ವಿದೇಶಿ ಅಪರಾಧಿಗಳನ್ನು ತಕ್ಷಣವೇ ಗಡಿಪಾರು ಮಾಡಲಿರುವ ಬ್ರಿಟನ್; ಈ ವಿದೇಶಿಗರ ಪಟ್ಟಿಯಲ್ಲಿ ಭಾರತಿಯರು ಸೇರಿದ್ದು, ಪಾಕಿಸ್ತಾನಿಗಳಿಲ್ಲ.

ಲಂಡನ್ (ಬ್ರಿಟನ್) – ವಿದೇಶಿ ಅಪರಾಧಿಗಳನ್ನು ದೇಶದಿಂದ ಗಡಿಪಾರು ಮಾಡುವುದಾಗಿ ಬ್ರಿಟನ್ ಘೋಷಿಸಿದೆ. ಈ ಹಿಂದೆ ಇಂತಹ ಅಪರಾಧಿಗಳಿಗೆ ಕ್ರಮ ಕೈಗೊಳ್ಳುವ ಮೊದಲು ಪ್ರಶ್ನಿಸಲು ಅವಕಾಶವಿತ್ತು; ಆದರೆ ಈಗ ಅದನ್ನು ರದ್ದುಗೊಳಿಸಲಾಗಿದೆ. ಅಪರಾಧ ನಡೆದ ನಂತರ ಅವರನ್ನು ತಕ್ಷಣವೇ ಗಡಿಪಾರು ಮಾಡಲಾಗುವುದು. ಅವರು ತಮ್ಮ ದೇಶಕ್ಕೆ ಮರಳಿದ ನಂತರ ಈ ಕ್ರಮವನ್ನು ಪ್ರಶ್ನಿಸಬಹುದು. ವಿಚಿತ್ರವೆಂದರೆ, ಸದ್ಯ ಈ ಪಟ್ಟಿಯಲ್ಲಿ ಭಾರತ, ಕೆನಡಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳನ್ನು ಸೇರಿಸಿದ್ದರೂ, ಪಾಕಿಸ್ತಾನವನ್ನು ಮಾತ್ರ ಈ ಪಟ್ಟಿಯಿಂದ ಹೊರಗಿಡಲಾಗಿದೆ. ಮುಖ್ಯವಾಗಿ, ಬ್ರಿಟನ್‌ನಲ್ಲಿ ಪಾಕಿಸ್ತಾನಿ ನಾಗರಿಕರ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಹೆಚ್ಚಾಗಿದೆ ಎಂದು ಕಂಡುಬಂದಿದೆ.

1. ಜೈಲುಗಳಲ್ಲಿನ ಜನಸಂದಣಿಯನ್ನು ಕಡಿಮೆ ಮಾಡಲು, ತೆರಿಗೆದಾರರ ಹಣವನ್ನು ಉಳಿಸಲು ಮತ್ತು ಕಾನೂನಿನ ಬಗ್ಗೆ ಭಯ ಮೂಡಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಲ್ಲಿನ ಸರಕಾರ ಹೇಳಿದೆ.

2. ಪಾಕಿಸ್ತಾನವನ್ನು ಈ ಪಟ್ಟಿಯಿಂದ ಹೊರಗಿಟ್ಟು ಸರಕಾರವು ರಾಜಕೀಯ ಒತ್ತಡಕ್ಕೆ ಮಣಿದಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ವಿರೋಧ ಪಕ್ಷದ ಕನ್ಸರ್ವೇಟಿವ್ ಪಕ್ಷದ ನಾಯಕ ಕ್ರಿಸ್ ಫಿಲ್ಪ್, ಎಲ್ಲಾ ವಿದೇಶಿ ಅಪರಾಧಿಗಳನ್ನು ಗಡಿಪಾರು ಮಾಡುವ ಬದಲು ಸರಕಾರ ಕೆಲವು ದೇಶಗಳ ಜನರಿಗೆ ರಕ್ಷಣೆ ನೀಡುತ್ತಿದೆ ಎಂದು ಟೀಕಿಸಿದ್ದಾರೆ.

3. ಕಾನೂನು ಮತ್ತು ಆಡಳಿತಾತ್ಮಕ ಗಡಿಪಾರು ಒಪ್ಪಂದಗಳು ಅಸ್ತಿತ್ವದಲ್ಲಿರುವ ದೇಶಗಳನ್ನು ಮಾತ್ರ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಸರಕಾರ ವಾದಿಸಿದೆ.

4. ಬ್ರಿಟನ್‌ ನ ಜೈಲುಗಳಲ್ಲಿ ಪ್ರಸ್ತುತ ಶೇ.100% ಕೈದಿಗಳಿದ್ದಾರೆ. ಅಲ್ಲಿನ ಜೈಲುಗಳಲ್ಲಿ ಪ್ರಸ್ತುತ 10,772 ವಿದೇಶಿ ಕೈದಿಗಳಿದ್ದಾರೆ. ಇದರಲ್ಲಿ 320 ಭಾರತೀಯ ಕೈದಿಗಳಿದ್ದು ಭಾರತವು ಮೂರನೇ ಸ್ಥಾನದಲ್ಲಿದೆ. ಪಾಕಿಸ್ತಾನಿ ಕೈದಿಗಳ ಸಂಖ್ಯೆ 317 ಇದೆ. ಬ್ರಿಟನ್ ನಲ್ಲಿ ಒಬ್ಬ ಕೈದಿಯ ವಾರ್ಷಿಕ ವೆಚ್ಚ 50 ಲಕ್ಷ ರೂಪಾಯಿಗಳಾಗಿದೆ.

ಸಂಪಾದಕೀಯ ನಿಲುವು

ಅಮೇರಿಕಾದಂತೆ ಬ್ರಿಟನ್ ಕೂಡ ಪಾಕಿಸ್ತಾನವನ್ನು ಬೆಂಬಲಿಸುತ್ತಿರುವುದು ಇದರಿಂದ ಸ್ಪಷ್ಟವಾಗಿದೆ. ಬ್ರಿಟನ್ನಿನಲ್ಲಿ ಪ್ರಸ್ತುತ ಪಾಕಿಸ್ತಾನ ಮೂಲದ ನಾಗರಿಕರು ಹೆಚ್ಚು ಅಪರಾಧಗಳನ್ನು ಮಾಡುತ್ತಿದ್ದಾರೆ. ಅಲ್ಲಿನ ಅಪ್ರಾಪ್ತ ಬ್ರಿಟಿಷ್ ಹುಡುಗಿಯರ ಮೇಲೆ ಅತ್ಯಾಚಾರ ಎಸಗುತ್ತಿದ್ದಾರೆ. ಹೀಗಿದ್ದರೂ ಅವರನ್ನು ಬೆಂಬಲಿಸಿ ಬ್ರಿಟನ್ ಆತ್ಮಹತ್ಯೆ ಮಾಡಿಕೊಳ್ಳುತ್ತಿದೆ!