ಪ್ರತಿಯೊಬ್ಬ ದೇಶಪ್ರೇಮಿಯೂ ‘ಉದಯಪುರ ಫೈಲ್ಸ್’ ಚಲನಚಿತ್ರವನ್ನು ವೀಕ್ಷಿಸಬೇಕು!

ಸಾಮಾಜಿಕ ಮಾಧ್ಯಮಗಳಲ್ಲಿ ವೀಕ್ಷಕರ ಪ್ರತಿಕ್ರಿಯೆಗಳು!

ಮುಂಬಯಿ – ‘ಪ್ರತಿಯೊಬ್ಬ ದೇಶಪ್ರೇಮಿಯೂ ‘ಉದಯಪುರ ಫೈಲ್ಸ್: ಕನ್ಹಯ್ಯಲಾಲ್ ಟೈಲರ್ ಮರ್ಡರ್’ ಚಲನಚಿತ್ರವನ್ನು ವೀಕ್ಷಿಸಬೇಕು’, ‘ಈಗ ಸತ್ಯದ ಮೇಲಿನ ಮುಸುಕು ತೆರೆದುಕೊಳ್ಳುತ್ತದೆ’, ‘ಆರೋಪಿಗಳಿಗೆ ಬೇಗ ಶಿಕ್ಷೆಯಾಗಲಿ’ ಎಂದು ಅನೇಕರು ಈ ಚಿತ್ರವನ್ನು ನೋಡಲು ಮನವಿ ಮಾಡಿದ್ದಾರೆ. ಈ ಚಿತ್ರಕ್ಕೆ ಬೆಂಬಲವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸಂದೇಶಗಳು ಪ್ರಸಾರವಾಗುತ್ತಿವೆ. ಆಗಸ್ಟ್ 8 ರಂದು ಈ ಚಿತ್ರ ದೇಶಾದ್ಯಂತ 4,500 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

1. ಚಲನಚಿತ್ರದ ಮೊದಲ ದಿನ ಕನ್ಹಯ್ಯಲಾಲ್ ಅವರ ಇಬ್ಬರು ಮಕ್ಕಳು ಚಿತ್ರಮಂದಿರಕ್ಕೆ ಹೋಗಿ ಚಲನಚಿತ್ರ ವೀಕ್ಷಿಸಿದರು. ಇಬ್ಬರು ಮಕ್ಕಳ ನಡುವಿನ ಆಸನದ ಮೇಲೆ ಅವರು ತಂದೆ ಕನ್ಹಯ್ಯಲಾಲ್ ಅವರ ಚಿತ್ರವನ್ನು ಇಟ್ಟಿದ್ದರು. ಕನ್ಹಯ್ಯಲಾಲ್ ಅವರ ಹತ್ಯೆಯ ದೃಶ್ಯವನ್ನು ನೋಡಿ ಇಬ್ಬರೂ ಮಕ್ಕಳು ಕಣ್ಣೀರಿಟ್ಟರು.

2. ಚಿತ್ರಮಂದಿರದಲ್ಲಿ ಎಲ್ಲಾ ವೀಕ್ಷಕರು ಕನ್ಹಯ್ಯಲಾಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ‘ನನಗೆ ಚಲನಚಿತ್ರವನ್ನು ನೋಡಲು ಸಾಧ್ಯವಿಲ್ಲ’ ಎಂದು ಭಾವನೆ ವ್ಯಕ್ತಪಡಿಸಿ ಕನ್ಹಯ್ಯಲಾಲ್ ಅವರ ಪತ್ನಿ ಚಿತ್ರಮಂದಿರಕ್ಕೆ ಬರಲಿಲ್ಲ.

3. ಕನ್ಹಯ್ಯಲಾಲ್ ಹತ್ಯಾಕಾಂಡದ ಆರೋಪಿ ಜಾವೇದ್ ಮಹಮ್ಮದ್, ‘ಈ ಚಲನಚಿತ್ರದ ಪ್ರದರ್ಶನವನ್ನು ತಡೆಯಬೇಕು’ ಎಂದು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದರಿಂದಾಗಿ ಈ ಹಿಂದೆ ನ್ಯಾಯಾಲಯವು ಚಲನಚಿತ್ರದ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಿತ್ತು; ಆದರೆ ವಿಚಾರಣೆಯ ನಂತರ, ಚಲನಚಿತ್ರದಲ್ಲಿ ಯಾವುದೇ ಆಕ್ಷೇಪಾರ್ಹ ವಿಷಯವಿಲ್ಲ ಎಂದು ನ್ಯಾಯಾಲಯ ಹೇಳಿ ಪ್ರದರ್ಶನವನ್ನು ನಿಲ್ಲಿಸುವ ಅಗತ್ಯವಿಲ್ಲ ಎಂದು ತೀರ್ಪು ನೀಡಿತು. ಇದರ ನಂತರ, ಚಲನಚಿತ್ರ ಪ್ರದರ್ಶನಕ್ಕೆ ದಾರಿ ಸುಗಮವಾಯಿತು.

ಚಲನಚಿತ್ರವು ಯಾವುದರ ಮೇಲೆ ಆಧಾರಿತವಾಗಿದೆ?

ಜೂನ್ 28, 2022 ರಂದು, ಉದಯಪುರ (ರಾಜಸ್ಥಾನ) ದಲ್ಲಿ ಕನ್ಹಯ್ಯಲಾಲ್ ಅವರನ್ನು ಮುಸ್ಲಿಮರು ಅವರ ಅಂಗಡಿಗೆ ನುಗ್ಗಿ ಹತ್ಯೆ ಮಾಡಿದ್ದರು. ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರ ಪ್ರವಾದಿ ಮಹಮ್ಮದ್ ಅವರ ಬಗ್ಗೆ ಮಾಡಿದ ಆಕ್ಷೇಪಾರ್ಹ ಹೇಳಿಕೆಯನ್ನು ಬೆಂಬಲಿಸಿದ್ದಕ್ಕಾಗಿ ಮತಾಂಧರು ಈ ಹತ್ಯೆ ಮಾಡಿದ್ದರು. ಈ ಘಟನೆಯನ್ನೇ ಆಧಾರವಾಗಿಟ್ಟುಕೊಂಡು ಈ ಚಲನಚಿತ್ರವನ್ನು ಮಾಡಲಾಗಿದೆ. ಈ ಚಲನಚಿತ್ರದ ವಿರುದ್ಧ ‘ಜಮಿಯತ್ ಉಲೇಮಾ-ಎ-ಹಿಂದ್’ ಸಂಘಟನೆಯ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಅವರು ಚಲನಚಿತ್ರವನ್ನು ನಿಷೇಧಿಸಲು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ಬಳಿಕ, ಚಲನಚಿತ್ರದ 61 ದೃಶ್ಯಗಳನ್ನು ತೆಗೆದುಹಾಕಲಾಯಿತು. ಕನ್ಹಯ್ಯಲಾಲ್ ಅವರ ಹತ್ಯೆಯ ಪ್ರಕರಣದ ಆರೋಪಿಗಳಾದ ರಿಯಾಜ್ ಅತ್ತಾರಿ ಮತ್ತು ಗೌಸ್ ಮಹಮ್ಮದ್ ಅವರಿಗೆ ಇನ್ನೂ ಶಿಕ್ಷೆಯಾಗಿಲ್ಲ.