ಧಾರಾಕಾರ ಮಳೆಯಿಂದ ದುರಂತ

ಮುಂಬಯಿ – ವಿಕ್ರೋಳಿಯ ಪಾರ್ಕ್‌ಸೈಟ್ ಪ್ರದೇಶದಲ್ಲಿರುವ ಜನಕಲ್ಯಾಣ್ ಕಟ್ಟಡದ ಆವರಣದಲ್ಲಿ ಭೂಕುಸಿತ ಸಂಭವಿಸಿ ಸುರೇಶ್ ಮಿಶ್ರಾ (50 ವರ್ಷ) ಮತ್ತು ಶಾಲು ಮಿಶ್ರಾ (19 ವರ್ಷ) ಎಂಬ ತಂದೆ-ಮಗಳು ಮೃತಪಟ್ಟಿದ್ದಾರೆ. ಇನ್ನು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದ ಈ ದುರಂತ ಸಂಭವಿಸಿದೆ. ವಿಕ್ರೋಳಿಯ ಪಾರ್ಕ್‌ಸೈಟ್ ಪ್ರದೇಶದಲ್ಲಿ ಎತ್ತರದ ಬೆಟ್ಟದ ಮೇಲೆ ಚಿಕ್ಕ ಮನೆಗಳನ್ನು ನಿರ್ಮಿಸಲಾಗಿದೆ. ರಾತ್ರಿ 1.30ರ ಸುಮಾರಿಗೆ ಜನರು ನಿದ್ರೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಭೂಕುಸಿತ ಸಂಭವಿಸಿದೆ. ಇದರಿಂದ ಸಮೀಪದ ಮನೆಯೊಂದು ಕುಸಿದು ಮೇಲಿನ ದುರಂತ ಸಂಭವಿಸಿದೆ.
ಡೊಂಬಿವಲಿಯಲ್ಲಿ 45 ವರ್ಷ ಹಳೆಯ ಕಟ್ಟಡ ಕುಸಿತ!

ಡೊಂಬಿವಲಿಯ ಗುಪ್ತೆ ರಸ್ತೆಯಲ್ಲಿರುವ ಸೀಮಂತಿನಿ ಎಂಬ ಕಟ್ಟಡ ರಾತ್ರಿ ಇದ್ದಕ್ಕಿದ್ದಂತೆ ಕುಸಿಯಿತು. ಕಟ್ಟಡದಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಎಚ್ಚೆತ್ತ ನಿವಾಸಿಗಳು ತಕ್ಷಣ ಕಟ್ಟಡವನ್ನು ಖಾಲಿ ಮಾಡಿದರು. ಹೀಗಾಗಿ ದೊಡ್ಡ ದುರಂತ ತಪ್ಪಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಕಟ್ಟಡವು 45 ವರ್ಷ ಹಳೆಯದು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!