ಅಮೆರಿಕಾದ ಆಮದು ಸುಂಕದ ಬಗ್ಗೆ ಯೋಗಋಷಿ ರಾಮದೇವ್ ಬಾಬಾ ಅವರಿಂದ ಭಾರತೀಯರಿಗೆ ಕರೆ!

ನವದೆಹಲಿ – ಅಮೆರಿಕಾದ ಕಂಪನಿಗಳು ಮತ್ತು ಅವುಗಳ ಉತ್ಪನ್ನಗಳನ್ನು ಬಹಿಷ್ಕರಿಸಿ. ಯಾವುದೇ ಭಾರತೀಯನು ಪೆಪ್ಸಿ, ಕೋಕಾ ಕೋಲಾ ಕುಡಿಯಬಾರದು; ಕೆ.ಎಫ್.ಸಿ. ಮತ್ತು ಮೆಕ್‌ಡೊನಾಲ್ಡ್ಸ್‌ಗೆ ಆಹಾರ ತಿನ್ನಲು ಹೋಗಲೇಬಾರದು. ಈ ಎಲ್ಲಾ ಕಂಪನಿಗಳು ಮತ್ತು ಅವುಗಳ ಉತ್ಪನ್ನಗಳ ಮೇಲೆ ಈ ರೀತಿ ಬಹಿಷ್ಕಾರ ಹಾಕಿ, ಅಮೆರಿಕಾದಲ್ಲಿ ಅಲ್ಲೋಲ ಕಲ್ಲೋಲವಾಗಬೇಕು. ಅಲ್ಲಿ ಹಣದುಬ್ಬರ ಎಷ್ಟೊಂದು ಹೆಚ್ಚಾಗಬೇಕು ಅಂದರೆ, ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಾವಾಗಿಯೇ ಭಾರತದ ಮೇಲಿನ ಆಮದು ಸುಂಕವನ್ನು ಹಿಂತೆಗೆದುಕೊಳ್ಳುತ್ತಾರೆ, ಎಂದು ಯೋಗಋಷಿ ರಾಮದೇವ್ ಬಾಬಾ ಪ್ರತಿಕ್ರಿಯಿಸಿದ್ದಾರೆ. ಅಮೆರಿಕಾವು ಭಾರತದ ಮೇಲೆ 50% ಆಮದು ಸುಂಕವನ್ನು ವಿಧಿಸಿದ ನಂತರ ಅವರು ಹೇಳಿದ್ದಾರೆ. ‘ಅಮೆರಿಕಾ ಈ ರಾಜಕೀಯ ಗೂಂಡಾಗಿರಿಯನ್ನು ಪ್ರಾರಂಭಿಸಿದೆ’ ಎಂದು ಯೋಗಋಷಿ ರಾಮದೇವ್ ಬಾಬಾ ಹೇಳಿದ್ದಾರೆ.
ಅವರು ಮಾತು ಮುಂದುವರೆಸಿ, ಯಾವುದೇ ಸವಾಲುಗಳಿಗೆ ಭಾರತವು ಹೆದರಬಾರದು. ಬದಲಿಗೆ ನಾವು ಆ ಸವಾಲುಗಳನ್ನು ಎದುರಿಸಬೇಕು ಎಂದು ರಾಮದೇವ್ ಬಾಬಾ ಹೇಳಿದರು. ಭಾರತವು ಈ ಸವಾಲನ್ನು ಸಮರ್ಥವಾಗಿ ಎದುರಿಸಬಲ್ಲದು. ಇಂದು ನಮ್ಮ ಬಳಿ ಬಹಿಷ್ಕಾರ ಹಾಕುವ ಅವಕಾಶವೂ ಇದೆ. ಭಾರತವು ದುರ್ಬಲ ದೇಶವಲ್ಲ. ಭಾರತದ ಜೊತೆ ದಾದಾಗಿರಿ ನಡೆಸಿ ಟ್ರಂಪ್ ದೊಡ್ಡ ತಪ್ಪು ಮಾಡಿದ್ದಾರೆ. ಅಮೆರಿಕಾವನ್ನು ಒಂದು ಸಭ್ಯ ದೇಶವೆಂದು ಪರಿಗಣಿಸಲಾಗಿತ್ತು; ಆದರೆ ಟ್ರಂಪ್ ಎಲ್ಲಾ ಮೌಲ್ಯಗಳನ್ನು ನಾಶಪಡಿಸಿದರು. ಟ್ರಂಪ್ ಉಸರವಳ್ಳಿಯಂತೆ ಬಣ್ಣ ಬದಲಾಯಿಸುತ್ತಿದ್ದಾರೆ.
ಸಂಪಾದಕೀಯ ನಿಲುವು
|
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!