ಮಾಜಿ ಭಾರತೀಯ ಆಡಳಿತಾಧಿಕಾರಿ ಅವಿನಾಶ ಧರ್ಮಾಧಿಕಾರಿ ಅವರಿಂದ ಪ್ರಕರಣ ಬಹಿರಂಗ
(ಗಜವಾ-ಎ-ಹಿಂದ್ ಎಂದರೆ ಭಾರತದ ಇಸ್ಲಾಮೀಕರಣಕ್ಕಾಗಿ ಘೋಷಿಸಲಾದ ಯುದ್ಧ)

ಮುಂಬಯಿ – ಪನವೇಲ್-ನಾಂದೇಡ ಎಕ್ಸ್‌ಪ್ರೆಸ್ ನ ಹವಾನಿಯಂತ್ರಿತ ಬೋಗಿಯ ಶೌಚಾಲಯದ ಗೋಡೆಯ ಮೇಲೆ ‘ಗಜವಾ-ಎ-ಹಿಂದ್ 2047’ ಎಂದು ಬರೆದಿರುವುದನ್ನು ಮಾಜಿ ಭಾರತೀಯ ಆಡಳಿತಾತ್ಮಕ ಅಧಿಕಾರಿ (ಐಎಎಸ್) ಅವಿನಾಶ ಧರ್ಮಾಧಿಕಾರಿ ಅವರಿಗೆ ಕಂಡುಬಂದಿದೆ. ಈ ವಿಚಾರವನ್ನು ಅವರು ‘ಫೇಸ್‌ಬುಕ್’ನಲ್ಲಿ ಬರೆದು ಬಹಿರಂಗಪಡಿಸಿದ್ದಾರೆ. ಈ ಪ್ರಕರಣವು ಅತ್ಯಂತ ಗಂಭೀರ ಮತ್ತು ಕಳವಳಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಅವರು,
1. ದೇಶವು ‘ವಿಕಸಿತ ಭಾರತ 2047 ’ ರ ಕನಸಿನ ಕಡೆಗೆ ಸಾಗುತ್ತಿರುವಾಗ, ಇಂತಹ ಘಟನೆಗಳು ಸಮಾಜದಲ್ಲಿ ಗೊಂದಲ ಮತ್ತು ಅಸುರಕ್ಷತೆಯನ್ನು ನಿರ್ಮಿಸಬಹುದು. ಆದ್ದರಿಂದ, ಈ ಪ್ರಕರಣದ ಬಗ್ಗೆ ರೈಲ್ವೆ ಆಡಳಿತ ಮತ್ತು ಪೊಲೀಸರು ತನಿಖೆ ನಡೆಸಬೇಕು. ಸಾಮಾನ್ಯ ನಾಗರಿಕರು ಕೂಡ ಎಚ್ಚರದಿಂದ ಇರಬೇಕು ಮತ್ತು ಇಂತಹ ಘಟನೆಗಳ ವಿರುದ್ಧ ಧ್ವನಿ ಎತ್ತಬೇಕು.
2. ‘ಉತ್ತಿಷ್ಠತ ಜಾಗ್ರತ ಪ್ರಾಪ್ಯ ವರಾನಿಬೋಧತ |’ (ಏಳಿರಿ, ಎಚ್ಚರಗೊಳ್ಳಿರಿ ಮತ್ತು ಗುರಿ ಮುಟ್ಟುವವರೆಗೆ ನಿಲ್ಲಬೇಡಿ). ದೇಶದ ಏಕತೆ ಮತ್ತು ಸಮೃದ್ಧಿಯ ಗುರಿಯನ್ನು ಸಾಧಿಸಲು ಒಗ್ಗೂಡಿರಿ. ಭಾರತ್ ಮಾತಾ ಕಿ ಜೈ, ಸಮರ್ಥ ಭಾರತ, ಶ್ರೇಷ್ಠ ಭಾರತ.
ಪೋಸ್ಟ್‌ನಲ್ಲಿ ಅವರು ರೈಲ್ವೆ ಆಡಳಿತಕ್ಕೆ, ‘ಇಂತಹ ವಿಷಯಗಳನ್ನು ಪರಿಶೀಲಿಸಲಾಗುತ್ತದೆಯೇ? ಈ ಬಗ್ಗೆ ಸಮಾಜವು ಯಾವ ನಿಲುವನ್ನು ತೆಗೆದುಕೊಳ್ಳಬೇಕು?’ ಎಂದು ಪ್ರಶ್ನಿಸಿದ್ದಾರೆ.
ಸಂಪಾದಕೀಯ ನಿಲುವು
|
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !