|
ಶ್ರೀ. ಪ್ರೀತಮ ನಾಚಣಕರ್, ವಿಶೇಷ ಪ್ರತಿನಿಧಿ, ‘ಸನಾತನ ಪ್ರಭಾತ’

ಮುಂಬಯಿ, ಆಗಸ್ಟ್ ೧೦ (ವಾರ್ತೆ) – ಆಗಸ್ಟ್ ೧೧, ೨೦೧೨ ರಂದು ಮತಾಂಧ ಮುಸಲ್ಮಾನರು ಮಹಾರಾಷ್ಟ್ರ ಪೊಲೀಸರನ್ನು ಗುರಿಯಾಗಿಸಿ ಆಜಾದ್ ಮೈದಾನದ ಹೊರಗೆ ಅಶಾಂತಿ ಸೃಷ್ಟಿಸಿದರು. ಇದಕ್ಕೆ ಸರಿಯಾಗಿ ೧೩ ವರ್ಷಗಳು, ಅಂದರೆ ೪ ಸಾವಿರ ೭೪೮ ದಿನಗಳು ಕಳೆದಿವೆ. ಗಲಭೆಕೋರರು ವಾಹನಗಳು ಮತ್ತು ಅಂಗಡಿಗಳನ್ನು ಒಡೆದು ಸುಟ್ಟುಹಾಕಿ ಆರ್ಥಿಕ ನಷ್ಟವನ್ನು ಉಂಟುಮಾಡಿದರು. ಆದರೆ ಮಹಿಳಾ ಪೊಲೀಸ್ ಸಹೋದರಿಯರ ಬಟ್ಟೆಗಳನ್ನು ಹರಿದು, ಪೊಲೀಸರ ಬಂದೂಕುಗಳನ್ನು ಕಸಿದುಕೊಂಡು ಅವರನ್ನು ಅವಮಾನಿಸಿದರು. ಮಹಿಳಾ ಪೊಲೀಸರಿಂದ ರಾಖಿ ಕಟ್ಟಿಸಿಕೊಂಡ ರಾಜಕಾರಣಿಗಳು ೧೩ ವರ್ಷಗಳ ನಂತರವೂ ಸಹೋದರಿಯರ ಗೌರವಕ್ಕೆ ಧಕ್ಕೆ ತಂದವರನ್ನು ಶಿಕ್ಷಿಸಲು ಸಾಧ್ಯವಾಗಿಲ್ಲ. ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ ‘ಆಜಾದ್ ಮೈದಾನದ ಹೊರಗೆ ಗಲಭೆ ನಡೆಸಿದವರಿಗೆ ಶಿಕ್ಷೆಯಾಗುತ್ತದೆ’ ಎಂಬ ಆಶಯ ಮಸುಕಾಗಿದೆ. ಆದ್ದರಿಂದ, ಗಲಭೆಯಿಂದ ಆಗದಷ್ಟು, ಗಲಭೆಯ ನಂತರದ ಅಸಮರ್ಥತೆಯಿಂದ ಸರಕಾರ, ನ್ಯಾಯವ್ಯವಸ್ಥೆ ಮತ್ತು ಆಡಳಿತದ ಹೆಚ್ಚು ಅವಮಾನವಾಗಿದೆ ಎಂಬ ಪರಿಸ್ಥಿತಿ ಕಂಡುಬರುತ್ತಿದೆ.

ಆಜಾದ್ ಮೈದಾನ ಗಲಭೆಯ ಸಮಯದಲ್ಲಿ ಕರ್ತವ್ಯದಲ್ಲಿದ್ದ ಮತ್ತು ಮತಾಂಧ ಮುಸಲ್ಮಾನರಿಂದ ದಾಳಿಗೊಳಗಾದ ಸಂತ್ರಸ್ತ ಮಹಿಳಾ ಪೊಲೀಸ್ ಸಹೋದರಿಯರನ್ನು ಸಂಪರ್ಕಿಸಿ ‘ಸನಾತನ ಪ್ರಭಾತ’ ಅವರ ಭಾವನೆಗಳನ್ನು ಅರ್ಥಮಾಡಿಕೊಂಡಿದೆ.
ಇಂದಿಗೂ ಮೈ ಜುಮ್ಮೆನ್ನುತ್ತದೆ! – ಸಂತ್ರಸ್ತ ಪೊಲೀಸ್ ಮಹಿಳೆಯ ದುಃಖ

ಪೊಲೀಸ್ ಇಲಾಖೆಗೆ ಸೇರಿಕೊಂಡ ಕೆಲವೇ ದಿನಗಳಲ್ಲಿ ನನ್ನನ್ನು ಆಜಾದ್ ಮೈದಾನದಲ್ಲಿ ಕರ್ತವ್ಯಕ್ಕೆ ಕಳುಹಿಸಲಾಯಿತು. ಆ ಸಮಯವನ್ನು ನೆನಪಿಸಿಕೊಂಡರೆ ಇಂದಿಗೂ ಮೈ ಜುಮ್ಮೆನ್ನುತ್ತದೆ. ಆಜಾದ್ ಮೈದಾನದ ಸ್ಥಳಕ್ಕೆ ಹೋದಾಗಲೆಲ್ಲಾ ಆ ಭಯಾನಕ ಘಟನೆಯು ನೆನಪಾಗಿ ಹೃದಯ ಕಂಪಿಸುತ್ತದೆ. ೧೩ ವರ್ಷಗಳ ನಂತರವೂ ನಮ್ಮೊಂದಿಗೆ ಕೆಟ್ಟದಾಗಿ ವರ್ತಿಸುವವರಿಗೆ ಶಿಕ್ಷೆಯಾಗಿಲ್ಲ ಎಂದು ವಿಷಾದ ಅನಿಸುತ್ತದೆ.
ಹಿರಿಯರು ಏನನ್ನೂ ಮಾಡಿಲ್ಲ, ನಾವು ಹೇಳಿ ಏನು ಪ್ರಯೋಜನ? – ಸಂತ್ರಸ್ತ ಪೊಲೀಸ್ ಮಹಿಳೆಯ ವಿಷಾದ
ನಾನು ಆಗ ಮುಂಬಯಿ ಮರಾಠಿ ಪತ್ರಕರ್ತರ ಸಂಘದ ಬಳಿ ಕರ್ತವ್ಯದಲ್ಲಿದ್ದೆ. ಒಳಗೆ ಏನಾಯಿತು ಎಂದು ನಾನು ನೋಡಲಿಲ್ಲ; ಆದರೆ ನಂತರ ಹೊರಗೆ ಗಲಭೆ ನಡೆಯಿತು. ಗಲಭೆಕೋರರಿಗೆ ಶಿಕ್ಷೆಯಾಗಲು ಮತ್ತು ಹಣ ವಸೂಲಿ ಮಾಡಲು ಹಿರಿಯರು ಏನನ್ನೂ ಮಾಡಿಲ್ಲ. ಇದರ ಬಗ್ಗೆ ಈಗ ನಾವು ಮಾತನಾಡಿ ಏನು ಪ್ರಯೋಜನ?
ಗಲಭೆಯ ಕಾರ್ಯವಿಧಾನ ನಿರ್ಧರಿಸಲಾಗಿದೆಯೇ? ಎಂಬ ಪ್ರಶ್ನೆ ಮೂಡುತ್ತದೆ! – ವಕೀಲ ವೀರೇಂದ್ರ ಇಚಲಕರಂಜೀಕರ್, ರಾಷ್ಟ್ರೀಯ ಅಧ್ಯಕ್ಷರು, ಹಿಂದೂ ವಿಧಿಜ್ಞ ಪರಿಷತ್ (ಅರ್ಜಿದಾರರ ವಕೀಲರು)

ಈ ಪಾಪ ಕಾಂಗ್ರೆಸ್ ಸರಕಾರದ ಕಾಲದ್ದಾಗಿದೆ. ಆಜಾದ್ ಮೈದಾನ ಗಲಭೆ ಪ್ರಕರಣದಲ್ಲಿ ಇನ್ನೂ ಆರೋಪಗಳನ್ನು ನಿಗದಿಪಡಿಸಿಲ್ಲ. ಎಲ್ಲಾ ಆರೋಪಿಗಳು ಕಾಣೆಯಾಗಿದ್ದಾರೆ. ಹಲವು ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಬಿಡುಗಡೆ ಮಾಡಲಾಗಿದೆ. ಆಜಾದ್ ಮೈದಾನ ಗಲಭೆಯಲ್ಲಿ ಮಹಿಳಾ ಪೊಲೀಸರ ಮೇಲೆ ಲೈಂಗಿಕ ದೌರ್ಜನ್ಯ ನಡೆಯಿತು. ಪೊಲೀಸರ ಮೇಲೆ ಹಲ್ಲೆ ಮಾಡಲಾಯಿತು. ಅವರ ಬಂದೂಕುಗಳನ್ನು ಕದ್ದೊಯ್ಯಲಾಯಿತು. ಪತ್ರಕರ್ತರ ಮೇಲೂ ಹಲ್ಲೆ ಮಾಡಲಾಯಿತು. ಅವರ ‘ಓಬಿ ವ್ಯಾನ್’ಗಳನ್ನು ಸುಟ್ಟುಹಾಕಲಾಯಿತು. ಗಲಭೆಯ ನಂತರ ಸರಕಾರ ಶಾಂತವಾಗಿತ್ತು. ಆದ್ದರಿಂದ, ಕೆಲವು ಪತ್ರಕರ್ತರ ಪರವಾಗಿ ನಾವು ಮುಂಬಯಿ ಉಚ್ಚ ನ್ಯಾಯಾಲಯಕ್ಕೆ ಹೋಗಿದ್ದೆವು. ಕಾಂಗ್ರೆಸ್ ನಾಚಿಕೆಯಿಂದಾದರೂ ವಸೂಲಿ ಪ್ರಕ್ರಿಯೆಯನ್ನು ಪ್ರಾರಂಭಿಸಿತು; ಆದರೆ ‘ರಜಾ ಅಕಾಡೆಮಿ’ಯನ್ನು ಕಾಂಗ್ರೆಸ್ ಬಿಟ್ಟುಕೊಟ್ಟಿತ್ತು. ರಜಾ ಅಕಾಡೆಮಿಯಿಂದಲೂ ವಸೂಲಿ ಆಗಬೇಕು; ಎಂದು ನಾವು ನ್ಯಾಯಾಲಯದಲ್ಲಿ ವಾದಿಸಿದ್ದೆವು. ೨೦೧೩ ರಲ್ಲಿ, ನ್ಯಾಯಮೂರ್ತಿ ನರೇಶ ಪಾಟೀಲ್ ಅವರ ಪೀಠವು ನಮ್ಮ ಅರ್ಜಿಯನ್ನು ಪ್ರತಿ ವಾರ ಆಲಿಸುತ್ತಿತ್ತು. ಆದ್ದರಿಂದ, ಸರಕಾರ ರಜಾ ಅಕಾಡೆಮಿಯಿಂದಲೂ ವಸೂಲಿ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಆದರೆ ನಂತರ ಎಲ್ಲವೂ ನಿಂತುಹೋಗಿದೆ ಅಥವಾ ‘ಝರಿಯೊಳಗಿನ ಶುಕ್ರಚಾರ್ಯ’ರಿಂದ ಏನೋ ಮಾಡಲಾಗಿದೆ. ನಾವು ಕೇಳಿದ ಪ್ರಕಾರ, ಈ ಪ್ರಕರಣದಲ್ಲಿ ಸರಕಾರದ ಪರ ವಾದಿಸಲು ವಿಶೇಷ ಸರಕಾರಿ ವಕೀಲರನ್ನು ನೇಮಿಸಲಾಗಿತ್ತು. ಅವರನ್ನು ಈಗ ತೆಗೆದುಹಾಕಲಾಗಿದೆ. ಆರೋಪಿಗಳು ಪತ್ತೆಯಾಗಿಲ್ಲ, ಆರೋಪ ನಿಗದಿಪಡಿಸಿಲ್ಲ. ಒಂದು ರೂಪಾಯಿ ಕೂಡ ವಸೂಲಿ ಆಗಿಲ್ಲ ಎಂದು ತೋರುತ್ತದೆ. ೧೩ ವರ್ಷಗಳ ದೀರ್ಘಾವಧಿಯ ನಂತರವೂ ಅಪರಾಧಿಗಳಿಗೆ ಶಿಕ್ಷೆಯಾಗಿಲ್ಲ. ಆದ್ದರಿಂದ, ಒಟ್ಟಾರೆಯಾಗಿ ಗಲಭೆಗಳ ಕಾರ್ಯವಿಧಾನ ನಿರ್ಧಾರವಾಗಿದೆಯೇ? ಎಂದು ನನಗೆ ಪ್ರಶ್ನೆಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಅಕೋಲಾ, ನಾಗಪುರದಲ್ಲೂ ಇದೇ ರೀತಿಯ ಗಲಭೆಗಳು ನಡೆದಿವೆ. ಆರೋಪಿಗಳು ಮುಸಲ್ಮಾನರಾಗಿದ್ದರು ಮತ್ತು ಪೆಟ್ಟು ತಿಂದವರು ಪೊಲೀಸರಾಗಿದ್ದರು. ಅತ್ಯಾಚಾರಕ್ಕೊಳಗಾದವರು ಮಹಿಳಾ ಪೊಲೀಸರಾಗಿದ್ದರು. ಈ ಪರಿಸ್ಥಿತಿಯನ್ನು ಬದಲಿಸಲು ಸರಕಾರ ಮುಂದಾಗುವುದು ಕಾಲದ ಅಗತ್ಯವಾಗಿದೆ.
ಪ್ರಕರಣ ಮತ್ತು ಪ್ರಸ್ತುತ ಪರಿಸ್ಥಿತಿ ಏನು?

ಮ್ಯಾನ್ಮಾರ್‌ನಲ್ಲಿ ಮುಸಲ್ಮಾನರ ಮೇಲೆ ದೌರ್ಜನ್ಯವಾಗಿದೆ ಎಂಬ ಆಪಾದಿತ ಕಾರಣವನ್ನು ಮುಂದಿಟ್ಟು ಆಗಸ್ಟ್ ೧೧, ೨೦೧೨ ರಂದು ಮುಸಲ್ಮಾನರು ಆಜಾದ್ ಮೈದಾನದಲ್ಲಿ ಮೆರವಣಿಗೆ ನಡೆಸಿದರು. ಈ ಸಮಯದಲ್ಲಿ ಮುಸ್ಲಿಂ ನಾಯಕರ ಪ್ರಚೋದನಕಾರಿ ಭಾಷಣದ ನಂತರ ಗಲಭೆ ಭುಗಿಲೆದ್ದಿತು. ಗಲಭೆಕೋರರು ‘ಅಮರ ಜವಾನ್ ಸ್ಮಾರಕ’ವನ್ನು ಕಾಲಿನಿಂದ ಒಡೆದು ಹಾಕಿದರು. ಪೊಲೀಸರ ೨೬ ವಾಹನಗಳನ್ನು ಧ್ವಂಸಗೊಳಿಸಲಾಯಿತು. ೬೧ ಜನರ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಗಲಭೆಕೋರರಿಂದ ನಷ್ಟ ಪರಿಹಾರ ವಸೂಲಿ ಮಾಡಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶ ನೀಡಿದರು; ಆದರೆ ಪೊಲೀಸರಿಗೆ ಗಲಭೆಕೋರರು ಸಿಕ್ಕಲಿಲ್ಲ. ಕೆಲವು ಗಲಭೆಕೋರರ ಆಸ್ತಿ ಅವರ ಹೆಸರಿನಲ್ಲಿ ಇರಲಿಲ್ಲ. ಇಂತಹ ಕಾರಣಗಳನ್ನು ಪೊಲೀಸರು ನೀಡಿದರು. ಪ್ರಸ್ತುತ ಪರಿಸ್ಥಿತಿಯಲ್ಲಿ, ಎಲ್ಲಾ ಆರೋಪಿಗಳು ಜಾಮೀನಿನ ಮೇಲೆ ಮುಕ್ತರಾಗಿದ್ದಾರೆ. ಹಲವರು ಪ್ರಕರಣ ಹಿಂಪಡೆಯಲು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆರೋಪಿಗಳ ವಿರುದ್ಧ ಬಲವಾದ ಪುರಾವೆಗಳನ್ನು ಸಲ್ಲಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ.
ಸಂಪಾದಕೀಯ ನಿಲುವು‘ಗಲಭೆಗಳಂತಹ ಘಟನೆಗಳನ್ನು ನಡೆದರೂ ನಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂಬುದನ್ನು ಗಮನಿಸಿ, ಈ ಗಲಭೆಕೋರರು ಕಳೆದ ೧೩ ವರ್ಷಗಳಲ್ಲಿ ಮಹಾರಾಷ್ಟ್ರದಲ್ಲಿ ಎಲ್ಲಿ ಗಲಭೆಗಳನ್ನು ನಡೆಸಿದ್ದಾರೆ ಎಂಬುದನ್ನು ನೋಡುವುದು ಅವಶ್ಯಕವಾಗಿದೆ. ಅದಕ್ಕಾಗಿ ಕೇವಲ ಗಲಭೆಕೋರರನ್ನಲ್ಲ, ಆಡಳಿತಾತ್ಮಕ ಅಧಿಕಾರಿಗಳನ್ನೂ ಹೊಣೆಗಾರರನ್ನಾಗಿ ಮಾಡಬೇಕು ಎಂದು ಈ ಸಂತ್ರಸ್ತ ಮಹಿಳಾ ಪೊಲೀಸರಿಗೆ ಅನಿಸಿದರೆ ತಪ್ಪೇನು ? |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ