
ಕೊಲಕಾತಾ (ಬಂಗಾಳ) – ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಸಿನ ಸಂಸದೆ ಮಹುವಾ ಮೊಯಿತ್ರಾ ಅವರು ಮಾತನಾಡಿ, ‘ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರ ತಲೆ ಕತ್ತರಿಸಿ ಅದನ್ನು ಫಲಕದ ಮೇಲೆ ಇಟ್ಟು ಜನರಿಗೆ ತೋರಿಸಬೇಕು’ ಎಂದು ಕಿಡಿ ಕಾರಿದ್ದಾರೆ. ಈ ವರ್ಷದ ಆರಂಭದಿಂದಲೂ ಮೋದಿ ಸರಕಾರವು ಭಾರತದಲ್ಲಿ ನೆಲೆಸಿರುವ ರೋಹಿಂಗ್ಯಾ ಮತ್ತು ಬಾಂಗ್ಲಾದೇಶದ ಅಕ್ರಮ ನುಸುಳುಕೋರರನ್ನು ಹೊರಹಾಕಲು ‘ಆಪರೇಷನ್ ಪುಶ್‌ಬ್ಯಾಕ್’ ಅನ್ನು ಪ್ರಾರಂಭಿಸಿತ್ತು. ಅದರ ಹಿನ್ನೆಲೆಯಲ್ಲಿ ಮೊಯಿತ್ರಾ ಅವರು ಮಾತನಾಡುತ್ತಿದ್ದರು. ಅಕ್ರಮ ವಲಸಿಗರಿಗೆ ಪಶ್ಚಿಮ ಬಂಗಾಳವು ಅತ್ಯಂತ ಸುಲಭ ಮಾರ್ಗವಾಗಿದೆ ಎಂಬುದನ್ನು ಅವರು ಅಲ್ಲಗಳೆದರು.
ಮೊಯಿತ್ರಾ ಅವರು ಮುಂದುವರಿದು ಹೇಳಿದ್ದೇನೆಂದರೆ…,
1. ನಮ್ಮ ಗಡಿಗಳನ್ನು ರಕ್ಷಿಸುವವರು ಯಾರೂ ಇಲ್ಲವೇ? ಇತರ ದೇಶಗಳ ಲಕ್ಷಾಂತರ-ಕೋಟಿಗಟ್ಟಲೆ ಜನರು ಭಾರತವನ್ನು ಪ್ರವೇಶಿಸುತ್ತಿದ್ದಾರೆ. ಒಂದು ವೇಳೆ ಅವರು ನಮ್ಮ ತಾಯಂದಿರು -ಸಹೋದರಿಯರ ಮೇಲೆ ಕಣ್ಣಿಟ್ಟಿದ್ದರೆ, ನಮ್ಮ ಭೂಮಿಯನ್ನು ವಶಪಡಿಸಿಕೊಳ್ಳುತ್ತಿದ್ದರೆ, ಮೊದಲು ಅಮಿತ್ ಶಾ ಅವರ ತಲೆ ಕತ್ತರಿಸಿ ಫಲಕದ ಮೇಲೆ ಇಡಬೇಕು.
“Amit Shah’s head should be cut off and put on the table” – Mahua Moitra, Trinamool Congress MP pic.twitter.com/MeDsBNyiJy
— BJP West Bengal (@BJP4Bengal) August 29, 2025
2. ಅಕ್ರಮ ನುಸುಳುವಿಕೆಯನ್ನು ತಡೆಯದಿರುವುದು ಗೃಹಮಂತ್ರಿಗಳ ವೈಫಲ್ಯವಾಗಿದೆ.
3. ಸ್ಥಳೀಯ ಜನರು ಗಡಿ ಭದ್ರತಾ ದಳದ ಸೈನಿಕರಿಗೆ ಹೆದರುತ್ತಾರೆ. ಬಂಗಾಳದಲ್ಲಿ ಯಾರೂ ಅಕ್ರಮವಾಗಿ ಪ್ರವೇಶಿಸುತ್ತಿರುವುದು ನಮಗೆ ಕಾಣಿಸುತ್ತಿಲ್ಲ.
ಸಂಪಾದಕೀಯ ನಿಲುವುಭಾರತದಲ್ಲಿ ಪ್ರಜಾಪ್ರಭುತ್ವ ಇರುವುದರಿಂದ ಯಾರೂ ಯಾರ ಮೇಲೆಯೂ ಟೀಕಿಸಬಹುದು; ಆದರೆ ಟೀಕಿಸುವಾಗ ಮೊಯಿತ್ರಾ ಅವರು ಉಪಯೋಗಿಸಿದ ಭಾಷೆ, ಅದೂ ಕೂಡ ಕೇಂದ್ರ ಗೃಹಮಂತ್ರಿಗಳ ಬಗ್ಗೆ, ಇದು ದ್ವೇಷಪೂರಿತ ಮತ್ತು ಖಂಡನೀಯವಾಗಿದೆ. ಇಂತಹ ಜನರಿಂದ ಕೂಡಿರುವ ಪಕ್ಷ ಒಂದು ರಾಜ್ಯದಲ್ಲಿ ಅಧಿಕಾರದಲ್ಲಿರುವುದು ನಾಚಿಕೆಗೇಡಿನ ವಿಷಯವಾಗಿದೆ. |
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !