|

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಲಕ್ಷ್ಮಣಪುರಿಯಲ್ಲಿ ೬ ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಆನ್‌ಲೈನ್ ಆಟದಲ್ಲಿ ₹೧೩ ಲಕ್ಷ ಕಳೆದುಕೊಂಡು ನೊಂದಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದ ಕೂಡಲೇ ಮೋಹನಲಾಲ್‌ಗಂಜ್ ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
😔 UP Tragedy | Laxmanpuri (Lucknow) Class 6 boy (14) lost ₹13 lakh to online gaming & died by suicide.
🏦 Bank balance wiped via phone linked to a/c
🎮 Admitted to gaming addiction after questioning
⏳ Hours after parents & teacher warned him, he ended his life
🚫 Despite… pic.twitter.com/nLmmwVOJzc
— Sanatan Prabhat (@SanatanPrabhat) September 16, 2025
೧. ಲಕ್ಷ್ಮಣಪುರಿಯ ಧನುಸಾದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಸುರೇಶಕುಮಾರ್ ಯಾದವ್ ಅವರ ಏಕೈಕ ಪುತ್ರ ಯಶಕುಮಾರ್ (೧೪ ವರ್ಷ) ೬ನೇ ತರಗತಿಯಲ್ಲಿ ಓದುತ್ತಿದ್ದನು.
೨. ಸುರೇಶಕುಮಾರ್ ಯಾದವ್ ಅವರು, ಯೂನಿಯನ್ ಬ್ಯಾಂಕ್‌ನ ಬಿಜನೋರ್ ಶಾಖೆಯಲ್ಲಿ ತಮ್ಮ ಖಾತೆ ಇದೆ ಎಂದು ತಿಳಿಸಿದ್ದಾರೆ. ಸೆಪ್ಟೆಂಬರ್ ೧೫ ರಂದು ಅವರು ಪಾಸ್‌ಬುಕ್ ಅಪ್‌ಡೇಟ್ ಮಾಡಿದಾಗ, ಖಾತೆಯಲ್ಲಿದ್ದ ₹೧೩ ಲಕ್ಷ ಕಡಿಮೆ ಆಗಿರುವುದು ಗಮನಕ್ಕೆ ಬಂದಿದೆ.
೩. ಈ ಬಗ್ಗೆ ವಿಚಾರಿಸಿದಾಗ, ಆನ್‌ಲೈನ್ ಗೇಮಿಂಗ್ ಮೂಲಕ ಹಣ ವರ್ಗಾವಣೆ ಆಗಿರುವುದಾಗಿ ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದಾರೆ. ಮಗ ಆಟ ಆಡಲು ಬಳಸುತ್ತಿದ್ದ ಮೊಬೈಲ್ ಫೋನ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದರಿಂದ ಈ ಹಣ ವರ್ಗಾವಣೆಯಾಗಿದೆ.
೪. ಸುರೇಶಕುಮಾರ್ ಮನೆಗೆ ಬಂದು ಯಶಕುಮಾರ್‌ಗೆ ಹಣ ಕಳೆದುಕೊಂಡಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಆರಂಭದಲ್ಲಿ ಆತ ವಿಷಯ ಮರೆಮಾಚಲು ಯತ್ನಿಸಿದ್ದ, ಆದರೆ ನಂತರ ಆನ್‌ಲೈನ್ ಆಟ ಆಡಿ ಹಣ ಕಳೆದುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆಗ ತಂದೆ ಆತನಿಗೆ ಆ ಆಟವನ್ನು ಆಡದಂತೆ ಎಚ್ಚರಿಕೆ ನೀಡಿದ್ದಾರೆ.
೫. ಅದರನಂತರ ಟ್ಯೂಷನ್ ಶಿಕ್ಷಕರು, ಯಶ್ ಜೊತೆ ಮಾತನಾಡಿ ಅವನಿಗೆ ವಿಷಯ ತಿಳಿ ಹೇಳುವುದಾಗಿ ಹೇಳಿದ್ದು, ಚಿಂತಿಸಬೇಡಿ ಎಂದು ಸುರೇಶಕುಮಾರ್‌ಗೆ ಭರವಸೆ ನೀಡಿದ್ದಾರೆ. ಟ್ಯೂಷನ್ ಮುಗಿದ ನಂತರ, ಯಶ್ ತನ್ನ ಕೋಣೆಗೆ ಹೋಗಿ ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
೬. ಎರಡು ವರ್ಷಗಳ ಹಿಂದೆ, ತಮ್ಮ ಜಮೀನಿನ ಒಂದು ಭಾಗವನ್ನು ಮಾರಿ ಆ ಹಣವನ್ನು ಬ್ಯಾಂಕಿನಲ್ಲಿ ಜಮಾ ಮಾಡಿದ್ದರು ಎಂದು ಸುರೇಶಕುಮಾರ್ ಹೇಳಿದ್ದಾರೆ. ಅವರು ಪೇಂಟಿಂಗ್ ಕೆಲಸ ಮಾಡಿ ತಮ್ಮ ಕುಟುಂಬವನ್ನು ನಿರ್ವಹಿಸುತ್ತಿದ್ದರು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ