|

ಮುಂಬಯಿ – ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ, ಉಗ್ರ ನಿಗ್ರಹ ದಳದ ಅಧಿಕಾರಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನ ಭಾಗವತ ಅವರನ್ನು ಬಂಧಿಸಲು ನನಗೆ ಸೂಚಿಸಿದ್ದರು. ದಳದ ಅಧಿಕಾರಿಗಳು ಸಂಘದ ಪ್ರಚಾರಕರಾದ ಸಂದೀಪ ಡಾಂಗೆ, ರಾಮಜಿ ಕಲಸಂಗ್ರಾ ಮತ್ತು ದಿಲೀಪ ಪಾಟಿದಾರ ಅವರನ್ನು ಕ್ರೂರವಾಗಿ ಕೊಲೆ ಮಾಡಿದ್ದಾರೆ ಎಂದು ಉಗ್ರ ನಿಗ್ರಹ ದಳದ ಮಾಜಿ ಅಧಿಕಾರಿ ಮೆಹಬೂಬ ಮುಜಾವರ ಅವರು ದೈನಿಕ ‘ದಿವ್ಯ ಮರಾಠಿ’ಯ ಪ್ರತಿನಿಧಿಗೆ ನೀಡಿದ ಸಂದರ್ಶನದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಮುಜಾವರ ಅವರು ಮಾತು ಮುಂದುವರಿಸಿ,
1. ‘ಹಿಂದೂ ಭಯೋತ್ಪಾದನೆ’ಯನ್ನು ಸಾಬೀತುಪಡಿಸಲು, ಉಗ್ರ ನಿಗ್ರಹ ದಳದ ಹೆಚ್ಚುವರಿ ಆಯುಕ್ತ ಪರಮವೀರ ಸಿಂಗ್ ಅವರು ಕೆಲವು ಪೊಲೀಸರನ್ನು ಆಯ್ಕೆ ಮಾಡಿ ಒಂದು ತಂಡ ರಚಿಸುವಂತೆ ನನಗೆ ಹೇಳಿದ್ದರು. ನಾನು ಮುಂಬಯಿ, ನಾಂದೇಡ, ಲಾತೂರ ಮತ್ತು ಸೋಲಾಪುರದ 8 ರಿಂದ 10 ಅಧಿಕಾರಿಗಳ ತಂಡವನ್ನು ರಚಿಸಿದೆ. ಪರಮವೀರ ಸಿಂಗ ನನ್ನ ಮುಖ್ಯಸ್ಥರಾಗಿದ್ದರಿಂದ ನಾನು ಎಲ್ಲಾ ಮಾಹಿತಿಯನ್ನು ಅವರಿಗೆ ನೀಡುತ್ತಿದ್ದೆ.
2. ಮೋಹನ ಭಾಗವತ ಅವರನ್ನು ಸಿಲುಕಿಸುವ ಕಾರ್ಯಾಚರಣೆಯಲ್ಲಿ ನಾನು 8 ತಿಂಗಳು ಕೆಲಸ ಮಾಡಿದೆ; ಆದರೆ ಅವರನ್ನು ಬಂಧಿಸಲಿಲ್ಲ. ಆದ್ದರಿಂದ, ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಜೈಲಿಗೆ ಹಾಕಲಾಯಿತು. ಆ ಸಮಯದಲ್ಲಿ ಮೋಹನ ಭಾಗವತ ಅವರನ್ನು ಬಂಧಿಸಿದ್ದರೆ, ಸಂಘವೇ ನಾಶವಾಗುತ್ತಿತ್ತು.
3. ಸಾಧ್ವಿ ಪ್ರಜ್ಞಾಸಿಂಗ ಮತ್ತು ಕರ್ನಲ್ ಪುರೋಹಿತ ಅವರನ್ನು ಸಿಲುಕಿಸಲು, ಉಗ್ರ ನಿಗ್ರಹ ದಳದ ಅಧಿಕಾರಿಗಳು 600 ಕೆಜಿ ‘ಆರ್‌ಡಿಎಕ್ಸ್’ ಇರಿಸಿದ್ದಾರೆ ಎಂದು ಸುಳ್ಳು ಕಥೆ ಸೃಷ್ಟಿಸಿದರು. ನಾನು ಈ ಎಲ್ಲ ವಿಷಯಗಳನ್ನು ಸಾಕ್ಷ್ಯಗಳೊಂದಿಗೆ ಹೇಳುತ್ತಿದ್ದೇನೆ. 2015-16 ರಲ್ಲಿ ಈ ಎಲ್ಲಾ ಸಾಕ್ಷ್ಯಗಳನ್ನು ನಾನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇನೆ.
4. ಈ ಪ್ರಕರಣದಲ್ಲಿ ಸಂದೀಪ ಡಾಂಗೆ, ರಾಮಜಿ ಕಲಸಂಗ್ರಾ ಮತ್ತು ದಿಲೀಪ ಪಾಟಿದಾರ್ ಅವರನ್ನು ಅನಗತ್ಯವಾಗಿ ಸಿಲುಕಿಸಲಾಯಿತು. ಮೊದಲು ಸಂದೀಪ ಡಾಂಗೆ ಮತ್ತು ರಾಮಜಿ ಅವರನ್ನು ಕೊಲೆ ಮಾಡಲಾಯಿತು. ಮತ್ತು ದಿಲೀಪ ಪಾಟಿದಾರ್ ಈ ಕೊಲೆಗಳಿಗೆ ಸಾಕ್ಷಿಯಾಗುವ ಸಾಧ್ಯತೆ ಇರುವುದರಿಂದ ನಂತರ ಅವನನ್ನೂ ಕೊಲೆ ಮಾಡಲಾಯಿತು. ಈ ಮೂವರನ್ನೂ ನಾಪತ್ತೆಯಾಗಿದ್ದಾರೆ ಎಂದು ಘೋಷಿಸಲಾಯಿತು. ಇದರ ತನಿಖೆ ನಡೆದರೆ ಎಲ್ಲವೂ ಬೆಳಕಿಗೆ ಬರುತ್ತದೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ