|

ಬೆಂಗಳೂರು – ಕರ್ನಾಟಕದಲ್ಲಿನ ಕಾಂಗ್ರೆಸ್ ಸರಕಾರವು ಸಪ್ಟೆಂಬರ್ ೨೨ ರಿಂದ ಅಕ್ಟೋಬರ್ ೭ ವರೆಗೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವ ನಿರ್ಣಯ ತೆಗೆದುಕೊಂಡಿದೆ. ಇದಕ್ಕಾಗಿ ೧ ಲಕ್ಷ ೭೫ ಸಾವಿರ ಶಿಕ್ಷಕರ ನೇಮಕಾತಿ ಮಾಡಲಾಗುವುದು. ಈ ಎಲ್ಲಾ ಪ್ರಕ್ರಿಯೆಗಾಗಿ ೪೨೦ ಕೋಟಿ ರೂಪಾಯಿ ಖರ್ಚಾಗುವುದೆಂದು ಅಂದಾಜಿಸಲಾಗಿದೆ. ಈ ಸಮೀಕ್ಷೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರಕಾರವನ್ನು ಟೀಕಿಸಲಾಗುತ್ತಿದ್ದು, ಹಿಂದೂ ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಲಾಗಿದೆ.
ಸಮೀಕ್ಷೆಯಲ್ಲಿನ ಜಾತಿಯ ಕಾಲಂ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತಿವೆ. ಕಾಂಗ್ರೆಸ್ ಸರಕಾರ ಕ್ರೈಸ್ತ ಧರ್ಮ ಸ್ವೀಕರಿಸುವವರ ಮೂಲ ಹಿಂದೂ ಜಾತಿಯ ಸಹಿತ ‘ಕ್ರಿಶ್ಚಿಯನ್’ ಎಂಬ ಪದ ಸೇರಿಸುವ ವ್ಯವಸ್ಥೆ ಮಾಡಿದೆ. ಉದಾಹರಣೆಗೆ, ಯಾವುದಾದರೂ ಲಿಂಗಾಯತ ಅಥವಾ ಒಕ್ಕಲಿಗ ವ್ಯಕ್ತಿ ಕ್ರೈಸ್ತ ಧರ್ಮ ಸ್ವೀಕರಿಸಿದ್ದರೆ, ಆಗ ಅವನ ವಿವರವನ್ನು ‘ಕ್ರೈಸ್ತ ಲಿಂಗಾಯತ’ ಅಥವಾ ‘ಕ್ರೈಸ್ತ ಒಕ್ಕಲಿಗ’ ಎಂದು ನಮೂದು ಮಾಡಲಾಗುವುದು.
ಈ ಪಟ್ಟಿ ಗೊಂದಲಮಯ ! ಕಾಂಗ್ರೆಸ್ ಸಚಿವ
ಸಚಿವ ಸಂಪುಟದಲ್ಲಿನ ಅನೇಕ ಸಚಿವರು ಹಿಂದುಳಿದ ಆಯೋಗ ತಯಾರಿಸಿರುವ ಜಾತಿಯ ಕಾಲಂಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಪಟ್ಟಿ ಗೊಂದಲಮಯವಾಗಿದ್ದು ಯೋಗ್ಯ ಮಾಹಿತಿ ಯಾವ ಕಾಲಮ್‌ನಲ್ಲಿ ತುಂಬಿಸಬೇಕು ಎಂದು ಜನರಿಗೆ ತಿಳಿಸಿ ಹೇಳಲು ಸಮಯ ಬೇಕಾಗಬಹುದೆಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಧರ್ಮದ ಕಾಲಂನಲ್ಲಿ ಹಿಂದೂಗಳು ಕೇವಲ ಹಿಂದೂ ಎಂದೇ ಬರೆಯಬೇಕು !- ಭಾಜಪ
ಕರ್ನಾಟಕ ಭಾಜಪದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಇವರು ಕಾಂಗ್ರೆಸ್ ನ ಈ ಕ್ರಮವನ್ನು ತೀವ್ರವಾಗಿ ಟೀಕಿಸಿದ್ದಾರೆ. ಸರಕಾರ ೪೭ ನೂತನ ಜಾತಿಯ ಗುಂಪುಗಳನ್ನು ತಯಾರಿಸಿದೆ. ಇದರಿಂದ ಸಮಾಜದಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಇದರಿಂದ ಸಮಾಜದಲ್ಲಿನ ಐಕ್ಯತೆ ಅಶಕ್ತ ಗೊಳ್ಳುವುದು. ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಕೇವಲ ಹಿಂದೂ ಎಂದು ಬರೆಯಬೇಕೆಂದು ಅವರು ರಾಜ್ಯದ ಹಿಂದೂಗಳಿಗೆ ಕರೆ ನೀಡಿದರು.
ಸಮಾಜದಲ್ಲಿ ಅಶಾಂತಿ ನಿರ್ಮಾಣವಾಗಬಹುದು !-ರಾಜ್ಯಪಾಲ
ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅವರು ಕೂಡ ಈ ಪಟ್ಟಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಸಪ್ಟೆಂಬರ್ ೧೬ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಅವರು ‘ಕ್ರಿಶ್ಚನ್’ ಪದ ಹಿಂದುಗಳಲ್ಲಿನ ಜಾತಿಗಳ ಜೊತೆಗೆ ಜೋಡಿಸುವುದು ತಪ್ಪಾಗುವುದು; ಕಾರಣ ಕ್ರೈಸ್ತ ಧರ್ಮದಲ್ಲಿ ಜಾತಿಯ ವರ್ಗೀಕರಣವಿಲ್ಲ. ಸರಕಾರದ ಈ ನಿರ್ಣಯದಿಂದ ಸಮಾಜದಲ್ಲಿ ಅಶಾಂತಿ ನಿರ್ಮಾಣವಾಗಬಹುದು. ಆದ್ದರಿಂದ ಸರಕಾರವು ಇದನ್ನು ಮತ್ತೊಮ್ಮೆ ಯೋಚಿಸಬೇಕು ಎಂದು ಮನವಿ ಮಾಡಿದ್ದರು.
ಜನರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯ ಅಭ್ಯಾಸ ಮಾಡುವುದಕ್ಕಾಗಿ ಸಮೀಕ್ಷೆ ಮಹತ್ವದ್ದು ! -ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಮೀಕ್ಷೆಯ ಪರವಾಗಿ ಮಾತನಾಡಿದ್ದಾರೆ. ಈ ಸಮೀಕ್ಷೆ ಜನರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯ ಅಭ್ಯಾಸ ಮಾಡುವ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂದರು. ಅವರು ಭಾಜಪ ಅನ್ನು ಆರೋಪಿಸುತ್ತಾ, ಈ ಅಂಶಗಳನ್ನು ರಾಜಕಾರಣಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”