ಕಟಕ (ಒಡಿಶಾ) ಇಲ್ಲಿ ದುರ್ಗಾಪೂಜಾ ವಿಸರ್ಜನೆ ಮೆರವಣಿಗೆಯ ಮೇಲೆ ಮುಸಲ್ಮಾನರಿಂದ ಕಲ್ಲು ತೂರಾಟ : Durga Puja Stone Pelting

  • ಅಂಗಡಿಗಳ ಧ್ವಂಸ ಮತ್ತು ಬೆಂಕಿ

  • ಪೋಲೀಸರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳ ಮೇಲೂ ಕಲ್ಲು ತೂರಾಟ

  • ೨೫ ಜನರಿಗೆ ಗಾಯ

ಕಟಕ (ಒಡಿಶಾ) – ಇಲ್ಲಿ ಅಕ್ಟೋಬರ್ ೫ ರ ರಾತ್ರಿ ತಡವಾಗಿ ದುರ್ಗಾಪೂಜಾ ವಿಸರ್ಜನೆ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ಕಟಕದ ದರಗಾಬಜಾರ್ ಎಂಬ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಿಂದ ದೇವೀಗರಾ ಬಳಿಯ ನದಿಯ ದಡದ ಕಡೆಗೆ ವಿಸರ್ಜನಾ ಮೆರವಣಿಗೆ ಹೊರಟಿತ್ತು. ಮಧ್ಯರಾತ್ರಿ ಒಂದೂವರೆ ಗಂಟೆಗೆ ಹಾತಿ ಪೋಖರಿ ಪ್ರದೇಶದಲ್ಲಿ ಹಿಂಸಾಚಾರ ನಡೆಯಿತು. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಮೆರವಣಿಗೆಯ ಸಮಯದಲ್ಲಿ ಜೋರಾಗಿ ಹಾಕಿದ್ದ ಸಂಗೀತಕ್ಕೆ ಮುಸಲ್ಮಾನರು ಆಕ್ಷೇಪ ವ್ಯಕ್ತಪಡಿಸಿದರು. ಮುಸಲ್ಮಾನರು ಮೇಲ್ಛಾವಣಿಯಿಂದ ಕಲ್ಲುಗಳು ಮತ್ತು ಬಾಟಲಿಗಳನ್ನು ಎಸೆದರು. ಗಾಯಗೊಂಡವರಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ ಜ್ಞಾನದೇವ್ ಅವರೂ ಸೇರಿದ್ದಾರೆ. ಪೊಲೀಸ್ ಅಧಿಕಾರಿಗಳು ಇಡೀ ನಗರದಲ್ಲಿ ಕರ್ಫ್ಯೂ ಜಾರಿಗೊಳಿಸಿದ್ದಾರೆ. ಇಲ್ಲಿನ ಇಂಟರ್ನೆಟ್ ಸೇವೆಯನ್ನು ಸಹ ಸ್ಥಗಿತಗೊಳಿಸಲಾಗಿದೆ. ಹಿಂಸಾಚಾರದಲ್ಲಿ ೨೫ ಜನರು ಗಾಯಗೊಂಡಿದ್ದು, ಇಲ್ಲಿಯವರೆಗೆ ೬ ಜನರನ್ನು ಬಂಧಿಸಲಾಗಿದೆ.

೧. ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಈ ಸಮಯದಲ್ಲಿ ಅನೇಕ ವಾಹನಗಳು ಮತ್ತು ಅಂಗಡಿಗಳನ್ನು ಒಡೆದುಹಾಕಲಾಯಿತು.

೨. ವಿಶ್ವ ಹಿಂದೂ ಪರಿಷತ್ ಅಕ್ಟೋಬರ್ ೬ ರಂದು ಬಂದ್ಗೆ ಕರೆ ನೀಡಿತ್ತು. ಪದೇ ಪದೇ ಮನವಿ ಮಾಡಿಕೊಂಡರೂ, ವಿಸರ್ಜನಾ ಮೆರವಣಿಗೆಯನ್ನು ಶಾಂತಿಯುತವಾಗಿ ನಡೆಸಲು ಆಡಳಿತವು ವಿಫಲವಾಗಿದೆ ಎಂದು ವಿಹಿಂಪ ವಕ್ತಾರರು ಆರೋಪಿಸಿದರು.

೩. ನಗರದ ಗೌರಿಶಂಕರ್ ಪಾರ್ಕ್ ಬಳಿ ಅನೇಕ ಕಡೆಗಳಲ್ಲಿ ಗಲಭೆಕೋರರು ಬೆಂಕಿ ಹಚ್ಚಿದರು. ಅಗ್ನಿಶಾಮಕ ದಳದ ಅಧಿಕಾರಿಗಳ ಮೇಲೂ ಕಲ್ಲು ತೂರಾಟ ನಡೆಸಲಾಯಿತು.

ದೋಷಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಮಾಝಿ ಅವರ ಭರವಸೆ!

ಮುಖ್ಯಮಂತ್ರಿ ಮೋಹನ ಚರಣ ಮಾಝಿ ಅವರು, ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಕೋಮು ಸೌಹಾರ್ದತೆಯನ್ನು ಹಾಳು ಮಾಡಲು ಪ್ರಯತ್ನಿಸಿರುವ ಆರೋಪವಿದೆ. ದೋಷಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಂಪಾದಕೀಯ ನಿಲುವು

ಹಿಂದೂಗಳ ಧಾರ್ಮಿಕ ಮೆರವಣಿಗೆಗಳ ಮೇಲೆ ಕಲ್ಲು ತೂರಾಟವಾಗಲು ಕಟಕ ಭಾರತದಲ್ಲಿದೆಯೇ ಅಥವಾ ಪಾಕಿಸ್ತಾನದಲ್ಲಿದೆಯೇ? ಹಿಂದೂಗಳು ಅಲ್ಪಸಂಖ್ಯಾತರಾಗಿರುವ ಪಾಕಿಸ್ತಾನ, ಬಾಂಗ್ಲಾದೇಶವಿರಲಿ ಅಥವಾ ಹಿಂದೂಗಳು ಬಹುಸಂಖ್ಯಾತರಾಗಿರುವ ಭಾರತವಿರಲಿ, ಹಿಂದೂಗಳ ಉತ್ಸವಗಳ ಮೇಲೆ ಎಲ್ಲೆಡೆ ದಾಳಿಗಳು ನಡೆಯುತ್ತವೆ. ಈ ಪರಿಸ್ಥಿತಿ ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ!