ಶಸ್ತ್ರ ಪರವಾನಿಗೆ ನೀಡುವ ಭರವಸೆಗೆ ಸಂಬಂಧಿಸಿದಂತೆ ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರ ಸ್ಪಷ್ಟೀಕರಣ

ಗುವಾಹಟಿ (ಆಸ್ಸಾಂ) – ಆಸ್ಸಾಂನ ಮೂಲ ನಿವಾಸಿಗಳಿಗೆ ಶಸ್ತ್ರಾಸ್ತ್ರ ಪರವಾನಿಗೆ ನೀಡುವುದರ ಜೊತೆಗೆ, ಅವರ ಭೂಮಿ ಹಕ್ಕುಗಳನ್ನೂ ಸಹ ರಕ್ಷಿಸಬೇಕು. ಬೇಕಾಬಿಟ್ಟಿಯಾಗಿ ಎಲ್ಲರಿಗೂ ಸುಲಭವಾಗಿ ಶಸ್ತ್ರಾಸ್ತ್ರ ಅಥವಾ ಪರವಾನಿಗೆಗಳನ್ನು ನೀಡಲಾಗುವುದಿಲ್ಲ. ಸಂಪೂರ್ಣ ಪ್ರಕ್ರಿಯೆ ಮತ್ತು ತನಿಖೆಯ ನಂತರವೇ ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರು ಬಕ್ಸಾ ಕಾರ್ಯಕ್ರಮವೊಂದರಲ್ಲಿ ಶಸ್ತ್ರಾಸ್ತ್ರ ನೀತಿಯ ಕುರಿತು ಸ್ಪಷ್ಟಪಡಿಸಿದ್ದಾರೆ. ಸರಕಾರವು ಸ್ಥಳೀಯರಿಗೆ ಶಸ್ತ್ರಾಸ್ತ್ರ ಪರವಾನಿಗೆ ನೀಡಲಿದೆ ಎಂದು ಹೇಳಿದ್ದಕ್ಕೆ ಟೀಕೆಗಳು ವ್ಯಕ್ತವಾಗಿದ್ದವು. ಆಸ್ಸಾಂ ಸರಕಾರವು ಮೇ 28 ರಂದು ನಡೆದ ಸಂಪುಟ ಸಭೆಯಲ್ಲಿ, ಅಸುರಕ್ಷಿತ ಮತ್ತು ದೂರದ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರಿಗೆ ಪರವಾನಿಗೆಯೊಂದಿಗೆ ಶಸ್ತ್ರಾಸ್ತ್ರಗಳನ್ನು ನೀಡಲು ನಿರ್ಧರಿಸಿತ್ತು. ಈ ಪ್ರದೇಶಗಳಲ್ಲಿ ಬಂಗಾಳಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ.
1. ಮುಖ್ಯಮಂತ್ರಿ ಸರಮಾ ಅವರು ಮಾತು ಮುಂದುವರೆಸಿ, “ಬಂದೂಕುಗಳು ಅವಶ್ಯಕವಾಗಿದೆ. ನಿಮ್ಮ ಬಳಿ ಬಂದೂಕು ಇಲ್ಲದಿದ್ದರೆ, ದಕ್ಷಿಣ ಸಲಮಾರ-ಮನಕಾಚಾರ ಮತ್ತು ಬಾಗಬಾರನಲ್ಲಿ ನೀವು ಹೇಗೆ ಸುರಕ್ಷಿತವಾಗಿರಲು ಸಾಧ್ಯ? ನೀವು (ಪ್ರಸಾರ ಮಾಧ್ಯಮಗಳು)ಅಲ್ಲಿಗೆ ಹೋದಾಗ ಅಲ್ಲಿನ ಪರಿಸ್ಥಿತಿ ಅರ್ಥವಾಗುತ್ತದೆ” ಎಂದರು.
2. ಒಂದು ಪ್ರದೇಶದಲ್ಲಿ 100 ಮೂಲ ಸ್ಥಳೀಯರು ವಾಸಿಸುತ್ತಿದ್ದರೆ ಮತ್ತು ಅವರ ಸುತ್ತಲೂ 20 ರಿಂದ 25 ಸಾವಿರ ಹೊರಗಿನ ಜನರು ವಾಸಿಸುತ್ತಿದ್ದರೆ, ಆ 100 ಜನರ ಜವಾಬ್ದಾರಿಯನ್ನು ಸರಕಾರ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸರಮಾ ಅವರು ಹೇಳಿದರು. ಆ 100 ಜನರಿಗೆ ಕೆಲವು ಅವಶ್ಯಕತೆಗಳು ಇರುತ್ತವೆ. ಅವರಿಗೆ ಕೆಲವು ಸಾಮಗ್ರಿಗಳ ಅಗತ್ಯವಿರುತ್ತದೆ. ಬಂದೂಕುಗಳು ಅವಶ್ಯಕವಿರುತ್ತದೆ, ಆದರೆ ಇದು ಕೇವಲ ಕಾನೂನಿನ ವ್ಯಾಪ್ತಿಯಲ್ಲಿ ಮಾತ್ರ ಇರಬೇಕು ಎಂದು ಸರಮಾ ಪ್ರತಿಪಾದಿಸಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!