ಆನ್‌ಲೈನ್ ಜೂಜಾಟ ನಿಷೇಧಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ! – ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್

ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ ಅವರಿಗೆ ಮನವಿ ಸಲ್ಲಿಸುತ್ತಿರುವಾಗ ಶ್ರೀ. ಸತ್ಯವಿಜಯ ನಾಯಕ, ಹಾಗೂ ಎಡದಿಂದ ಶ್ರೀ. ಸದಾಶಿವ ಧೋಂಡ, ಶ್ರೀ. ರಾಜೇಂದ್ರ ದೇಸಾಯಿ, ಶ್ರೀ. ಮನೋಜ ಗಾಂವ್ಕರ, ಶ್ರೀ. ಸ್ವಪ್ನಿಲ ನಾಯಕ, ಶ್ರೀ. ನಾರಾಯಣ ನಾಡಕರ್ಣಿ ಮತ್ತು ಶ್ರೀ. ಸುಚೇಂದ್ರ ಅಗ್ನಿ

ಪಣಜಿ – ಭಾರತೀಯ ಸಂವಿಧಾನದ **ಅನುಚ್ಛೇದ 252** ರ ಅಡಿಯಲ್ಲಿ ‘ಆನ್‌ಲೈನ್ ರಿಯಲ್ ಮನಿ ಗೇಮಿಂಗ್’ ಮತ್ತು ಜೂಜಾಟವನ್ನು ರಾಷ್ಟ್ರೀಯವಾಗಿ ನಿಯಂತ್ರಿಸುವ ಕಾನೂನನ್ನು ಸಂಸತ್ತಿನಲ್ಲಿ ಅಂಗೀಕರಿಸುವಂತೆ ಕೇಂದ್ರಕ್ಕೆ ಮನವಿ ಮಾಡುವ ನಿರ್ಣಯವನ್ನು ಗೋವಾ ಸರ್ಕಾರವು ಅಂಗೀಕರಿಸಬೇಕು ಎಂದು ‘ಸುರಾಜ್ಯ ಅಭಿಯಾನ’ವು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರಿಗೆ ಮನವಿ ಮಾಡಿದೆ. ‘ಸುರಾಜ್ಯ ಅಭಿಯಾನ’ವು ಈ ಸಂಬಂಧ ಡಾ. ಪ್ರಮೋದ್ ಸಾವಂತ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದೆ.

ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ‘ಸುರಾಜ್ಯ ಅಭಿಯಾನ’ದ ನಿಯೋಗಕ್ಕೆ ತಿಳಿಸಿದ್ದು, ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ತಕ್ಷಣ ನಿರ್ದೇಶನ ನೀಡಿದ್ದಾರೆ.

ಈ ಸಂದರ್ಭದಲ್ಲಿ ‘ಸುರಾಜ್ಯ ಅಭಿಯಾನ’ದ ನಿಯೋಗದಲ್ಲಿ ಸತ್ಯವಿಜಯ ನಾಯಕ್, ರಾಜೇಂದ್ರ ದೇಸಾಯಿ, ನಾರಾಯಣ ನಾಡಕರ್ಣಿ, ಮನೋಜ್ ಗಾಂವ್ಕರ್, ಸುಚೇಂದ್ರ ಅಗ್ನಿ, ಸ್ವಪ್ನಿಲ್ ನಾಯಕ್ ಮತ್ತು ಸದಾಶಿವ ಧೋಂಡ್ ಅವರು ಉಪಸ್ಥಿತರಿದ್ದರು.