|

ಮಂಗಳುರು – ‘ಡೈರಿ ಮಿಲ್ಕ್’ ಕ್ಯಾಡ್ಬರಿ ಚಾಕೊಲೇಟ್‌ನ ಹೊಸ ಪ್ಯಾಕ್ ಮೇಲೆ ಇಂಗ್ಲಿಷ್ ಪದಗಳು ಮತ್ತು ಸಂಭಾಷಣೆಗಳಿಗೆ ಕನ್ನಡ ಅರ್ಥಗಳನ್ನು ಮುದ್ರಿಸಲಾಗಿದೆ. ಚಾಕೋಲೇಟ್ ಕವರ್ ಮೇಲೆ ಕನ್ನಡದಲ್ಲಿ ಪ್ರತಿನಿತ್ಯ ಬಳಸುವ ಸರಳ ಪದಗಳನ್ನು ಇಂಗ್ಲಿಷ್‌ನಲ್ಲೇ ಮುದ್ರಿಸಿ, ಅದರ ಅರ್ಥ ವಿವರಿಸುವ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದೆ. ನೇರವಾಗಿ ಕನ್ನಡ ಪದಗಳನ್ನು ಬಳಸುವುದರ ಬದಲಿಗೆ ಇಂಗ್ಲಿಷ್‌ನಲ್ಲೇ ಕನ್ನಡದ ಪದಗಳನ್ನು ಮುದ್ರಿಸಲಾಗಿದೆ. ಇದು ಸುಲಭವಾಗಿ ಮೆಸೇಜ್‌ನಲ್ಲಿ ಬಳಸುವ ಪದಗಳಂತೆಯೇ ಇವೆ. ಚಾಕೊಲೇಟ್ ಮೇಲೆ “ಸ್ವಲ್ಪ ಸ್ವಲ್ಪ ಕನ್ನಡ” ಎಂದು ಬರೆಯಲಾಗಿದೆ.
ಕನ್ನಡ ಭಾಷಾ ಕಲಿಕೆ ಸುಲಭವಾಗಬೇಕೆಂಬ ಉದ್ದೇಶದಿಂದ, ಜನಪ್ರಿಯ ಡೈರಿ ಮಿಲ್ಕ್ ಚಾಕೊಲೇಟ್ ಕಂಪನಿಯು ಈ ವಿಶಿಷ್ಟ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಪರಭಾಷಿಕರಿಗೆ ಕನ್ನಡ ಭಾಷೆ ಕಲಿಕೆಗೆ ಪ್ರೋತ್ಸಾಹ ನೀಡುವುದು ಇದರ ಉದ್ದೇಶವಾಗಿದೆ. ಕನ್ನಡ ಗೊತ್ತಿಲ್ಲ ಎನ್ನುವವರಿಗೆ ಕನ್ನಡ ಕಲಿಸಲು ಡೈರಿ ಮಿಲ್ಕ್ ಚಾಕೊಲೇಟ್ ಇದೆ ಎಂದು ನನಗೆ ತಿಳಿದಿರಲಿಲ್ಲ, ಇದು ಒಳ್ಳೆಯ ಕೆಲಸ ಎಂದು ಕನ್ನಡಿಗರು ಫಿದಾ ಆಗಿದ್ದಾರೆ. ಈ ಪ್ರಯೋಗವು ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಕನ್ನಡ ಕಲಿಯಲು ಬಯಸುವ ವಲಸಿಗರಿಗೂ ಅನುಕೂಲವಾಗಲಿದೆ.
ಏನೆಲ್ಲ ಕನ್ನಡ ಪದಗಳ ಪಾಠ?
ಧನ್ಯವಾದ (dhanyavada)
ಏನು? (enu)
ಕ್ಷಮಿಸಿ (kshamisi)
ಹೇಗಿದ್ದೀಯಾ? (hegiddiya?)
ಸ್ವಲ್ಪ (swalpa)
ಸಹಾಯ ಬೇಕಾ? (sahaya beka)
ಸಂಜೆ (sanje)
ಬೆಳಿಗ್ಗೆ (beligge)
ರಾತ್ರಿ (ratri)

ಈ ಹಿಂದೆ ಭಾರತದಾದ್ಯಂತ ಭಾಷಾ ವೈವಿಧ್ಯತೆಯನ್ನು ಆಚರಿಸಲು ಕ್ಯಾಡ್ಬರಿ ಡೈರಿ ಮಿಲ್ಕ್ ಕನ್ನಡದಲ್ಲೇ “ಧನ್ಯವಾದಗಳು” ಎಂದು ಮುದ್ರಿಸಿದ್ದ ವಿಶೇಷ ಚಾಕೊಲೇಟ್‌ಗಳನ್ನು ಎಂಟು ವಿಭಿನ್ನ ಭಾಷೆಗಳಲ್ಲಿ ಹೊರತಂದಿತ್ತು. ಇಂಗ್ಲಿಷ್, ಹಿಂದಿ, ಮರಾಠಿ, ಗುಜರಾತಿ, ಬಂಗಾಳಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಚಾಕೊಲೇಟ್ ಗಮನ ಸೆಳೆದಿತ್ತು.
ಸಂಪಾದಕೀಯ ನಿಲುವು
|
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!