ಶಾಸಕ ಜಿತೇಂದ್ರ ಅವ್ಹಾಡ್ ಅವರ ಸನಾತನ ವಿರೋಧಿ ಹೇಳಿಕೆಗಳ ಬಗ್ಗೆ ಯೋಗ ಋಷಿ ರಾಮದೇವ ಬಾಬಾ ಅವರ ಟೀಕೆ

ಹರಿದ್ವಾರ (ಉತ್ತರಾಖಂಡ) – ಹಿಂದೂ ಧರ್ಮದಲ್ಲಿ ಜನಿಸಿದ ಕೆಲವರು ಧರ್ಮಕ್ಕೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ. ಯಾವ ಧರ್ಮ ಮತ್ತು ಸಂಸ್ಕೃತಿಯಲ್ಲಿ ಅವರು ಜನಿಸಿದ್ದಾರೋ, ಯಾವ ಪೂರ್ವಜರ ವಂಶಸ್ಥರು ಅವರು ಆಗಿದ್ದಾರೋ, ಅವರನ್ನೇ ಹಿಂದೂ ಭಯೋತ್ಪಾದನೆ, ಸನಾತನ ಭಯೋತ್ಪಾದನೆ ಎಂದು ಕರೆಯುತ್ತಿದ್ದಾರೆ. ಯಾವುದೇ ಘಟನೆ ನಡೆದಾಗ, ಈ ಜನರು ‘ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ’ ಎಂದು ಹೇಳುತ್ತಾರೆ; ಆದರೆ ಹಿಂದೂ, ಹಿಂದುತ್ವ ಮತ್ತು ಸನಾತನ ಧರ್ಮವನ್ನು ಭಯೋತ್ಪಾದನೆಯೊಂದಿಗೆ ಜೋಡಿಸುವ ಮೂಲಕ ಅತಿದೊಡ್ಡ ಧಾರ್ಮಿಕ ಮತ್ತು ಸಾಂಸ್ಕೃತಿಕ ವಿವಾದವನ್ನು ಸೃಷ್ಟಿಸಲಾಗುತ್ತಿದೆ. ಅಲ್ಲದೆ, ಅವರು ದೇಶದ ಸಂವಿಧಾನದ ಭಾವನೆಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಈಶ್ವರ ಅವರಿಗೆ ಒಳ್ಳೆಯ ಬುದ್ಧಿ ನೀಡಲಿ ಮತ್ತು ಅವರು ರಾಜಕೀಯದಿಂದ ಶೀಘ್ರದಲ್ಲೇ ‘ಮೋಕ್ಷ’ ಪಡೆಯಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಯೋಗ ಋಷಿ ರಾಮದೇವ ಬಾಬಾ ಅವರು ಶರದ ಚಂದ್ರ ಪವಾರ ಬಣದ ಶಾಸಕ ಜಿತೇಂದ್ರ ಅವ್ಹಾಡ ಅವರನ್ನು ಟೀಕಿಸಿದ್ದಾರೆ. ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ಅವ್ಹಾಡ್ ಅವರು ‘ಸನಾತನ ಧರ್ಮ ಎಂಬ ಯಾವುದೇ ವಿಷಯ ಅಸ್ತಿತ್ವದಲ್ಲಿ ಇರಲಿಲ್ಲ, ಅದು ಕೇವಲ ಒಂದು ಸಿದ್ಧಾಂತವಾಗಿದ್ದು, ಭಾರತಕ್ಕೆ ಹಾನಿ ಮಾಡಿದೆ’ ಎಂದು ಹೇಳಿಕೆ ನೀಡಿದ್ದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”