ಕೇರಳದಲ್ಲಿ ‘ವಿಭಜನೆಯ ಭಯಾನಕ ದಿನ’ ಆಚರಣೆಗೆ ಸಾಮ್ಯವಾದಿ ಸರಕಾರದ ವಿರೋಧ! – Kerala Governor Order

  • ಕಾಂಗ್ರೆಸ್ ನಿಂದ ಕೂಡ ವಿರೋಧ

  • ರಾಜ್ಯಪಾಲರು ಸಂಘದ ಸಿದ್ಧಾಂತ ಹೊಂದಿದ್ದಾರೆ ಎಂದು ಆರೋಪ.

ತಿರುವನಂತಪುರಂ (ಕೇರಳ) – ಕೇರಳದ ರಾಜ್ಯಪಾಲರಾದ ರಾಜೇಂದ್ರ ಅರ್ಲೇಕರ್ ಅವರು ರಾಜ್ಯದ ಎಲ್ಲಾ ಸರಕಾರಿ ವಿಶ್ವವಿದ್ಯಾಲಯಗಳಿಗೆ ಆಗಸ್ಟ್ 14 ಅನ್ನು ‘ವಿಭಜನೆಯ ಭಯಾನಕ ದಿನ’ ಎಂದು ಆಚರಿಸುವಂತೆ ಅಧಿಕೃತ ನಿರ್ದೇಶನಗಳನ್ನು ನೀಡಿದ್ದಾರೆ. ಈ ವಿಷಯದ ಕುರಿತು ರಾಜ್ಯದಲ್ಲಿ ರಾಜಕೀಯ ಹೊತ್ತಿ ಉರಿದಿದೆ. ರಾಜ್ಯಪಾಲರು ಸಮಾನಾಂತರ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿ, ಆಡಳಿತದಲ್ಲಿರುವ ಸಾಮ್ಯವಾದಿ ಪಕ್ಷ ಮತ್ತು ವಿರೋಧ ಪಕ್ಷವಾದ ಕಾಂಗ್ರೆಸ್ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ಆರೋಪಗಳನ್ನು ಮಾಡಿದ್ದಾರೆ.

1. ರಾಜ್ಯಪಾಲರು ಹೊರಡಿಸಿದ ಸುತ್ತೋಲೆಯಲ್ಲಿ, ಭಾರತದ ವಿಭಜನೆಯ ನೋವನ್ನು ಎತ್ತಿ ಹಿಡಿಯುವ ವಿಚಾರ ಸಂಕಿರಣಗಳು ಮತ್ತು ಸ್ಮರಣೆಯ ಕಾರ್ಯಕ್ರಮಗಳನ್ನು ಆಯೋಜಿಸಿ ಎಂದು ಹೇಳಲಾಗಿದೆ. ಕುಲಪತಿಗಳಿಗೆ ಈ ದಿನವನ್ನು ಹೇಗೆ ಆಚರಿಸಲಾಗುತ್ತದೆ ಎಂಬುದರ ಬಗ್ಗೆ ಕಾರ್ಯಯೋಜನೆಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

2. ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಸರಕಾರದ ಶಿಕ್ಷಣ ಸಚಿವ ವಿ. ಶಿವನ್‌ ಕುಟ್ಟಿ, “ಇದು ಸಮಾನಾಂತರ ಆಡಳಿತ ನಡೆಸುವ ಪ್ರಯತ್ನ. ರಾಜ್ಯಪಾಲರು ಯಾವ ವಿಭಜನೆಯ ಬಗ್ಗೆ ಮಾತನಾಡುತ್ತಿದ್ದಾರೆ? ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಪಾತ್ರ ವಹಿಸದ ಆರ್‌.ಎಸ್‌.ಎಸ್ ಸಮಾಜದಲ್ಲಿ ಬಿರುಕು ಮೂಡಿಸುವ ಕೆಲಸ ಮಾಡಿದೆ. ರಾಜ್ಯಪಾಲರು ಅದೇ ಸಿದ್ಧಾಂತವನ್ನು ಪುನರಾವರ್ತಿಸುತ್ತಿದ್ದಾರೆ” ಎಂದರು.

3. ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಶಾಸಕ ವಿ.ಡಿ. ಸತೀಶನ್ ಕೂಡ ರಾಜ್ಯಪಾಲರ ಕ್ರಮವನ್ನು ಟೀಕಿಸಿ, “ರಾಜ್ಯಪಾಲರು ಸಾಂವಿಧಾನಿಕ ಮುಖ್ಯಸ್ಥರ ಬದಲಿಗೆ ಸಂಘದ ವಿಭಜನಾ ರಾಜಕಾರಣದ ವಕ್ತಾರರಂತೆ ವರ್ತಿಸುತ್ತಿದ್ದಾರೆ” ಎಂದು ಹೇಳಿದರು.

ಸಂಪಾದಕೀಯ ನಿಲುವು

ವಿಭಜನೆಯಿಂದ ಹಿಂದೂಗಳು ಅನುಭವಿಸಿದ ನೋವು ಮತ್ತು ಕಷ್ಟಗಳು ಇಂದಿನ ಪೀಳಿಗೆಗೆ ತಿಳಿಯಬೇಕೆಂದು ಆಚರಿಸಲಾಗುವ ಈ ದಿನವನ್ನು ವಿರೋಧಿಸುವುದು, ಮುಸ್ಲಿಮರಿಂದ ಪ್ರೇರಿತವಾದ ವಿಭಜನೆಯನ್ನು ಸಮರ್ಥಿಸಿದಂತೆ ಆಗಿದೆ. ಇಂತಹ ರಾಜಕೀಯ ಪಕ್ಷಗಳ ಮಾನ್ಯತೆಯನ್ನು ರದ್ದುಪಡಿಸಬೇಕು.