ಮುಂಜಾನೆ ಕಿಟಕಿಯಿಂದ ಮನೆಯೊಳಗೆ ಪ್ರವೇಶಿಸಿದ ಆತ್ಮವೆಂದರೆ ವಾಸ್ತುಪುರುಷವಾಗಿತ್ತು !

ನಟಿ ಪ್ರಿಯಾ ಬಾಪಟ್ ಅವರ ಅನುಭವ

ಮುಂಬಯಿ – “ಒಮ್ಮೆ ನಾನು ನನ್ನ ದಾದರ ಮನೆಯಲ್ಲಿ ಕಿಟಕಿಯಿಂದ ಒಂದು ಆತ್ಮ ಒಳಗೆ ಪ್ರವೇಶಿಸುವುದನ್ನು ಗಮನಿಸಿದೆ. ಅದು ಸುಮ್ಮನೆ ಸುತ್ತಮುತ್ತ ನೋಡುತ್ತಿತ್ತು, ಬೇರೇನೂ ಮಾಡುತ್ತಿರಲಿಲ್ಲ. ಮನೆಯಲ್ಲಿ ನನಗೆ ಗೆಜ್ಜೆಗಳ ಝಣ್-ಝಣ್ ಶಬ್ದ ಕೇಳಿಸುತ್ತಿತ್ತು. ಆ ಶಬ್ದ ನಿಧಾನವಾಗಿ ನನ್ನ ತಾಯಿ-ತಂದೆಯ ಕೋಣೆಯ ಕಡೆಗೆ ಹೋಯಿತು. ನಾನು ತುಂಬಾ ಹೆದರುತ್ತೇನೆ. ಆದರೆ ಆ ಸಮಯದಲ್ಲಿ ನನಗೆ ಸ್ವಲ್ಪವೂ ಭಯವಾಗಲಿಲ್ಲ. ನನಗೆ ಆ ಶಬ್ದ ಮುಂದಕ್ಕೆ ಹೋಗುತ್ತಿರುವ ಅನುಭವವಾಯಿತು. ತಾಯಿ-ತಂದೆಯ ಕೋಣೆಯ ಬಳಿ ಹೋದ ನಂತರ ಶಬ್ದ ನಿಂತಿತು. ಸ್ವಲ್ಪ ಸಮಯದ ನಂತರ ಮತ್ತೆ ಶಬ್ದ ಬಂತು ಮತ್ತು ಎಲ್ಲವೂ ಶಾಂತವಾಯಿತು. ಈ ಘಟನೆ ಮುಂಜಾನೆ 3-4 ಗಂಟೆ ಸುಮಾರಿಗೆ ನಡೆಯಿತು. ನಾನು ಬೆಳಿಗ್ಗೆ ಈ ವಿಷಯವನ್ನು ತಾಯಿ-ತಂದೆಗೆ ಹೇಳುತ್ತೇನೆ ಎಂದು ಯೋಚಿಸಿದೆ; ಆದರೆ ನಂತರ ಅವರೇ ನನಗೆ, ‘ಯಾರೋ ನಮ್ಮ ಪಕ್ಕದಲ್ಲಿ ಬಂದು ಕುಳಿತಂತಾಯಿತು. ಆ ವ್ಯಕ್ತಿ ನಂತರ ಹೊರಟು ಹೋದರು’ ಎಂದು ಹೇಳಿದರು. ಆ ವ್ಯಕ್ತಿ ವಾಸ್ತುಪುರುಷ ಆಗಿದ್ದರು. ಕೊಂಕಣದಲ್ಲಿ ಇದರ ಬಗ್ಗೆ ಮಾತನಾಡುತ್ತಾರೆ” ಎಂದು ನಟಿ ಪ್ರಿಯಾ ಬಾಪಟ ಹೇಳಿದ್ದಾರೆ. ಅವರು ‘ಅಂಧೇರಾ’ ಎಂಬ ವೆಬ್ ಸೀರೀಸ್‌ ನಲ್ಲಿ ನಟಿಸಿದ್ದಾರೆ. ಅದರ ಹಿನ್ನೆಲೆಯಲ್ಲಿ ನೀಡಿದ ಒಂದು ಸಂದರ್ಶನದಲ್ಲಿ ಅವರು ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಅವರ ಈ ಅನುಭವದ ಬಗ್ಗೆ ಕೆಲವರು ಅವರನ್ನು ಬೆಂಬಲಿಸಿದರೆ, ಇನ್ನೂ ಕೆಲವರು ಅವರು ಪ್ರಚಾರಕ್ಕಾಗಿ ಹೀಗೆ ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ಸಂಪಾದಕೀಯ ನಿಲುವು

ಇದರ ಬಗ್ಗೆ ಪ್ರಿಯಾ ಬಾಪಟ್ ಅವರನ್ನು ಟೀಕಿಸುವ ಬದಲು, ಅವರಿಗೆ ಆದ ಅನುಭವದ ಬಗ್ಗೆ ಅಧ್ಯಯನ ಮಾಡಿದರೆ ವೈಚಾರಿಕ ವಾದಿಗಳಿಗೆ ಒಳ್ಳೆಯದಾಗಬಹುದು!