ಭಗವಂತನು ಎಲ್ಲರವನಾಗಿದ್ದಾನೆ, ಹಾಗಾದರೆ ದೇವಸ್ಥಾನದ ಎಲ್ಲಾ ನಿಧಿ ನಿಮ್ಮ ಜೇಬಿಗೆ ಏಕೆ ಬೇಕು ? – ಸರ್ವೋಚ್ಚ ನ್ಯಾಯಾಲಯ

ಸರ್ವೋಚ್ಚ ನ್ಯಾಯಾಲಯದಿಂದ ದೇವಸ್ಥಾನದ ಅಭಿವೃದ್ಧಿ ಕಾರ್ಯದ ಕುರಿತು ಬೃಂದಾವನದಲ್ಲಿನ ಪ್ರಸಿದ್ಧ ಬಾಂಕೇ ಬಿಹಾರಿ ದೇವಸ್ಥಾನ ಆಡಳಿತ ಸಮಿತಿಗೆ ನೇರ ವಿಚಾರಣೆ

ನವದೆಹಲಿ – ದೇವಸ್ಥಾನವು ಖಾಸಗಿಯಾಗಿರಬಹುದು, ಆದರೆ ದೇವರು ಎಲ್ಲರಿಗೂ ಸೇರಿದವನು. ಲಕ್ಷಾಂತರ ಭಕ್ತರು ಅಲ್ಲಿಗೆ ಬರುತ್ತಾರೆ. ಭಕ್ತರ ಅನುಕೂಲಕ್ಕಾಗಿ ದೇವಸ್ಥಾನದ ನಿಧಿಯನ್ನು ಬಳಸಲು ಏನು ತೊಂದರೆ ಇದೆ? ಎಲ್ಲಾ ನಿಧಿ ನಿಮ್ಮ ಜೇಬಿನಲ್ಲಿಯೇ ಏಕೆ ಬೇಕು? ಎಂದು ಸರ್ವೋಚ್ಚ ನ್ಯಾಯಾಲಯ ವೃಂದಾವನದಲ್ಲಿರುವ (ಮಥುರಾ, ಉತ್ತರ ಪ್ರದೇಶ) ಪ್ರಸಿದ್ಧ ಬಂಕೆ ಬಿಹಾರಿ ದೇವಸ್ಥಾನದ ನಿರ್ವಹಣಾ ಸಮಿತಿಗೆ ನೇರ ಪ್ರಶ್ನೆ ಹಾಕಿತು.

ಉತ್ತರಪ್ರದೇಶ ಸರಕಾರದ ಸುಗ್ರೀವಾಜ್ಞೆಗೆ ವಿರೋಧ ವ್ಯಕ್ತಪಡಿಸಿ, ದೇವಸ್ಥಾನದ ನಿರ್ವಹಣಾ ಸಮಿತಿಯು ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಈ ಸುಗ್ರೀವಾಜ್ಞೆಯ ಪ್ರಕಾರ, ರಾಜ್ಯ ಸರಕಾರವು ದೇವಸ್ಥಾನದ ನಿಧಿಯಿಂದ ‘ಬಂಕೆ ಬಿಹಾರಿ ಕಾರಿಡಾರ್’ ನಿರ್ಮಿಸಲು ನಿಧಿಯನ್ನು ಬಳಸಲು ಅನುಮತಿ ಪಡೆದಿತ್ತು. ಸಾವಿರಾರು ವರ್ಷಗಳಿಂದ ದೇವಸ್ಥಾನದ ಸಾಂಪ್ರದಾಯಿಕ ಗೋಸ್ವಾಮಿ ನಿರ್ವಾಹಕರನ್ನು ಕಡೆಗಣಿಸಲಾಗಿದೆ ಎಂದು ಸಮಿತಿಯು ಹೇಳಿದೆ.

ಅಭಿವೃದ್ಧಿಗಾಗಿ ಸರಕಾರವು ದೇವಾಲಯದ ಹಣದಿಂದಲ್ಲ, ತನ್ನ ಹಣದಿಂದ ಭೂಮಿ ಖರೀದಿಸಲಿ! – ದೇವಸ್ಥಾನದ ವ್ಯವಸ್ಥಾಪನೆ

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಶ್ಯಾಮ್ ದಿವಾನ್ ವಾದ ಮಂಡಿಸುತ್ತಾ, ದೇವಸ್ಥಾನವು ಖಾಸಗಿಯಾಗಿದ್ದು, ಅದರ ನಿರ್ವಹಣೆಯ ಬಗ್ಗೆ ಎರಡು ಗುಂಪುಗಳ ನಡುವೆ ವಿವಾದವಿದೆ. ಅವರು ಈ ವಿಷಯವನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ತಂದಿದ್ದಾರೆ ಮತ್ತು ದೇವಸ್ಥಾನದ ನಿಧಿಯಿಂದ ಅಭಿವೃದ್ಧಿ ಮಾಡಲು ಸರಕಾರ ಅನುಮತಿ ಪಡೆದಿದೆ. ನಮ್ಮನ್ನು ಕೇಳದೆ ದೇವಾಲಯದ ನಿಧಿಯಿಂದ ಕಾರಿಡಾರ್‌ಗಾಗಿ ಮೇ 15ರಂದು ಹೇಗೆ ಆದೇಶ ಹೊರಡಿಸಲಾಯಿತು? ಈ ಆದೇಶವು ಸರಕಾರದ ಜವಾಬ್ದಾರಿಯನ್ನು ತಪ್ಪಿಸುವ ಒಂದು ವಿಧಾನವಾಗಿದೆ. ಅಭಿವೃದ್ಧಿ ಕಾರ್ಯಗಳು ಸರಕಾರದ ಜವಾಬ್ದಾರಿಯಾಗಿದ್ದು, ಅದಕ್ಕಾಗಿ ಭೂಮಿ ಸ್ವಾಧೀನಪಡಿಸಬೇಕಾದರೆ, ಸರಕಾರವು ತನ್ನ ಸ್ವಂತ ನಿಧಿಯಿಂದ ಅದನ್ನು ಮಾಡಬೇಕು.

ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸುವ ಸೂಚನೆ

ನ್ಯಾಯಾಲಯದ 50 ನಿಮಿಷಗಳ ವಿಚಾರಣೆಯ ನಂತರ, ನ್ಯಾಯಾಲಯವು ಮೇ 15ರಂದು ಉತ್ತರ ಪ್ರದೇಶ ಸರಕಾರವು ನೀಡಿದ ನಿಧಿ ಬಳಕೆಯ ಆದೇಶವನ್ನು ಹಿಂಪಡೆಯುವ ಬಗ್ಗೆ ಪರಿಗಣಿಸಬಹುದು ಎಂದು ಸೂಚನೆ ನೀಡಿತು. ತಾತ್ಕಾಲಿಕವಾಗಿ, ದೇವಸ್ಥಾನದ ನಿರ್ವಹಣೆಗಾಗಿ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗುವುದು. ಈ ಸಮಿತಿಯಲ್ಲಿ ಜಿಲ್ಲಾಧಿಕಾರಿಗಳು ಇರುತ್ತಾರೆ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಹಾಯದೊಂದಿಗೆ ಆ ಪ್ರದೇಶದ ಐತಿಹಾಸಿಕ ಸ್ಥಾನಮಾನವನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಮಾಡಲಾಗುವುದು.

ಸಂಪಾದಕೀಯ ನಿಲುವು

  • ಚರ್ಚ್‌ಗಳು, ಮಸೀದಿಗಳು ಇತ್ಯಾದಿಗಳ ಅಭಿವೃದ್ಧಿ ಕಾರ್ಯಗಳಿಗೂ ಸರಕಾರ ತಮ್ಮ ನಿಧಿಯನ್ನು ಬಳಸಲು ಆದೇಶಿಸಬೇಕು; ಏಕೆಂದರೆ ಭಾರತವು ಜಾತ್ಯತೀತ ದೇಶವಾಗಿದ್ದರೆ, ಎಲ್ಲರಿಗೂ ಸಮಾನ ನ್ಯಾಯ ಸಿಗಬೇಕು!
  • ಹಿಂದೂ ದೇವಸ್ಥಾನಗಳನ್ನು ಸರಕಾರಿಕರಣಗೊಂಡ ದೇವಸ್ಥಾನದ ಹಣವನ್ನು ದೇವಸ್ಥಾನದ ಕೆಲಸಗಳಿಗಿಂತ ಹೆಚ್ಚಾಗಿ ಇತರ ಧರ್ಮೀಯರು ಮತ್ತು ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತದೆ, ಇದು ಹಿಂದೂಗಳಿಗೆ ಒಪ್ಪಿಗೆ ಇಲ್ಲ!