|

ಮುಂಬಯಿ – ಕೋರೆಗಾಂವ್ ಭೀಮಾ ಗಲಭೆಯನ್ನು ಪ್ರಚೋದಿಸಿದ ಆರೋಪ ಹೊತ್ತಿರುವ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹನಿ ಬಾಬು ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ನಡೆಸಲಾಯಿತು. ಈ ಅರ್ಜಿಯ ಕುರಿತು ಅದರ ಗುಣಮಟ್ಟದ ಆಧಾರದ ಮೇಲೆ ಅಲ್ಲದೆ, ವಿಚಾರಣೆಯಿಲ್ಲದೆ ದೀರ್ಘಕಾಲ ಕಾರಾಗೃಹದಲ್ಲಿ ಇದ್ದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿ ನ್ಯಾಯಮೂರ್ತಿಗಳ ವಿಭಾಗೀಯ ಪೀಠವು ತೀರ್ಪನ್ನು ಕಾಯ್ದಿರಿಸಿದೆ.
ಕೋರೆಗಾಂವ್ ಭೀಮಾ ಗಲಭೆ ಪ್ರಕರಣದಲ್ಲಿ ಎಲ್ಗಾರ್ ಪರಿಷತ್ತಿನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪವನ್ನು ಬಾಬು ಅವರ ಮೇಲೆ ಇದೆ. ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ೨೦೨೦ ರಲ್ಲಿ ಅವರನ್ನು ಬಂಧಿಸಿತ್ತು.
ಬಾಬು ಅವರ ವಕೀಲರ ವಾದ!
ಬಾಬು ಅವರು ಕಳೆದ ೫ ವರ್ಷ ೨ ತಿಂಗಳುಗಳಿಂದ ಕಾರಾಗೃಹದಲ್ಲಿದ್ದಾರೆ. ಅವರ ವಿರುದ್ಧ ಇನ್ನೂ ಆರೋಪಗಳನ್ನೂ ನಿಗದಿಪಡಿಸಲಾಗಿಲ್ಲ. ಆದ್ದರಿಂದ, ವಿಚಾರಣೆಯಿಲ್ಲದೆ ಒಬ್ಬ ವ್ಯಕ್ತಿಯನ್ನು ಕಾರಾಗೃಹದಲ್ಲಿ ಇಡುವುದು, ಆತನ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ, ಎಂದು ಬಾಬು ಅವರ ವಕೀಲರು ವಾದಿಸಿದರು.
ಬಾಬು ಅವರ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿವೆ. ಗಂಭೀರ ಅಪರಾಧಗಳಲ್ಲಿ ಕೇವಲ ದೀರ್ಘಕಾಲ ಕಾರಾಗೃಹದಲ್ಲಿದ್ದ ಆಧಾರದ ಮೇಲೆ ಜಾಮೀನು ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರದ ಪರವಾಗಿ ಹೆಚ್ಚುವರಿ ಮಹಾ ನ್ಯಾಯ ಅಭಿಕರ್ತಾ ಅನಿಲ್ ಸಿಂಗ್ ಅವರು ವಾದಿಸಿದರು ಮತ್ತು ಬಾಬು ಅವರ ಜಾಮೀನು ಅರ್ಜಿಯನ್ನು ವಿರೋಧಿಸಿದರು.
ಸಂಪಾದಕೀಯ ನಿಲುವುಇದೇ ನ್ಯಾಯವು ಹಿಂದೂತ್ವನಿಷ್ಠರ ವಿಚಾರದಲ್ಲಿಯೂ ಅನ್ವಯವಾಗಬೇಕು ಎಂಬುದು ಹಿಂದೂಗಳ ನಿರೀಕ್ಷೆಯಾಗಿದೆ! |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !