
ನವದೆಹಲಿ – ‘ರೆಸ್ಪಿರೇಟರಿ ಜರ್ನಲ್ ಥೊರಾಕ್ಸ್’ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ರಾಸಾಯನಿಕ ಸಂಸ್ಕರಿಸಿದ ಆಹಾರವನ್ನು (ಅಲ್ಟ್ರಾ-ಪ್ರೊಸೆಸ್ಡ್ ಫುಡ್) ಹೆಚ್ಚು ಸೇವಿಸುವ ಜನರಿಗೆ, ಕಡಿಮೆ ಸೇವಿಸುವವರ ಹೋಲಿಕೆಯಲ್ಲಿ ಶ್ವಾಸಕೋಶದ ಕ್ಯಾನ್ಸರ್ ಬರುವ ಅಪಾಯವು ಶೇ.41 ರಷ್ಟು ಹೆಚ್ಚು ಇರುತ್ತದೆ.
1. 12 ವರ್ಷಗಳ ಕಾಲ ಒಂದು ಲಕ್ಷಕ್ಕೂ ಹೆಚ್ಚು ಅಮೆರಿಕನ್ ಜನರ ಮಾಹಿತಿಯನ್ನು ಆಧರಿಸಿ ಈ ತೀರ್ಮಾನಗಳಿಗೆ ಬರಲಾಗಿದೆ. ಸಿದ್ಧಪಡಿಸಿದ ಆಹಾರ (ರೆಡಿ ಟು ಈಟ್ ಫುಡ್), ಸಂಸ್ಕರಿಸಿದ ಪದಾರ್ಥಗಳು (ಪ್ರೊಸೆಸ್ಡ್ ಫುಡ್) ಮತ್ತು ಹೆಚ್ಚಿನ ಸಕ್ಕರೆ ಅಂಶದ ಪಾನೀಯಗಳ (ಶುಗರ್ ಡ್ರಿಂಕ್) ಸೇವನೆಯನ್ನು ಕಡಿಮೆ ಮಾಡಿದರೆ, ಜಗತ್ತಿನ ಅತ್ಯಂತ ಸಾಮಾನ್ಯ ಕ್ಯಾನ್ಸರ್ ನ ಜಾಗತಿಕ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.

2. ಸಂಶೋಧನೆಯ ಪ್ರಕಾರ, ಕೇವಲ 2020ರಲ್ಲಿಯೇ ಶ್ವಾಸಕೋಶದ ಕ್ಯಾನ್ಸರ್ ಜಗತ್ತಿನಾದ್ಯಂತ 18 ಲಕ್ಷ ಜನರ ಜೀವವನ್ನು ಬಲಿ ತೆಗೆದುಕೊಂಡಿದೆ. ಆ ವರ್ಷದಲ್ಲಿ 22 ಲಕ್ಷ ರೋಗಿಗಳು ಪತ್ತೆಯಾಗಿದ್ದರು. ಈ ಸಂಶೋಧನೆಯಲ್ಲಿ 1993 ರಿಂದ 2001 ರ ಅವಧಿಯಲ್ಲಿ ಅಮೆರಿಕಾದ ಪ್ರಮುಖ ಕ್ಯಾನ್ಸರ್ ತಪಾಸಣಾ ಪರೀಕ್ಷೆಗಳ ಭಾಗವಾಗಿ 55 ರಿಂದ 74 ವಯಸ್ಸಿನ 1 ಲಕ್ಷ 55 ಸಾವಿರ ಜನರ ಮಾಹಿತಿಯನ್ನು ವಿಶ್ಲೇಷಿಸಲಾಗಿದೆ. ಈ ಸಂಶೋಧಕರು 2009 ರ ವರೆಗೆ ಕ್ಯಾನ್ಸರ್ ರೋಗದ ಪತ್ತೆ ಮತ್ತು 2018 ರ ವರೆಗೆ ಮರಣಗಳ ಮೇಲೆ ಗಮನ ಇಟ್ಟಿದ್ದರು.
3. ಆಹಾರ ಪದಾರ್ಥಗಳನ್ನು 4 ಪ್ರಕ್ರಿಯೆ ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಸಂಸ್ಕರಿಸದ ಅಥವಾ ಅಲ್ಪ ಪ್ರಮಾಣದಲ್ಲಿ ಸಂಸ್ಕರಿಸಿದ, ಸಂಸ್ಕರಿಸಿದ ಅಡುಗೆ ಪದಾರ್ಥಗಳು, ಸಂಸ್ಕರಿಸಿದ ಮತ್ತು ರಾಸಾಯನಿಕವಾಗಿ ಸಂಸ್ಕರಿಸಿದ ಆಹಾರಗಳು ಸೇರಿವೆ. ಇದರಲ್ಲಿ ಐಸ್‌ಕ್ರೀಮ್, ಕರಿದ ಪದಾರ್ಥಗಳು, ಸಿದ್ಧಪಡಿಸಿದ ನೂಡಲ್ಸ್, ಅಂಗಡಿಯಿಂದ ಖರೀದಿಸಿದ ಸೂಪ್, ತಂಪು ಪಾನೀಯಗಳು, ಹ್ಯಾಂಬರ್ಗರ್ ಮತ್ತು ಪಿಜ್ಜಾದಂತಹ ಫಾಸ್ಟ್‌ಫುಡ್‌ಗಳು ಸೇರಿವೆ.
4. ವಿಶ್ಲೇಷಣೆಯಲ್ಲಿ 1 ಸಾವಿರದ 706 ಜನರಿಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
ಹಸು ಹಿಂದೂಗಳಿಗೆ ಪವಿತ್ರ: ಅದರ ಹತ್ಯೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಹುದು! – ಗುಜರಾತ್ ಹೈಕೋರ್ಟ್
ಶನಿಶಿಂಗಣಾಪುರದ ಶ್ರೀ ಶನಿದೇವರ ಮೂರ್ತಿಯ ಸಂರಕ್ಷಣೆಗಾಗಿ ವಜ್ರಲೇಪನ ಮಾಡಲಾಗುವುದು !
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್