
ಮುಂಬಯಿ – ಭಾರತೀಯ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಅವರ ವ್ಯವಸ್ಥಾಪಕ ಸಿಬ್ಬಂದಿಗೆ ಭಯೋತ್ಪಾದಕ ದಾವೂದ್‌ನ ಗ್ಯಾಂಗ್‌ನವರು ಫೆಬ್ರವರಿಯಿಂದ ಏಪ್ರಿಲ್ ಅವಧಿಯಲ್ಲಿ ೫ ಕೋಟಿ ರೂಪಾಯಿಗಳ ಸುಲಿಗೆಗಾಗಿ ೩ ಬಾರಿ ಬೆದರಿಕೆ ಕರೆ ಮಾಡಿದ್ದರು. ಈ ಸಂಬಂಧ ಮುಂಬಯಿ ಪೊಲೀಸರು ಮೊಹಮ್ಮದ್ ದಿಲ್‌ಶಾದ್ ಮತ್ತು ಮೊಹಮ್ಮದ್ ನವೀದ್ ಅವರನ್ನು ಕೆರಿಬಿಯನ್ ದೇಶಗಳಿಂದ (ಕೆರಿಬಿಯನ್ ಸಮುದ್ರದ ಪಕ್ಕದ ದೇಶಗಳು) ಬಂಧಿಸಿದ್ದಾರೆ. ಈ ಅಪರಾಧಿಗಳು ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ ತಿಂಗಳಲ್ಲಿ ಈ ದೇಶಗಳಿಂದ ಈ ಅಪರಾಧಿಗಳನ್ನು ಭಾರತಕ್ಕೆ ಹಸ್ತಾಂತರಿಸಲಾಯಿತು.
ಇದೇ ಗೂಂಡಾಗಳು ಮುಂಬಯಿಯಲ್ಲಿ ಹತ್ಯೆಗೀಡಾದ ಶಾಸಕ ಬಾಬಾ ಸಿದ್ದಿಕಿ ಅವರ ಮಗ ಜೀಶಾನ್ ಸಿದ್ದಿಕಿ ಅವರಿಗೂ ಬೆದರಿಕೆ ಹಾಕಿ ೧೦ ಕೋಟಿ ರೂಪಾಯಿ ಬೇಡಿಕೆಯಿಟ್ಟಿದ್ದರು. ರಿಂಕು ಸಿಂಗ್ ಉತ್ತರ ಪ್ರದೇಶದ ಆಟಗಾರರಾಗಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ ವಿರುದ್ಧ ನಡೆದ ಕ್ರಿಕೆಟ್ ಪಂದ್ಯದಲ್ಲಿ ಕೊನೆಯಲ್ಲಿ ೪ ರನ್ ಗಳಿಸಿ ಭಾರತಕ್ಕೆ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದರು. ೨೦೨೩ ರಲ್ಲಿ ನಡೆದ ಒಂದು ಪಂದ್ಯದಲ್ಲಿ ಅವರು ಒಂದು ಓವರ್‌ನಲ್ಲಿ ೫ ಸಿಕ್ಸರ್‌ಗಳನ್ನು ಹೊಡೆದಿದ್ದರು.
ಸಂಪಾದಕೀಯ ನಿಲುವುಈ ಬೆದರಿಕೆ ನಿಜವಾಗಿಯೂ ಭಯೋತ್ಪಾದಕ ದಾವೂದ್‌ನಿಂದ ಬಂದಿದ್ದರೆ, ದಾವೂದ್‌ನ ಚಟುವಟಿಕೆಗಳು ಇನ್ನೂ ಭಾರತದಲ್ಲಿ ಹೇಗೆ ಮುಂದುವರಿಯುತ್ತಿವೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಸರಕಾರ ದಾವೂದ್ ಮತ್ತು ಅವನ ಗ್ಯಾಂಗ್ ಅನ್ನು ಯಾವಾಗ ನಿರ್ಮೂಲನೆ ಮಾಡುತ್ತದೆ? |
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ