|

ಗೋಕರ್ಣ – ‘ಪ್ರಜ್ಞಾಪುರಿ ಜ್ಞಾನಪೀಠ ಟ್ರಸ್ಟ್, ಅಕ್ಕಲಕೋಟ’ ವತಿಯಿಂದ ಆಯೋಜಿಸಲ್ಪಟ್ಟ ‘ಗೋಕರ್ಣ ಶಿಬಿರ 2025’ ಆಗಸ್ಟ್ 20ರಿಂದ 22ರವರೆಗೆ ನೆರವೇರಿತು. ಈ ಶಿಬಿರದಲ್ಲಿ ‘ಪ್ರಜ್ಞಾಪುರಿ ಪ್ರಶಸ್ತಿ’ ವಿತರಣೆ ಸಮಾರಂಭ ಆಗಸ್ಟ್ 22ರಂದು ನಡೆಯಿತು. ಈ ಪ್ರಶಸ್ತಿಯನ್ನು ಪುಣೆಯ ಶ್ರೀ. ಅಕ್ಷಯ ಅರ್ಜುನ ಪಾರ್ಗೆ, ಮುಂಬಯಿನ ಶ್ರೀ. ರಾಮನಾಥ ಕಿಸನರಾವ್ ಸೋನವಣೆ, ಮುಂಬಯಿನ ಶ್ರೀ. ಆನಂದೀಪ್ರಸಾದ ಅನಂತ ಕರಂಬೆಳ್ಕರ್ (ಗುರುಜಿ) ಮತ್ತು ಪುಣೆಯ ಸೌ. ಶುಭಾಂಗಿ ಅತುಲ್ ಚವ್ಹಾಣ ಇವರಿಗೆ ಹಿಂದು ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಅವರ ಹಸ್ತದಿಂದ ಪ್ರದಾನ ಮಾಡಲಾಯಿತು. ಈ ಕಾರ್ಯಕ್ರಮ ಗೋಕರ್ಣದ ಗೋದಾವರಿ ಇಂಟರ್ನ್ಯಾಷನಲ್ ಹೋಟೆಲ್‌ನಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಶ್ರೀ ದತ್ತಸ್ವಾಮಿ ಆಧ್ಯಾತ್ಮಿಕ ಗುರುಪೀಠ, ಅಕ್ಕಲಕೋಟ (ನಿರ್ಮಾಣ ಹಂತದ) ಪೀಠಾಸನ ಧರ್ಮಾಧಿಕಾರಿ ಶ್ರೀ. ಪ್ರಸಾದ ಪಂಡಿತ (ಗುರುಜಿ), ‘ಪ್ರಜ್ಞಾಪುರಿ ಟ್ರಸ್ಟ್’ನ ಮಾಜಿ ಮುಖ್ಯ ವಿಶ್ವಸ್ತ ಶ್ರೀ. ಸಂತೋಷ ಸಾಠೆ, ಸಂಸ್ಥೆಯ ವಿಶ್ವಸ್ತೆ ಸೌ. ವರ್ಷಾ ಪ್ರಸಾದ್ ಪಂಡಿತ, ಖೇಡ್ (ಪುಣೆ ಜಿಲ್ಲೆ) ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿರ್ದೇಶಕ ಶ್ರೀ. ಅನುರಾಗ ಜೈದ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ‘ಪ್ರಜ್ಞಾಪುರಿ ಜ್ಞಾನಪೀಠ ಟ್ರಸ್ಟ್’ನ ಅನೇಕ ಸಾಧಕರು, ಸಾಧಿಕೆಯರು ಮತ್ತು ಹಿಂದು ಧರ್ಮನಿಷ್ಠರು ಪಾಲ್ಗೊಂಡಿದ್ದರು.
ಗೋಕರ್ಣದ ಶ್ರೀ ಮಹಾಗಣಪತಿ, ಆತ್ಮಲಿಂಗ ದರ್ಶನದ ಅಂಗವಾಗಿ ಎಲ್ಲಾ ಮಹಾಬಾಧಾ ದೋಷ ನಿವಾರಣೆಗೆ, ಹಾಗೂ ಹಿಂದು ರಾಷ್ಟ್ರ ಸ್ಥಾಪನೆ ಕಾರ್ಯದಲ್ಲಿನ ಸೂಕ್ಷ್ಮ ಅಡಚಣೆಗಳನ್ನು ನಿವಾರಣೆ ಮಾಡುವ ಉದ್ದೇಶದಿಂದ ಪಾಪ ಪರಿಹಾರಾರ್ಥ ಹೇಮಾದ್ರಿ ಸಂಕಲ್ಪ, ಪ್ರಾಯಶ್ಚಿತ್ತ ತಿಳ(ಎಳ್ಳು)ಹೊಮ, ಶ್ರೀ ಬಗಲಾಮುಖಿ ಜಪ ಮಹಾಸಂಕಲ್ಪ, ತಂತ್ರ ವಟುಕಭೈರವ, ಉಚ್ಚಾಟನ ಮತ್ತು ಸುದರ್ಶನ ಯಾಗ, ಶ್ರೀ ವಲ್ಲಭ ಗಣಪತಿ ಯಾಗ, ಸಮೃದ್ಧಿ ಯಾಗಗಳನ್ನು ನೆರವೇರಿಸಲಾಯಿತು. ಹಿಂದು ರಾಷ್ಟ್ರ ಸ್ಥಾಪನೆ ಕಾರ್ಯದಲ್ಲಿನ ಸೂಕ್ಷ್ಮ ಅಡಚಣೆ ನಿವಾರಣೆಗೆ ಕೇರಳ–ಕರ್ನಾಟಕ ಪದ್ಧತಿಯ ಅಷ್ಟಮಂಗಳ ಚಿಂತನ್, ಆಶ್ಲೇಷಾ ಬಲಿ ಹಾಗೂ ಗೋಕರ್ಣ ಮಹಾಬಲೇಶ್ವರ (ಆತ್ಮಲಿಂಗ) ದೇವಾಲಯದಲ್ಲಿ ಸದ್ಗುರು ಡಾ. ಚಾರುದತ್ತ ಪಿಂಗಳೆ ಅವರ ಹಸ್ತದಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ದೀರ್ಘಾಯುಷ್ಯಕ್ಕಾಗಿ ಏಕಾದಶನಿ ರುದ್ರಾಭಿಷೇಕ ಪ್ರಾರ್ಥನೆ ನಡೆಯಿತು. ಅದೇ ರೀತಿಯಲ್ಲಿ ಕೇರಳ–ಕರ್ನಾಟಕ ತಾಂತ್ರಿಕ ಪುರೋಹಿತರು ಮತ್ತು ಮಹಾರಾಷ್ಟ್ರದ ಸಾತ್ವಿಕ ವೇದಿಕ ಪುರೋಹಿತರಿಂದ ಶ್ರೀ ಬಗಲಾಮುಖಿ ಜಪ ಮಹಾಸಂಕಲ್ಪದನ್ವಯ ಅನುಷ್ಠಾನ ಹಾಗೂ ಮಹಾಪೂರ್ಣಾಹುತಿ ನೆರವೇರಿಸಲಾಯಿತು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”