
ಚಂಡೀಗಢ (ಪಂಜಾಬ್) – ಪಂಜಾಬ್ ಪ್ರಸ್ತುತ ಧಾರಾಕಾರ ಮಳೆ ಮತ್ತು ಪ್ರವಾಹದಿಂದ ತತ್ತರಿಸುತ್ತಿದೆ. ರಾಜ್ಯ ಸರಕಾರವು ಇಡೀ ರಾಜ್ಯವನ್ನು ವಿಪತ್ತು ಪೀಡಿತ ಎಂದು ಘೋಷಿಸಿದೆ. ಧಾರಾಕಾರ ಮಳೆಯಿಂದಾಗಿ 23 ಜಿಲ್ಲೆಗಳಲ್ಲಿನ 1 ಸಾವಿರದ,400 ಗ್ರಾಮಗಳು ಪ್ರವಾಹವನ್ನು ಎದುರಿಸುತ್ತಿವೆ. ಇದುವರೆಗೆ 30 ಜನರು ಮೃತಪಟ್ಟಿರುವುದು ದೃಢಪಟ್ಟಿದ್ದು, 3 ಜನರು ನಾಪತ್ತೆಯಾಗಿದ್ದಾರೆ. ಪಠಾಣ್‌ಕೋಟ್‌ನಲ್ಲಿ ಅತಿ ಹೆಚ್ಚು ಅಂದರೆ 6 ಜನರು ಮತ್ತು ಲೂಧಿಯಾನದಲ್ಲಿ 4 ಜನರು ಸಾವನ್ನಪ್ಪಿದ್ದಾರೆ. ಅಮೃತಸರ, ಬರ್ನಾಲಾ, ಮಾನ್ಸಾ, ರೂಪನಗರ ಮತ್ತು ಹೋಶಿಯಾರ್‌ಪುರದಲ್ಲಿ ತಲಾ 3 ಜನರು ಮೃತಪಟ್ಟಿದ್ದಾರೆ. ಭಟಿಂಡಾ, ಗುರುದಾಸ್‌ಪುರ, ಪಟಿಯಾಲ, ಮೊಹಾಲಿ ಮತ್ತು ಸಂಗ್ರೂರ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ 324 ಗ್ರಾಮಗಳು, ಅಮೃತಸರದ 135, ಬರ್ನಾಲಾದ 134, ಹೋಶಿಯಾರ್‌ಪುರದ 119 ಮತ್ತು ಕಪುರ್ತಲಾದ 115 ಗ್ರಾಮಗಳು ನೀರಿನಲ್ಲಿ ಮುಳುಗಿವೆ. ಇತರ ಜಿಲ್ಲೆಗಳಲ್ಲಿ ತಲಾ 10 ರಿಂದ 12 ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ. ಪ್ರವಾಹದಿಂದಾಗಿ ಪೀಡಿತ ಜನರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಗುರುದಾಸ್‌ಪುರದಲ್ಲಿ ಮಾತ್ರ 1 ಲಕ್ಷ 45 ಸಾವಿರಕ್ಕೂ ಹೆಚ್ಚು ಮತ್ತು ಅಮೃತಸರದಲ್ಲಿ 1 ಲಕ್ಷ 17 ಸಾವಿರಕ್ಕೂ ಹೆಚ್ಚು ಜನರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಫಿರೋಜ್‌ಪುರ, ಫಾಜಿಲ್ಕಾ ಮತ್ತು ಪಠಾಣ್‌ಕೋಟ್ ಜಿಲ್ಲೆಗಳಲ್ಲಿಯೂ ಸಹ ಸಾವಿರಾರು ಜನರು ಪ್ರವಾಹದಿಂದ ತೊಂದರೆಗೊಳಗಾಗಿದ್ದಾರೆ. ಇದುವರೆಗೂ ಮೂರೂವರೆ ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ತೊಂದರೆಗೆ ಒಳಗಾಗಿದ್ದಾರೆ. ರಕ್ಷಣಾ ಕಾರ್ಯಗಳು ನಡೆಯುತ್ತಿವೆ; ಆದರೆ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟಾಗಿರುವುದರಿಂದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ