ಸೇನೆಯು ಕೆಲಸವನ್ನು ನಿಲ್ಲಿಸಿ ಭೂಮಿಯನ್ನು ವಶಕ್ಕೆ ಪಡೆಯಿತು !

ಭಾಗ್ಯನಗರ (ತೆಲಂಗಾಣ) – ಇಲ್ಲಿನ ಜುಬಿಲಿ ಹಿಲ್ಸ್ ವಿಧಾನಸಭಾ ಕ್ಷೇತ್ರದ ರೆಹವೋಟ್ ನಗರದಲ್ಲಿ ೨೨ ಸಾವಿರದ ೫೦೦ ಚದರ ಅಡಿ ಭೂಮಿಯನ್ನು ತೆಲಂಗಾಣ ವಕ್ಫ್ ಮಂಡಳಿಯು ವಕ್ಫ್ ಭೂಮಿ ಎಂದು ಘೋಷಿಸಿ ಅಲ್ಲಿ ಕಬ್ರ (ಕಬರಸ್ತಾನ್) ನಿರ್ಮಿಸುವ ಪ್ರಕ್ರಿಯೆ ಪ್ರಾರಂಭಿಸಿತ್ತು; ಆದರೆ ಈ ಭೂಮಿ ಭಾರತೀಯ ರಕ್ಷಣಾ ಪಡೆಯದಾಗಿದ್ದರಿಂದ ಸೇನೆಯು ಈ ಕೆಲಸವನ್ನು ನಿಲ್ಲಿಸಿ ಭೂಮಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಈ ಕ್ಷೇತ್ರದಲ್ಲಿ ಶೀಘ್ರದಲ್ಲಿ ಉಪಚುನಾವಣೆ ನಡೆಯಲಿದ್ದು, ಅದಕ್ಕಾಗಿಯೇ ರಾಜ್ಯದ ಕಾಂಗ್ರೆಸ್ ಸರಕಾರವು ವಕ್ಫ್ ಮಂಡಳಿಗೆ ಕಬ್ರಕ್ಕಾಗಿ ಅನುವೋಟಿ ನೀಡಿತ್ತು.
ಈ ಭೂಮಿ ರಕ್ಷಣಾ ಇಲಾಖೆಯ ಆಸ್ತಿಯಾಗಿದ್ದು, ವಕ್ಫ್ ಮಂಡಳಿಗೆ ಇದರೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸೇನೆಯು ತಿಳಿಸಿದೆ. ಈ ಪ್ರದೇಶದಲ್ಲಿ ಯಾವುದೇ ಅತಿಕ್ರಮಣವನ್ನು ತಡೆಯಲು ಸೇನೆಯು ಕ್ರಮಗಳನ್ನು ಪ್ರಾರಂಭಿಸಿದೆ.

ಕಾಂಗ್ರೆಸ್ ವೋಟಬ್ಯಾಂಕ್ ರಾಜಕೀಯಕ್ಕಾಗಿ ಯಾವುದೇ ಮಟ್ಟಕ್ಕೆ ಇಳಿಯಬಹುದು !
ಜುಬಿಲಿ ಹಿಲ್ಸ್ ಉಪಚುನಾವಣೆಯ ಮೊದಲು ತನ್ನ ವೋಟಬ್ಯಾಂಕನ್ನು ಸಂತುಷ್ಟಪಡಿಸಲು ಕಾಂಗ್ರೆಸ್ ಸರಕಾರವು ಮುಸಲ್ಮಾನರಿಗಾಗಿ ಸೇನೆಯ ಈ ಭೂಮಿಯನ್ನು ನೀಡಿದೆ ಎಂದು ಭಾಜಪ ಹೇಳಿದೆ. ಭೂಮಿಯನ್ನು ವಕ್ಫ್ ಮಂಡಳಿಗೆ ಹಸ್ತಾಂತರಿಸುವುದು, ಸಂಸತ್ತಿನಲ್ಲಿ ವಕ್ಫ್ ಕಾಯ್ದೆಗೆ ವಿರೋಧ ವ್ಯಕ್ತಪಡಿಸುವುದು ವೋಟ್ತು ಈಗ ಸೇನೆಯ ಭೂಮಿಯನ್ನು ಕಬಳಿಸಲು ಪ್ರಯತ್ನಿಸುವುದು, ಈ ಎಲ್ಲ ವಿಷಯಗಳು ಕಾಂಗ್ರೆಸ್ ವೋಟಬ್ಯಾಂಕ್ ರಾಜಕೀಯಕ್ಕಾಗಿ ಯಾವುದೇ ಮಟ್ಟಕ್ಕೆ ಇಳಿಯಬಹುದು ಎಂಬುದನ್ನು ತೋರಿಸುತ್ತವೆ, ಎಂದು ಹೇಳಿದೆ.
ಸಂಪಾದಕೀಯ ನಿಲುವು‘ಕಾಂಗ್ರೆಸ್ ಸರಕಾರ ಎಂದರೆ ಪಾಕಿಸ್ತಾನಿ ಆಡಳಿತ’ ಎಂದು ಪ್ರತಿ ಬಾರಿಯೂ ಸಾಬೀತಾಗುತ್ತದೆ, ಇದನ್ನೇ ಈ ಘಟನೆ ಹೇಳುತ್ತದೆ ! |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”