‘ಹಿಂದುಳಿದ ವರ್ಗದವರಿಗೆ ಕಾರ್ಪೊರೇಟ್ ಜಗತ್ತಿನಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಳ್ಳಲು 100 ವರ್ಷಗಳು ಬೇಕಾಗಬಹುದು!’

ಬ್ರಾಹ್ಮಣರ ಬಗ್ಗೆ ಪೀಟರ್ ನವಾರೊ ಅವರ ಹೇಳಿಕೆಗೆ ಕಾಂಗ್ರೆಸ್ ಬೆಂಬಲ!

(ಸಾಮಾನ್ಯವಾಗಿ ದೊಡ್ಡದಾದ ಮತ್ತು ಪ್ರಸಿದ್ಧ ಸಂಸ್ಥೆಗಳನ್ನು ‘ಕಾರ್ಪೊರೇಟ್’ ಎಂದು ಕರೆಯಲಾಗುತ್ತದೆ.)

ನವದೆಹಲಿ – ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಾಣಿಜ್ಯ ಸಲಹೆಗಾರ ಪೀಟರ್ ನವರೊ ಅವರು ‘ಭಾರತದ ಬ್ರಾಹ್ಮಣರು ರಷ್ಯಾದ ತೈಲದಿಂದ ಲಾಭಗಳಿಸುತ್ತಾರೆ’ ಎಂದು ವ್ಯಂಗ್ಯವಾದ ಹೇಳಿಕೆ ನೀಡಿದ್ದರು. ಈಗ ಕಾಂಗ್ರೆಸ್ ನಾಯಕ ಉದಿತ್ ರಾಜ್ ಅವರು ಆ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ರಾಜ್ ಅವರು ‘ಎಕ್ಸ್’ನಲ್ಲಿ ಈ ಕುರಿತು ಪೋಸ್ಟ್ ಮಾಡಿ, ನವರೊ ಅವರ ಹೇಳಿಕೆಯು ವಾಸ್ತವಿಕವಾಗಿ ಯೋಗ್ಯವಾಗಿದೆ. ಭಾರತದಲ್ಲಿ ಕೇವಲ ಉನ್ನತ ಜಾತಿಯ ವ್ಯಾಪಾರಿಗಳು ರಷ್ಯಾದಿಂದ ತೈಲ ಖರೀದಿಸಿ ಲಾಭ ಗಳಿಸುತ್ತಿದ್ದಾರೆ ಮತ್ತು ಸಾಮಾನ್ಯ ಭಾರತೀಯರಿಗೆ ಅದರ ಯಾವುದೇ ಪ್ರಯೋಜನ ಸಿಗುತ್ತಿಲ್ಲ. ಹಿಂದುಳಿದ ಜಾತಿಗಳು ಮತ್ತು ದಲಿತರಿಗೆ ‘ಕಾರ್ಪೊರೇಟ್’ ಜಗತ್ತಿನಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಳ್ಳಲು ಇನ್ನೂ 100 ವರ್ಷಗಳು ಬೇಕಾಗಬಹುದು ಎಂದು ರಾಜ್ ಹೇಳಿದ್ದಾರೆ.

ಸಂಪಾದಕೀಯ ನಿಲುವು

  • ಹಿಂದೂಗಳ ನಡುವೆ ಬಿರುಕು ಮೂಡಿಸಲು ಯತ್ನಿಸುತ್ತಿರುವ ಕಾಂಗ್ರೆಸ್‌ನ ದುಷ್ಟ ಯೋಜನೆಗೆ, ಈಗ ಹಿಂದೂಗಳು ಒಗ್ಗೂಡಿ ತಡೆಯೊಡ್ಡಬೇಕು!
  • ಹಿಂದುಳಿದ ವರ್ಗಗಳ ಬಗ್ಗೆ ಕಾಂಗ್ರೆಸ್‌ನ ಸಲ್ಲದ ಕಾಳಜಿ! ಈ ಜಾತಿಗಳ ಬಗ್ಗೆ ಕಾಂಗ್ರೆಸ್‌ಗೆ ನಿಜವಾಗಿಯೂ ಇಷ್ಟೊಂದು ಕಾಳಜಿ ಇದ್ದಿದ್ದರೆ, 6 ದಶಕಗಳ ಆಡಳಿತಾವಧಿಯಲ್ಲಿ ಅವರ ಪರಿಸ್ಥಿತಿ ಸುಧಾರಿಸಲು ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ ಏಕೆ?