ಯಾವುದೇ ಪರಿಸ್ಥಿತಿಯಲ್ಲೂ ಹಲಾಲ್ ವಸಾಹತುಗಳಿಗೆ ಸರಕಾರ ಅನುಮತಿ ನೀಡುವುದಿಲ್ಲ! – ಚಂದ್ರಶೇಖರ್ ಬಾವನ್‌ಕುಳೆ, ಕಂದಾಯ ಸಚಿವರು

(ಹಲಾಲ್ ಎಂದರೆ ಇಸ್ಲಾಂಗೆ ಮಾನ್ಯವಾದುದು)

ಮುಂಬಯಿ – ಹಲಾಲ್ ಜೀವನಶೈಲಿಯನ್ನು ಆಧರಿಸಿದ ವಸಾಹತುಗಳು ಕರ್ಜತ್ ಮತ್ತು ಮೀರಾ ರಸ್ತೆಯಲ್ಲಿ ನಿರ್ಮಾಣವಾಗುತ್ತಿವೆ. ಈ ರೀತಿ ಕಾಲೋನಿ ನಿರ್ಮಿಸುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಸಂದರ್ಭದಲ್ಲೂ ಸರಕಾರ ಇಂತಹ ಕಾಲೋನಿಗಳಿಗೆ ಅನುಮತಿ ನೀಡುವುದಿಲ್ಲ, ಎಂದು ರಾಜ್ಯ ಕಂದಾಯ ಸಚಿವ ಚಂದ್ರಶೇಖರ್ ಬಾವನ್‌ಕುಳೆ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಹಲಾಲ್ ಕಾಲೋನಿಗಳು ಮಹಾರಾಷ್ಟ್ರದಲ್ಲಿ ನಡೆಯುವುದಿಲ್ಲ. ನಾವು ‘ಹಲಾಲ್’ ಎಂಬ ಈ ವ್ಯವಸ್ಥೆಯನ್ನು ಬುಡ ಸಮೇತ ಕಿತ್ತೆಸೆಯುತ್ತೇವೆ. ಇಂತಹ ಯಾವುದೇ ಕಾಲೋನಿಗಳಿಗೆ ಅವಕಾಶ ನೀಡುವುದಿಲ್ಲ. ಈ ವಿಷಯದಲ್ಲಿ ಸಂಬಂಧಪಟ್ಟವರ ವಿರುದ್ಧ ಖಂಡಿತ ಕ್ರಮ ಕೈಗೊಳ್ಳಲಾಗುವುದು. ಹಲಾಲ್ ಕುರಿತು ಯಾವುದೇ ಪ್ರಯತ್ನಗಳು ನಡೆಯುತ್ತಿದ್ದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸರಕಾರದ ನೀತಿಗಳಲ್ಲಿ ಇಂತಹ ಪರಿಕಲ್ಪನೆಗಳಿಗೆ ಯಾವುದೇ ಸ್ಥಾನವಿಲ್ಲ” ಎಂದು ಚಂದ್ರಶೇಖರ್ ಅವರು ಖಡಕ್ ಆಗಿ ಹೇಳಿದ್ದಾರೆ.