‘ಪಾಂಡುರಗನಿಗೆ ಮಾಂಸಾಹಾರ ನಡೆಯುತ್ತದೆ’ ಎಂಬ ಸುಪ್ರಿಯಾ ಸುಳೆಯವರ ಹೇಳಿಕೆಯ ಪ್ರಕರಣ

ಮುಂಬಯಿ – ಶರದ್ ಚಂದ್ರ ಪವಾರ್ ಬಣದ ಸಂಸದೆ ಸುಪ್ರಿಯಾ ಸುಳೆ ಅವರು ‘ನಾನು ಮಾಂಸಾಹಾರ ಸೇವಿಸುವುದು ನನ್ನ ಪಾಂಡುರಂಗನಿಗೆ ನಡೆಯುತ್ತದೆ, ನಿಮಗೆ ಏನು ಸಮಸ್ಯೆ?’ ಎಂದು ಹೇಳಿದ್ದನ್ನು ಭಾಜಪ ತೀವ್ರವಾಗಿ ವಿರೋಧಿಸಿ ಟೀಕಿಸಿದೆ. ‘ಪೀಳಿಗೆಗಳಿಂದಲೂ ಶಾಕಾಹಾರದ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿರುವ ವಾರಕರಿಗಳ ಆರಾಧ್ಯ ದೈವವಾದ ಪಾಂಡುರಂಗನಿಗೆ ಮಾಂಸಾಹಾರ ಸ್ವೀಕಾರಾರ್ಹ’ ಎಂದು ಹೇಳುವುದು ಮೂರ್ಖತನವಾಗಿದೆ. ನಿಮಗೆ ವಾರಕರಿ ಸಂಪ್ರದಾಯವನ್ನು ಗೌರವಿಸಲು ಸಾಧ್ಯವಾಗದಿದ್ದರೆ, ಕನಿಷ್ಠ ಅದನ್ನು ಅವಮಾನಿಸಬೇಡಿ; ಇನ್ನು ಮೌಲಾನಾ ಶರದ್ ಪವಾರ್ ಅವರ ಮಗಳಿಂದ ಬೇರೆ ಏನನ್ನು ನಿರೀಕ್ಷಿಸಲು ಸಾಧ್ಯ?’ ಎಂದು ಭಾಜಪ ಆಧ್ಯಾತ್ಮಿಕ ಘಟಕದ ಮುಖ್ಯಸ್ಥ ತುಷಾರ್ ಭೋಸ್ಲೆ ಅವರು ಸುಪ್ರಿಯಾ ಸುಳೆ ಅವರನ್ನು ಟೀಕಿಸಿದ್ದಾರೆ.
ಸುಪ್ರಿಯಾ ಸುಳೆ ಅವರ ಹೇಳಿಕೆಯ ಕುರಿತು ರಾಜ್ಯದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, “ಇದಕ್ಕೆ ನಾನು ಉತ್ತರ ನೀಡುವುದಿಲ್ಲ. ಮಹಾರಾಷ್ಟ್ರದ ಎಲ್ಲಾ ವಾರಕರಿಗಳು ಇದಕ್ಕೆ ಉತ್ತರ ನೀಡುತ್ತಾರೆ” ಎಂದು ಹೇಳಿದ್ದಾರೆ. ಈ ವಿಷಯದ ಬಗ್ಗೆ ಭಾಜಪ ಶಾಸಕ ಪ್ರವೀಣ್ ದರೆಕರ್ ಅವರು, “ಯಾರು ಏನು ಬೇಕಾದರೂ ತಿನ್ನಬಹುದು, ಅದಕ್ಕೆ ಯಾವುದೇ ನಿರ್ಬಂಧವಿಲ್ಲ. ನಮ್ಮ ಮಹಾರಾಷ್ಟ್ರ ವಾರಕರಿ ಸಂಪ್ರದಾಯಕ್ಕೆ ಸೇರಿದ್ದು. ಸುಪ್ರಿಯಾ ಸುಳೆ ಅವರಿಗೆ ಈ ರೀತಿಯ ಮಾತುಗಳು ಶೋಭೆ ತರುವುದಿಲ್ಲ” ಎಂದು ಹೇಳಿದ್ದಾರೆ.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !