
ಆಳಂದಿ (ಪುಣೆ) – ಇಲ್ಲಿನ ಫ್ರೂಟ್‌ವಾಲೆ ಧರ್ಮಶಾಲೆಯಲ್ಲಿ ಸೆಪ್ಟೆಂಬರ್ ೨೦ರಂದು ಬೆಳಿಗ್ಗೆ ೯.೩೦ ರಿಂದ ಸಂಜೆ ೬ರ ವರೆಗೆ ವಾರಕರಿ ಮತ್ತು ಧಾರ್ಮಿಕ ಶಿಕ್ಷಣ ಸಂಸ್ಥೆಗಳ ಸಮ್ಮೇಳನವನ್ನು ಆಯೋಜಿಸಲಾಗಿದೆ. ಸನಾತನ ವಿದ್ಯಾ ಫೌಂಡೇಶನ್, ಹಿಂದೂ ಜನಜಾಗೃತಿ ಸಮಿತಿ, ರಾಷ್ಟ್ರೀಯ ವಾರಕರಿ ಪರಿಷತ್ ಮತ್ತು ಸ್ವರಾಜ್ಯ ಸಂಘ ಇವರ ಸಹಯೋಗದೊಂದಿಗೆ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ. ದೆಹೂ ಮತ್ತು ಆಳಂದಿಯ ವಿವಿಧ ವಾರಕರಿ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳು, ಸವಾಲುಗಳು ಮತ್ತು ಅವುಗಳ ಪರಿಹಾರಗಳು, ಹಾಗೆಯೇ ದೇವರು, ದೇಶ, ಧರ್ಮಗಳ ಮೇಲೆ ನಡೆಯುತ್ತಿರುವ ದಾಳಿಗಳು ಮತ್ತು ಅವುಗಳ ಪರಿಹಾರಗಳ ಬಗ್ಗೆ ಈ ಸಮ್ಮೇಳನದಲ್ಲಿ ಚರ್ಚಿಸಲಾಗುವುದು. ಈ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗಣ್ಯರು ಉಪಸ್ಥಿತರಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಸಮ್ಮೇಳನದಲ್ಲಿ ಮಾರ್ಗದರ್ಶನ ನೀಡುವ ಪ್ರಮುಖ ಭಾಷಣಕಾರರು ಮತ್ತು ಅವರ ವಿಷಯಗಳು!
೧. ಡಾ. ಅಂಕುಶ್ ಅಗರ್ವಾಲ್, ಹಿಂದೂ ಜಾಗರಣ (ವಿಷಯ: ಭಾರತದ ಆಂತರಿಕ ಭದ್ರತೆ, ಸಮಸ್ಯೆಗಳು ಮತ್ತು ಪರಿಹಾರಗಳು)
೨. ಶ್ರೀ. ಅವಿನಾಶ್ ಧರ್ಮಾಧಿಕಾರಿ, ಐ.ಎ.ಎಸ್. (ವಿಷಯ: ಸನಾತನ ಧರ್ಮ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ವಾರಕರಿ ಮತ್ತು ಧಾರ್ಮಿಕ ಶಿಕ್ಷಣ ಸಂಸ್ಥೆಗಳ ಕೊಡುಗೆ ಮತ್ತು ಮಹತ್ವ!)
೩. ಶ್ರೀ. ಸಂದೀಪ ಲೋಹಾರ್ ಮಹಾರಾಜ್ (ವಿಷಯ: ವಾರಕರಿ ಮತ್ತು ಶಿಕ್ಷಣ ಸಂಸ್ಥೆಗಳ ಪ್ರಶ್ನೆಗಳು, ಸವಾಲುಗಳು ಮತ್ತು ಪರಿಹಾರಗಳು)
೪. ಶ್ರೀ. ಬಾಜಿರಾವ್ ಬಂಗರ್ ಮಹಾರಾಜ್ (ವಿಷಯ: ವಾರಕರಿ ಮತ್ತು ಧಾರ್ಮಿಕ ಶಿಕ್ಷಣ ಸಂಸ್ಥೆಗಳ ಪಠ್ಯಕ್ರಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮಹತ್ವ)
೫. ಶ್ರೀ. ರಮೇಶ್ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ (ವಿಷಯ: ಹಿಂದೂ ಧರ್ಮದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ (ಫೇಕ್ ನೆರೆಟಿವ್)
೬. ಶ್ರೀ. ಸುನೀಲ್ ಘನವಟ್, ಹಿಂದೂ ಜನಜಾಗೃತಿ ಸಮಿತಿ, ಸಂಘಟಕರು, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯ (ವಿಷಯ: ವಾರಿಯೊಳಗೆ ಎಡಪಂಥೀಯರು ಮತ್ತು ನಗರ ನಕ್ಸಲರ ನುಸುಳುವಿಕೆ)
ಇದಲ್ಲದೆ, ದೆಹಲಿಯ ಹಿರಿಯ ವಕೀಲರಾದ ಶ್ರೀ. ಅಶ್ವಿನಿ ಉಪಾಧ್ಯಾಯ, ಮಾಜಿ ಧರ್ಮದಾಯ ಆಯುಕ್ತರಾದ ದಿಲೀಪ ದೇಶಮುಖ್, ವಕೀಲೆ ಶ್ರೀಮತಿ ರೋಹಿಣಿ ಪವಾರ್, ಸಿ.ಎ. ರಾಮ್ ಡಾವರೆ ಮತ್ತು ಗುರುವರ್ಯ ಎಚ್.ಬಿ.ಪಿ. ಜ್ಞಾನೇಶ್ವರ ಶಿಂದೆ ಮಹಾರಾಜ್ (ದೊಡ್ಡ ಮಾವುಲಿ), ಗುರುವರ್ಯ ಹ.ಭ.ಪ. ಜ್ಞಾನೇಶ್ವರ ಕದಮ್ ಮಹಾರಾಜ (ಚಿಕ್ಕ ಮಾವುಲಿ), ಹ.ಭ.ಪ. ಸಂಗ್ರಾಮ್ ಬಾಪು ಭಂಡಾರೆ ಸೇರಿದಂತೆ ಇನ್ನಿತರ ಗಣ್ಯರು ಸಮ್ಮೇಳನದಲ್ಲಿ ಉಪಸ್ಥಿತರಿದ್ದು ಮಾರ್ಗದರ್ಶನ ಮಾಡಲಿದ್ದಾರೆ.
ಗುಜರಾತ್ನಲ್ಲಿ ನುಸುಳುಕೋರರ ವಿರುದ್ಧ ‘ಆಪರೇಷನ್ ಡೆಲ್ಟಾ ಹಂಟ್’: 2 ದಿನಗಳಲ್ಲಿ 501 ಬಾಂಗ್ಲಾದೇಶಿ ನಾಗರಿಕರ ಬಂಧನ !
ಕೇರಳಕ್ಕೆ ಮುಂಗಾರು ಮಳೆಯು ಆಗಮನ !
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
ಬರಕತ ಉಲ್ಲಾ ವಿಶ್ವವಿದ್ಯಾಲಯದ ಹೆಸರು ‘ವಾಗ್ದೇವಿ ಭೋಜಪಾಲ ವಿಶ್ವವಿದ್ಯಾಲಯ’ ಎಂದು ಬದಲಾಗಲಿದೆ !
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!