
ನವದೆಹಲಿ – ಭಾರತ-ಬಾಂಗ್ಲಾದೇಶ ಅಂತರರಾಷ್ಟ್ರೀಯ ಗಡಿಯಲ್ಲಿ ಪದೇ ಪದೇ ನುಸುಳುಕೋರರ ಘಟನೆಗಳು ನಡೆಯುತ್ತವೆ. ಆದರೆ, ಈಗ ಬಾಂಗ್ಲಾದೇಶದ ಗಡಿ ಭದ್ರತಾ ಪಡೆಯಾದ ‘ಬಾರ್ಡರ್ ಗಾರ್ಡ್ ಬಾಂಗ್ಲಾದೇಶ’ದ ಇಬ್ಬರು ಸೈನಿಕರು ಭಾರತದ ಗಡಿಯೊಳಗೆ ನುಸುಳಿದ್ದಾರೆ. ಈ ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ.
1. ತ್ರಿಪುರದ ಸಿಪಾಹಿಜಲಾ ಜಿಲ್ಲೆಯ ಮಧುಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಕಾಮಠಾನಾ ಗ್ರಾಮದಲ್ಲಿ, ಭಾರತೀಯ ಗಡಿ ಭದ್ರತಾ ಪಡೆಯು (BSF) ‘ಬಾರ್ಡರ್ ಗಾರ್ಡ್ ಬಾಂಗ್ಲಾದೇಶ’ದ ಒಬ್ಬ ಸಶಸ್ತ್ರ ಸೈನಿಕನನ್ನು ಬಂಧಿಸಿದೆ. ಅವನು ಅಕ್ರಮವಾಗಿ ಭಾರತದ ಗಡಿಯೊಳಗೆ ಪ್ರವೇಶಿಸಿದ್ದನು. ಬಂಧಿತ ಸೈನಿಕನ ಹೆಸರು ಮಹಮ್ಮದ್ ಮಿರಾಜ ಇಸ್ಲಾಮ ಮತ್ತು ಅವನು ಬಾಂಗ್ಲಾದೇಶದ ಬ್ರಹ್ಮಣಬರಿಯಾ ಜಿಲ್ಲೆಯ ಮದಲಾದಲ್ಲಿ ನಿಯೋಜಿಸಲಾದ ಈ ಗಾರ್ಡ್‌ನ 60ನೇ ಬೆಟಾಲಿಯನ್ ಸದಸ್ಯನಾಗಿದ್ದಾನೆ.
2. ಮಿರಾಜ ಇಸ್ಲಾಮ್ ಮತ್ತೊಬ್ಬ ಸೈನಿಕನೊಂದಿಗೆ ಗಡಿ ಗೇಟ್ ಸಂಖ್ಯೆ 136-137 ಮೂಲಕ ಸುಮಾರು 100 ಮೀಟರ್ ಭಾರತದ ಭೂಮಿಯೊಳಗೆ ನುಸುಳಿ ಹತ್ತಿರದ ಚಹಾ ತೋಟದತ್ತ ಸಾಗಿದ್ದನು. ಆದರೆ, ಜಾಗರೂಕ ಭಾರತೀಯ ಸೈನಿಕರು ಅವರ ಚಲನವಲನವನ್ನು ಗಮನಿಸಿ ಮಿರಾಜನನ್ನು ಬಂಧಿಸಿದರು. ಅವನ ಜೊತೆಗಿದ್ದ ಮತ್ತೊಬ್ಬ ಸೈನಿಕ ಬಾಂಗ್ಲಾದೇಶದ ಗಡಿಯೊಳಗೆ ಪರಾರಿಯಾಗಿದ್ದಾನೆ. ಪ್ರಸ್ತುತ, ಬಂಧಿತ ಸೈನಿಕನ ವಿಚಾರಣೆ ಕಾಮಠಾನಾ ಬೇಸ್ ನಲ್ಲಿ ನಡೆಯುತ್ತಿದೆ. ಅಧಿಕಾರಿಗಳು, ಅವನು ಶಸ್ತ್ರಸಜ್ಜಿತನಾಗಿದ್ದನು ಮತ್ತು ಅವನ ಉದ್ದೇಶ ಏನಾಗಿತ್ತು ಎಂಬುದನ್ನು ಕಂಡುಹಿಡಿಯಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಎರಡೂ ಪಡೆಗಳ ಅಧಿಕಾರಿಗಳ ನಡುವೆ ಚರ್ಚೆ
ಈ ಘಟನೆಯ ಬಗ್ಗೆ ಗಡಿ ಭದ್ರತಾ ಪಡೆ ಮತ್ತು ‘ಬಾರ್ಡರ್ ಗಾರ್ಡ್ ಬಾಂಗ್ಲಾದೇಶ’ದ ಕಮಾಂಡೆಂಟ್ ಮಟ್ಟದಲ್ಲಿ ದೂರವಾಣಿ ಮೂಲಕ ಚರ್ಚೆ ನಡೆದಿದೆ. ಈ ವಿಷಯಕ್ಕೆ ಪರಿಹಾರ ಕಂಡುಕೊಳ್ಳಲು ‘ಫ್ಲಾಗ್ ಮೀಟಿಂಗ್’ ನಡೆಯುವ ಸಾಧ್ಯತೆಯಿದೆ.
ಸಂಪಾದಕೀಯ ನಿಲುವುಇದುವರೆಗೆ ಕಳ್ಳಸಾಗಣೆದಾರರು ಮತ್ತು ಬಾಂಗ್ಲಾದೇಶದ ನುಸುಳುಕೋರರು ಭಾರತವನ್ನು ಪ್ರವೇಶಿಸುತ್ತಿದ್ದರು; ಆದರೆ, ಈಗ ಬಾಂಗ್ಲಾದೇಶದ ಸೈನಿಕರೂ ನುಸುಳುತ್ತಿರುವುದು, ಬಾಂಗ್ಲಾದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಯಿಂದಾಗಿ ಭಾರತಕ್ಕೆ ಅಪಾಯದ ಸೂಚನೆಯಾಗಿದೆ. ಈ ಘಟನೆಯನ್ನು ಗಮನದಲ್ಲಿಟ್ಟುಕೊಂಡು, ಭಾರತವು ಬಾಂಗ್ಲಾದೇಶದ ವಿಷಯದಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮತ್ತು ಕಾರ್ಯಪ್ರವೃತ್ತವಾಗುವುದು ಅಗತ್ಯವಾಗಿದೆ. ಇಲ್ಲದಿದ್ದರೆ, ದೇಶವು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದರೆ ಆಶ್ಚರ್ಯಪಡಬಾರದು! |
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!