ಆದಿವಾಸಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಅಫ್ತಾಬ್ ಪೊಲೀಸ್ ಕಸ್ಟಡಿಯಿಂದ ಪರಾರಿಯಾದ ನಂತರ ನದಿಯಲ್ಲಿ ಶವವಾಗಿ ಪತ್ತೆ! – Rapist Dead

  • ಜಾರ್ಖಂಡ್‌ನಲ್ಲಿ ನಡೆದ ಘಟನೆ

  • ದೂರು ನೀಡಿದ ಹಿಂದೂ ಕಾರ್ಯಕರ್ತರ ವಿರುದ್ಧವೇ ಪೊಲೀಸರಿಂದ ಪ್ರಕರಣ ದಾಖಲು!

ರಾಮಗಢ (ಜಾರ್ಖಂಡ್) – ರಾಮಗಢ ಜಿಲ್ಲೆಯಲ್ಲಿ ಅಫ್ತಾಬ್ ಅನ್ಸಾರಿ ಎಂಬ ವ್ಯಕ್ತಿ ವಿವಾಹಿತ ಆದಿವಾಸಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ. ನಂತರ ಆತ ಅವಳ ಮೇಲೆ ಧರ್ಮ ಬದಲಾಯಿಸುವಂತೆ ಒತ್ತಡ ಹೇರುತ್ತಿದ್ದ. ಈ ಘಟನೆಯ ಬಗ್ಗೆ ದೂರು ದಾಖಲಾದ ನಂತರ ಅಫ್ತಾಬ್ ಅನ್ಸಾರಿಯನ್ನು ಬಂಧಿಸಲಾಗಿತ್ತು; ಆದರೆ ಅವನು ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿದ್ದ ಮತ್ತು ಜುಲೈ 26 ರಂದು ಅವನ ಶವ ನದಿಯಲ್ಲಿ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ದೂರು ನೀಡಿದ ಹಿಂದೂ ಕಾರ್ಯಕರ್ತರ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ.

1. ಅಫ್ತಾಬ್ ಸಂತ್ರಸ್ತ ಆದಿವಾಸಿ ಮಹಿಳೆಗೆ ಕೆಲಸದ ಆಮಿಷವೊಡ್ಡಿ ‘ಅರ್ಶಿ ಗಾರ್ಮೆಂಟ್ಸ್’ ಎಂಬ ಅಂಗಡಿಗೆ ಕರೆಸಿಕೊಂಡಿದ್ದ. ಅಲ್ಲಿಂದ ಅವಳನ್ನು ಅಂಗಡಿಯ ಹಿಂಭಾಗಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಈ ಘಟನೆ ತಿಳಿದ ನಂತರ ಜುಲೈ 23 ರಂದು ‘ಹಿಂದೂ ಟೈಗರ್ ಫೋರ್ಸ್’ ಸಂಘಟನೆಯ ಕೆಲವು ಕಾರ್ಯಕರ್ತರು ಘಟನಾ ಸ್ಥಳಕ್ಕೆ ತಲುಪಿದರು. ಅವರು ಅಫ್ತಾಬ್‌ನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದರು; ಆದರೆ ಅಫ್ತಾಬ್ ಅನ್ಸಾರಿ ಪೊಲೀಸ್ ಕಸ್ಟಡಿಯಿಂದ ಪರಾರಿಯಾದ.

2. ‘ಪೊಲೀಸ್ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಅವನು ದಾಮೋದರ್ ನದಿಗೆ ಹಾರಿದ’ ಎಂದು ಹೇಳಲಾಗುತ್ತಿದೆ. ಈ ಕುರಿತ ಸಿಸಿಟಿವಿ ದೃಶ್ಯಾವಳಿಗಳು ಸಹ ಲಭ್ಯವಾಗಿದ್ದು, ಅದರಲ್ಲಿ ಅಫ್ತಾಬ್ ಕಸ್ಟಡಿಯಿಂದ ಪರಾರಿಯಾಗುತ್ತಿರುವುದು ಕಾಣುತ್ತದೆ. ಇದರ ನಂತರ, ಜುಲೈ 26 ರಂದು ಅಫ್ತಾಬ್‌ನ ಶವ ನದಿಯಲ್ಲಿ ಪತ್ತೆಯಾಗಿದೆ. ಅವನ ಮರಣದ ನಂತರ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

3. ಅಫ್ತಾಬ್‌ನ ಕುಟುಂಬದವರು ಪೊಲೀಸರ ಮೇಲೆ ಆರೋಪ ಮಾಡಿದ್ದು, ಅವರು ಅಫ್ತಾಬ್‌ನನ್ನು ಕಸ್ಟಡಿಗೆ ತೆಗೆದುಕೊಂಡು ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಸ್ಥಳೀಯ ಮುಸ್ಲಿಮರು ಅಫ್ತಾಬ್‌ನ ಕುಟುಂಬದ ಆರೋಪಗಳನ್ನು ಬೆಂಬಲಿಸಿ, ‘ಪೊಲೀಸರೇ ಕೊಲೆ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.

4. ಅಫ್ತಾಬ್‌ನ ಸಾವಿನ ನಂತರ ರಾಮಗಢ ಪೊಲೀಸರು ‘ಹಿಂದೂ ಟೈಗರ್ ಫೋರ್ಸ್’ ಸಂಘಟನೆಯ 12 ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇವರಲ್ಲಿ ರಾಜೇಶ್ ಸಿನ್ಹಾ ಎಂಬ ಓರ್ವ ಸದಸ್ಯನನ್ನು ಬಂಧಿಸಲಾಗಿದೆ. ಅವನ ಮೇಲೆ ಸಮಾಜದಲ್ಲಿ ಧಾರ್ಮಿಕ ವೈಷಮ್ಯ ಸೃಷ್ಟಿಸುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ ಆರೋಪವಿದೆ.

5. ಭಾಜಪದ ಹಜಾರಿಬಾಗ್ ಸಂಸದ ಮನೀಶ್ ಜೈಸ್ವಾಲ್ ಈ ಬಂಧನವನ್ನು ಖಂಡಿಸಿದ್ದು, ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದಲೇ ಸಿನ್ಹಾ ಅವರ ಬಳಿ ಸಹಾಯಕ್ಕಾಗಿ ಹೋಗಿದ್ದರು ಎಂದು ಹೇಳಿದ್ದಾರೆ.

6. ಇದೇ ಹಿನ್ನೆಲೆಯಲ್ಲಿ, ಜುಲೈ 27 ರಂದು ಬಡ್ಕಾಗಾಂವ್‌ನ ಭಾಜಪ ಶಾಸಕ ರೋಶನ್ ಲಾಲ್ ಚೌಧರಿ ನೇತೃತ್ವದಲ್ಲಿ ಹಿಂದೂ ಸಂಘಟನೆಗಳು ನ್ಯಾಯ ದೊರೆಯದಿರುವುದನ್ನು ವಿರೋಧಿಸಿ ಸುಮಾರು ಒಂದೂವರೆ ಗಂಟೆ ಧರಣಿ ನಡೆಸಿದವು.

7. ಬೊಕಾರೋ ವಿಭಾಗದ ಪೊಲೀಸ್ ಮಹಾನಿರೀಕ್ಷಕ ಕ್ರಾಂತಿ ಕುಮಾರ್ ಗರಿದೇಶಿ ಅವರು ಈ ಪ್ರಕರಣದಲ್ಲಿ ವಿಳಂಬ ಮಾಡಿದ ಕಾರಣ ರಾಮಗಢ ಪೊಲೀಸ್ ಠಾಣೆಯ ಮುಖ್ಯಸ್ಥ ಪ್ರಮೋದ್ ಕುಮಾರ್ ಸಿಂಗ್ ಮತ್ತು 3 ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ.

ಸಂಪಾದಕೀಯ ನಿಲುವು

ಜಾರ್ಖಂಡ್ ಮುಕ್ತಿ ಮೋರ್ಚಾ ಸರಕಾರ ಆದಿವಾಸಿಗಳಿಗೆ ನ್ಯಾಯ ಒದಗಿಸುವ ಬದಲು ಹಿಂದೂಗಳ ಮೇಲೆ ಅನ್ಯಾಯ ಮಾಡುತ್ತಿದೆ. ಜಾರ್ಖಂಡ್‌ನಲ್ಲಿ ಬಾಂಗ್ಲಾದೇಶಿ ಅಕ್ರಮ ವಲಸಿಗರ ದೊಡ್ಡ ಸಮಸ್ಯೆ ಸೃಷ್ಟಿಯಾಗಿದ್ದು, ಭವಿಷ್ಯದಲ್ಲಿ ಈ ರಾಜ್ಯ ಮುಸ್ಲಿಂ ಬಹುಸಂಖ್ಯಾತವಾದರೆ ಆಶ್ಚರ್ಯಪಡಬೇಕಾಗಿಲ್ಲ!