
ಕೊಲಕಾತಾ – ಬಂಗಾಳದ ಉರ್ದು ಅಕಾಡೆಮಿಯಲ್ಲಿ ನಡೆಯಬೇಕಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಜಾವೇದ್ ಅಖ್ತರ್ ಅವರನ್ನು ಆಹ್ವಾನಿಸಲಾಗಿತ್ತು; ಆದರೆ, ‘ಜಮಿಯತ್ ಉಲೆಮಾ-ಎ-ಹಿಂದ್’ ವಿರೋಧ ವ್ಯಕ್ತಪಡಿಸಿದ ನಂತರ ಈ ಕಾರ್ಯಕ್ರಮವನ್ನೇ ರದ್ದುಗೊಳಿಸಲಾಯಿತು. ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ಸಚಿವರಾದ ಸಿದ್ಧಿಕುಲ್ಲಾ ಚೌಧರಿ ಅವರ ಆದೇಶದ ಮೇರೆಗೆ ಈ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಜಮಿಯತ್ ಉಲೆಮಾ-ಎ-ಹಿಂದ್, ಜಾವೇದ್ ಅಖ್ತರ್ ಅವರ ಆಹ್ವಾನವನ್ನು ವಿರೋಧಿಸಿ ಪತ್ರ ಬರೆದಿತ್ತು. (ತೃಣಮೂಲ ಕಾಂಗ್ರೆಸ್‌ನ ಮತಾಂಧತೆ ಇದರಿಂದ ಕಂಡು ಬರುತ್ತದೆ! ಜಾವೇದ್ ಅಖ್ತರ್ ಅವರನ್ನು ಸುಧಾರಣಾವಾದಿ ಮುಸ್ಲಿಂ ಎಂದು ಪರಿಗಣಿಸಲಾಗಿದೆ. ಮತಾಂಧ ಚಟುವಟಿಕೆಗಳಲ್ಲಿ ತೊಡಗಿರುವ ಜಮಿಯತ್ ಉಲೆಮಾ-ಎ-ಹಿಂದ್‌ನ ಕಟ್ಟರವಾದಿ ಚಟುವಟಿಕೆಗಳ ಬಗ್ಗೆ ಅವರಿಗೆ ಏನು ಹೇಳಬೇಕಾಗಿದೆ? – ಸಂಪಾದಕರು) ಪತ್ರದಲ್ಲಿ, ಜಾವೇದ್ ಅಖ್ತರ್ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಅಲ್ಪಸಂಖ್ಯಾತ ಸಮುದಾಯಕ್ಕೆ ನೋವಾಗಬಹುದು. ಜಾವೇದ್ ಅಖ್ತರ್ ಈ ಹಿಂದೆ ಇಸ್ಲಾಂ ಬಗ್ಗೆ ಅವಮಾನಕರ ಹೇಳಿಕೆಗಳನ್ನು ನೀಡಿದ್ದಾರೆ. ಆದ್ದರಿಂದ ಅಲ್ಪಸಂಖ್ಯಾತ ಸಮುದಾಯದವರ ಮನಸ್ಸಿನಲ್ಲಿ ಅವರ ಬಗ್ಗೆ ಕೋಪವಿದೆ ಎಂದು ತಿಳಿಸಲಾಗಿದೆ.
ಸಂಪಾದಕೀಯ ನಿಲುವುಈಗ ಅಭಿವ್ಯಕ್ತಿ ಸ್ವಾತಂತ್ರ್ಯದವರು ಈ ವಿಷಯದ ಬಗ್ಗೆ ಯಾಕೆ ಸುಮ್ಮನಿದ್ದಾರೆ? |
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
Mathura, Vrindavan : ಮಥುರಾ-ಬೃಂದಾವನ: ಬಹಿರಂಗ ಚರ್ಚೆಗೆ ಕರೆ ನೀಡಿದ ಯೋಗಿ ಆದಿತ್ಯನಾಥ್