‘ಭಾರತ್ ಹಿಂದು ಮುನ್ನಾನಿ’ ಈ ಬಗ್ಗೆ ದೂರು ನೀಡಿ, ಮಸೀದಿಯನ್ನು ಕೆಡವಲು ಆಗ್ರಹ !

ಚೆನ್ನೈ (ತಮಿಳುನಾಡು) – ಇಲ್ಲಿನ ಸ್ಟ್ಯಾನ್ಲಿ ಸರಕಾರಿ ಆಸ್ಪತ್ರೆಯ ಜಮೀನಿನಲ್ಲಿ ಯಾವುದೇ ಅನುಮತಿ ಪಡೆಯದೆ ಎರಡು ಅಂತಸ್ತಿನ ಮಸೀದಿಯನ್ನು ಕಟ್ಟಲಾಗಿದೆ. ಈ ಹಿನ್ನೆಲೆಯಲ್ಲಿ, ಅದನ್ನು ಕೆಡವಬೇಕು ಎಂದು ಭಾರತ್ ಹಿಂದು ಮುನ್ನಾನಿ ಎಂಬ ಹಿಂದುತ್ವನಿಷ್ಠ ಸಂಘಟನೆಯು ಇತ್ತೀಚೆಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಆಸ್ಪತ್ರೆಯು ನಗರದ ರಾಯಪುರಂ ಭಾಗದಲ್ಲಿದೆ ಮತ್ತು ಇಲ್ಲಿನ ಮಸೀದಿ ಹಾಗೂ ದರ್ಗಾಗೆ (ಮುಸಲ್ಮಾನರ ಗೋರಿ) ಮುಸಲ್ಮಾನರು ಪ್ರತಿದಿನ ನಮಾಜ್ ಮಾಡಲು ಬರುತ್ತಾರೆ ಎಂದು ತಮಿಳಿನ ದಿನಪತ್ರಿಕೆ ‘ದಿನಮಲರ್’ ವರದಿ ಮಾಡಿದೆ.
ಸ್ಥಳೀಯ ಹಿಂದುತ್ವನಿಷ್ಠರು ಈ ವಿಷಯದ ಬಗ್ಗೆ ‘ಸನಾತನ ಪ್ರಭಾತ’ಕ್ಕೆ ಮಾಹಿತಿ ನೀಡುತ್ತ, ಮಸೀದಿ ನಿರ್ವಹಣಾ ಮಂಡಳಿಯು ಮಸೀದಿಯ ನವೀಕರಣಕ್ಕಾಗಿ ಆಸ್ಪತ್ರೆ ಆಡಳಿತದಿಂದ ಅನುಮತಿ ಕೇಳಿತ್ತು. ಅನುಮತಿ ಸಿಕ್ಕ ಕೂಡಲೇ, ಅವರು ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಿದರು ಎಂದು ಸ್ಥಳೀಯ ಹಿಂದುಗಳು ಆರೋಪಿಸಿದ್ದಾರೆ. (ಸರಕಾರಿ ಆಸ್ಪತ್ರೆಯ ಜಮೀನಿನಲ್ಲಿ ಅನಧಿಕೃತ ಮಸೀದಿ ಇದ್ದರೂ, ಆಸ್ಪತ್ರೆ ಆಡಳಿತವು ನವೀಕರಣಕ್ಕೆ ಅನುಮತಿ ನೀಡುತ್ತದೆ ಎಂದರೆ, ಇದು ರಾಜಕೀಯ ಷಡ್ಯಂತ್ರವೇ ಅಥವಾ ಮುಸಲ್ಮಾನರ ಪ್ರಭಾವಕ್ಕೆ ಆಡಳಿತ ಮಂಡಳಿ ಒಳಗಾಗಿದೆಯೇ ಎಂದು ಪ್ರಶ್ನಿಸಬೇಕಿದೆ! – ಸಂಪಾದಕರು) ಹಿಂದುಗಳಿಂದ ದೂರು ಬಂದ ನಂತರ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ನಡೆಯುತ್ತಿದ್ದ ನಿರ್ಮಾಣ ಕಾರ್ಯವನ್ನು ನಿಲ್ಲಿಸಲು ಆದೇಶಿಸಿದರು.

‘ಭಾರತ್ ಹಿಂದು ಮುನ್ನಾನಿ’ಯ ಪ್ರಮುಖ ಬೇಡಿಕೆಗಳು
ಈ ಪ್ರಕರಣದಲ್ಲಿ ‘ಭಾರತ್ ಹಿಂದು ಮುನ್ನಾನಿ’ಯ ರಾಜ್ಯ ಕಾರ್ಯದರ್ಶಿ ಕೆ. ದಿಲ್ಲಿಬಾಬು ಅವರು ಚೆನ್ನೈ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಅವರು,
1. ಆಸ್ಪತ್ರೆಗೆ ಸೇರಿದ ಸುಮಾರು 3 ಸಾವಿರ ಚದರ ಅಡಿ ಜಮೀನಿನಲ್ಲಿ ಮಸೀದಿ ನಿರ್ಮಾಣವಾಗಿದೆ. ಈ ಜಾಗವನ್ನು ಮೂಲತಃ ಆಸ್ಪತ್ರೆಯ ಆಮ್ಲಜನಕ ಸಿಲಿಂಡರ್‌ಗಳನ್ನು ಇಡಲು ಬಳಸಲಾಗುತ್ತಿತ್ತು.
2. ಪ್ರತಿದಿನ ಸುಮಾರು 100 ಜನರು ಈ ಮಸೀದಿಗೆ ಬಂದು ಧ್ವನಿವರ್ಧಕಗಳ ಮೂಲಕ ನಮಾಜ್ ಮಾಡುತ್ತಾರೆ.
3. ಮಸೀದಿಗೆ ಬರುವ ಜನರು ತಮ್ಮ ದ್ವಿಚಕ್ರ ವಾಹನಗಳನ್ನು ಆಸ್ಪತ್ರೆಯ ಆವರಣದಲ್ಲಿಯೇ ನಿಲ್ಲಿಸುವುದರಿಂದ ರೋಗಿಗಳು, ಅವರ ಸಂಬಂಧಿಕರು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ತೊಂದರೆಯಾಗುತ್ತಿದೆ. ಯಾರಾದರೂ ಆಕ್ಷೇಪಿಸಿದರೆ, ಅವರು ವೈದ್ಯರು ಮತ್ತು ಸಾಮಾನ್ಯ ಜನರ ಮೇಲೆ ದಾಳಿ ಮಾಡುತ್ತಾರೆ.
4. ಈ ಬಗ್ಗೆ ಹಿಂದೆ ದೂರು ನೀಡಿದಾಗ ನಿರ್ಮಾಣವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಆದರೆ ಈಗ ಮತ್ತೆ ಯಾವುದೇ ಅನುಮತಿ ಇಲ್ಲದೆ ಅನಧಿಕೃತವಾಗಿ ನಿರ್ಮಾಣ ಕಾರ್ಯ ಮುಂದುವರೆದಿದೆ.
5. ಎರಡನೇ ಮಹಡಿಯ ನಿರ್ಮಾಣವು ಪೂರ್ಣಗೊಳ್ಳುವ ಹಂತದಲ್ಲಿದೆ. ಅದಕ್ಕೂ ಮುನ್ನ, ಮಸೀದಿಯ ಸಂಪೂರ್ಣ ಕಟ್ಟಡವನ್ನು ತೆರವುಗೊಳಿಸಿ, ಈ ಜಾಗವನ್ನು ಆಸ್ಪತ್ರೆಯ ಬಳಕೆಗೆ ಮಾತ್ರ ಮೀಸಲಿಡಬೇಕು.
ಸಂಪಾದಕೀಯ ನಿಲುವು
|
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”