ತೆಲಂಗಾಣ ತೊರೆಯುವಂತೆ ಸ್ಥಳೀಯರಿಂದ ಮಾರ್ವಾಡಿ ಹಿಂದೂ ವ್ಯಾಪಾರಿಗಳಿಗೆ ಒತ್ತಾಯ ! – Protest Against Marwadi

  • ಮಾರ್ವಾಡಿಗಳು ಕಡಿಮೆ ದರದ ವಸ್ತುಗಳನ್ನು ಮಾರುತ್ತಿದ್ದರಿಂದ ತೆಲಂಗಾಣಾ ಕೋಮುವಾದಿಗಳಿಂದ ವಿವಾದ ಸೃಷ್ಟಿಸುವ ಪ್ರಯತ್ನ !

  • ಮುಸ್ಲಿಂ ವ್ಯಾಪಾರಿಗಳಿಗೆ ಲಾಭವಾಗುವಂತೆ ವಿರೋಧಿಸಲಾಗುತ್ತಿದೆ ಎಂದು ಭಾಜಪದಿಂದ ಆರೋಪ

ಭಾಗ್ಯನಗರ (ತೆಲಂಗಾಣ) – ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಅಮನಗಲ್ಲು ಪ್ರದೇಶದಲ್ಲಿ ಸ್ಥಳೀಯ ವ್ಯಾಪಾರಿಗಳು ಮಾರ್ವಾಡಿ ವ್ಯಾಪಾರಿಗಳನ್ನು ನಿಷೇಧಿಸುವುದಾಗಿ ಘೋಷಿಸಿದ ನಂತರ ರಾಜ್ಯದಲ್ಲಿ ವಿವಾದ ಸೃಷ್ಟಿಯಾಗಿದೆ. ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುವುದು, ಸ್ಥಳೀಯ ವ್ಯಾಪಾರವನ್ನು ನಿಯಂತ್ರಿಸುವುದು ಮತ್ತು ಉದ್ಯೋಗಾವಕಾಶಗಳನ್ನು ಕಡಿಮೆ ಮಾಡುವುದು ಹೀಗೆ ಅವರ ಮೇಲೆ ಆರೋಪಗಳನ್ನು ಮಾಡಲಾಗಿದೆ. ಮಾರ್ವಾಡಿಗಳು ತಮ್ಮ ಅಂಗಡಿಗಳಲ್ಲಿ ಶೇಕಡ 50 ರಷ್ಟು ನಕಲಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆಂದು ಸಹ ದೂರು ನೀಡಲಾಗಿದೆ. ಕೆಲವು ಕಡೆಗಳಲ್ಲಿ ಮಾರ್ವಾಡಿಗಳ ಮೇಲೆ ಹಲ್ಲೆ ನಡೆದ ಘಟನೆಗಳೂ ವರದಿಯಾಗಿವೆ. ಭಾಜಪ ಈ ನಿಷೇಧವನ್ನು ವಿರೋಧಿಸಿದೆ, ಆದರೆ ಭಾಗ್ಯನಗರದ ಪ್ರಖರ ಹಿಂದುತ್ವನಿಷ್ಠ ಶಾಸಕರು ಇದು ಹಿಂದೂ ವಿರೋಧಿ ಪಿತೂರಿ ಎಂದು ಆರೋಪಿಸಿದ್ದಾರೆ.

ಮಾರ್ವಾಡಿಗಳನ್ನು ವಿರೋಧಿಸುವವರು ರೋಹಿಂಗ್ಯಾಗಳ ಬಗ್ಗೆ ಮೌನ ! – ಕೇಂದ್ರ ಸಚಿವ ಬಂಡಿ ಸಂಜಯ ಕುಮಾರ

ಕೇಂದ್ರ ಸಚಿವರು ಮತ್ತು ಭಾಜಪ ನಾಯಕರಾದ ಬಂಡಿ ಸಂಜಯ ಕುಮಾರ ಅವರು ಈ ವಿರೋಧದ ಹಿಂದೆ ಆಡಳಿತಾರೂಢ ಕಾಂಗ್ರೆಸ್, ಭಾರತ ರಾಷ್ಟ್ರ ಸಮಿತಿ ಮತ್ತು ಎ.ಐ.ಎಮ್.ಐ.ಎಮ್. (ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ – ಅಖಿಲ ಭಾರತ ಮುಸ್ಲಿಂ ಏಕತಾ ಸಂಘ) ಇವೆ ಎಂದು ಆರೋಪಿಸಿದ್ದಾರೆ. ಅವರು, ಇಲ್ಲಿ ಅಕ್ರಮವಾಗಿ ವಾಸಿಸುವ ಮತ್ತು ಸಮಾಜಕ್ಕೆ ಅಪಾಯಕಾರಿಯಾದ ರೋಹಿಂಗ್ಯಾಗಳ ಬಗ್ಗೆ ವಿರೋಧಿಸುವವರು ಮೌನವಾಗಿದ್ದಾರೆ; ಆದರೆ ಅವರು ತೆಲಂಗಾಣದ ಆರ್ಥಿಕತೆಯನ್ನು ಬಲಪಡಿಸಲು ಕೊಡುಗೆ ನೀಡಿರುವ ಮತ್ತು ರಾಜ್ಯವನ್ನು ಎಂದಿಗೂ ಲೂಟಿ ಮಾಡದ ಮಾರ್ವಾಡಿ ಸಮುದಾಯವನ್ನು ಗುರಿಯಾಗಿಸಿಕೊಂಡಿದ್ದಾರೆ. ಅಂತಹ ಮಾರ್ವಾಡಿ ಸಮುದಾಯವನ್ನು ವಿರೋಧಿಸುವುದು ನಾಚಿಕೆಗೇಡಿನ ಸಂಗತಿ. ಭಾಗ್ಯನಗರದ ಹಳೆ ಭಾಗವು ಐ.ಎಸ್.ಐ. (ಪಾಕಿಸ್ತಾನದ ಇಂಟರ್ ಸರ್ವಿಸ್ ಇಂಟೆಲಿಜೆನ್ಸ್ – ಆಂತರಿಕ ಗುಪ್ತಚರ ಸಂಸ್ಥೆ) ತಾಣಗಳಾಗಿವೆ ಮತ್ತು ಇಲ್ಲಿ ಅನೇಕ ರೋಹಿಂಗ್ಯಾಗಳು ಅಡಗಿಕೊಂಡಿದ್ದಾರೆ. ಕೆಲವು ವಿಶೇಷ ವ್ಯವಹಾರಗಳನ್ನು ಕೆಲವು ನಿರ್ದಿಷ್ಟ ಜನರಿಂದ ಕಸಿದುಕೊಳ್ಳಲಾಗಿದೆ. ‘ನಯೀಮ್ ಮಟನ್ ಶಾಪ್’ ಮತ್ತು ‘ಸಲೀಂ ಡ್ರೈಕ್ಲೀನಿಂಗ್ ಶಾಪ್’ ಎಂಬ ಹೆಸರುಗಳು ಇದಕ್ಕೆ ಸಾಕ್ಷಿ. ಹಿಂದೂ ಖಟಿಕ್ ಸಮುದಾಯ (ಮಾಂಸ ಮಾರಾಟ ಅಂಗಡಿಗಳು) ಮತ್ತು ಪಾರಿಟ್ ಸಮುದಾಯ (ಬಟ್ಟೆ ಒಗೆಯುವುದು) ತೊಡಗಿಸಿಕೊಂಡಿದ್ದ ಕೆಲಸಗಳು ಈಗ ಒಂದು ನಿರ್ದಿಷ್ಟ ವರ್ಗದ (ಮುಸ್ಲಿಮರ) ಕೈಗೆ ಸೇರಿವೆ. ಈ ವಿಷಯದ ಬಗ್ಗೆ ಈ ಜನರು ಏಕೆ ಮೌನವಾಗಿದ್ದಾರೆ? ಮಾರ್ವಾಡಿ ಸಮುದಾಯವು ಎಂದಿಗೂ ಅಧಿಕಾರಕ್ಕೆ ಆಸೆಪಟ್ಟಿಲ್ಲ, ಬದಲಾಗಿ ರಾಜ್ಯದ ಪ್ರಗತಿಯಲ್ಲಿ ಪಾಲುದಾರರಾಗಿದ್ದಾರೆ, ಹಾಗಾಗಿ ಅವರು ತೆಲಂಗಾಣವನ್ನು ಏಕೆ ಬಿಡಬೇಕು?

ಮಾರ್ವಾಡಿ ಸಮುದಾಯದ ಘನತೆಗೆ ಧಕ್ಕೆ ತರುವವರನ್ನು ಸುಮ್ಮನೆ ಬಿಡುವುದಿಲ್ಲ! – ಟಿ. ರಾಜಾ ಸಿಂಗ್

ಶಾಸಕ ಟಿ. ರಾಜಾ ಸಿಂಗ್ ಅವರು, ಮಾರ್ವಾಡಿ ಸಮುದಾಯದ ಘನತೆಗೆ ಧಕ್ಕೆ ತರಲು ಪ್ರಯತ್ನಿಸುವವರನ್ನು ನಾವು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದರು. ಅಂತಹ ಜನರನ್ನು ಕಾನೂನಿನ ಅಡಿಯಲ್ಲಿ ಜೈಲಿಗೆ ಕಳುಹಿಸಲಾಗುವುದು. ಮಾರ್ವಾಡಿ, ಗುಜರಾತಿ ಮತ್ತು ರಾಜಸ್ಥಾನಿ ಸಮುದಾಯಗಳು ತೆಲಂಗಾಣದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.

ಅವರ ಪೂರ್ವಜರು ಇಲ್ಲಿಯೇ ಹುಟ್ಟಿ ಇಲ್ಲಿಯೇ ನೆಲೆಸಿದ್ದಾರೆ. ಈ ಸಮುದಾಯಗಳು ಶ್ರಮಪಟ್ಟು ತಮ್ಮ ವ್ಯಾಪಾರವನ್ನು ಬೆಳೆಸಿದ್ದಾರೆ. ಇಂದು ಅವರು ರಾಜ್ಯದ ಆರ್ಥಿಕತೆಯನ್ನು ಬಲಪಡಿಸುವ ಪ್ರಮುಖ ಸ್ತಂಭಗಳಾಗಿವೆ. ಇತ್ತೀಚೆಗೆ ಕೆಲವು ಜನರು ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಅವರ ಘನತೆಗೆ ಧಕ್ಕೆ ತರಲು ಪಿತೂರಿ ನಡೆಸುತ್ತಿದ್ದಾರೆ. ಇದು ಸಂಪೂರ್ಣವಾಗಿ ತಪ್ಪು ಮತ್ತು ಇದನ್ನು ಎಂದಿಗೂ ಸ್ವೀಕರಿಸುವುದಿಲ್ಲ, ಎಂದು ಹೇಳಿದರು.

ಸಂಪಾದಕೀಯ ನಿಲುವು

ಒಂದು ವೇಳೆ ಮುಸ್ಲಿಮರ ಲಾಭಕ್ಕಾಗಿ ಮಾರ್ವಾಡಿ ಹಿಂದೂಗಳನ್ನು ಈ ರೀತಿ ವಿರೋಧಿಸಲಾಗುತ್ತಿದ್ದರೆ, ಹಿಂದೂಗಳು ಅದಕ್ಕೆ ತಕ್ಕ ಉತ್ತರ ನೀಡಲು ಕಾನೂನುಬದ್ಧ ಮಾರ್ಗವನ್ನು ಆರಿಸಿಕೊಳ್ಳಬೇಕು!