸುವುದು ನಮ್ಮ ಹಕ್ಕು!'(ಅಂತೆ) – ಮಗಳ ತಂದೆ

ವಿದ್ಯಾರ್ಥಿನಿಯ ತಂದೆಯು, ಅವರ ಮಗಳು ಈ ವರ್ಷ ಶಾಲೆಯಲ್ಲಿ ಪ್ರವೇಶ ಪಡೆದಿದ್ದಾಳೆ. ಈ ಹಿಂದೆ, ಶಾಲೆ ಕೇವಲ ತರಗತಿಯಲ್ಲಿ ತಲೆ ಮುಚ್ಚುವುದನ್ನು ನಿಷೇಧಿಸಿತ್ತು; ಆದರೆ ಈಗ ಅದನ್ನು ಪ್ರವೇಶದ್ವಾರದಲ್ಲೇ ನಿರ್ಬಂಧಿಸಲಾಗುತ್ತಿದೆ. ಇದು ಸಮಾನತೆಯ ಮೇಲೆ ಪರಿಣಾಮ ಬೀರುತ್ತದೆ. ಇದು ನಮ್ಮ ಹಕ್ಕು. ಈ ಬಗ್ಗೆ ಜಿಲ್ಲಾ ಶಿಕ್ಷಣಾಧಿಕಾರಿ ಮತ್ತು ಸಂಬಂಧಿಸಿದ ಸಚಿವರಿಗೆ ದೂರು ನೀಡಲಾಗಿದೆ. ಶಾಲೆ ಆಕೆಗೆ ತಲೆ ಮುಚ್ಚಲು ಅನುಮತಿ ನೀಡದಿದ್ದರೆ, ನಾವು ಆಕೆಯನ್ನು ಬೇರೆ ಶಾಲೆಗೆ ಕಳುಹಿಸುತ್ತೇವೆ. (ಕೇರಳ ಪಾಕಿಸ್ತಾನವಲ್ಲ ಎಂದು ಇವರಿಗೆ ಹೇಳುವುದು ಅವಶ್ಯಕವಾಗಿದೆ. ಈ ದೇಶದಲ್ಲಿ ಹಿಜಾಬ್ ಮತ್ತು ಇತರ ಇಸ್ಲಾಮಿಕ್ ವಸ್ತ್ರಗಳನ್ನು ನಿಷೇಧಿಸಿದರೆ, ಅವರು ದೇಶವನ್ನು ಬಿಟ್ಟು ಹೋಗುತ್ತಾರೆಯೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ! – ಸಂಪಾದಕರು)

ಸಂಪಾದಕೀಯ ನಿಲುವು

ಹಕ್ಕುಗಳ ನೆನಪಿನಲ್ಲಿರುವವರಿಗೆ ದೇಶದ ಬಗ್ಗೆ ಕರ್ತವ್ಯಗಳು ಮಾತ್ರ ನೆನಪಾಗುವುದಿಲ್ಲ ಮತ್ತು ಅದರಂತೆ ಅವರು ವರ್ತಿಸುವುದೂ ಇಲ್ಲ! ಭಾರತದ ವಿಭಜನೆ ಧರ್ಮದ ಆಧಾರದ ಮೇಲೆ ನಡೆದಿತ್ತು ಮತ್ತು ಮುಸಲ್ಮಾನರಿಗೆ ಪಾಕಿಸ್ತಾನವನ್ನು ನೀಡಿದ ನಂತರವೂ ಇಲ್ಲಿಯೇ ಉಳಿದವರು ತಮ್ಮ ಹಕ್ಕಿಗಾಗಿ ಪಾಕಿಸ್ತಾನಕ್ಕೆ ಹೋಗಬಹುದು ಎಂದು ಈಗ ಜನರಿಗೆ ಅನಿಸುತ್ತದೆ!