Bihar Illegal Madrasas : ಬಿಹಾರದಲ್ಲಿ ವಿದೇಶಿ ನಿಧಿಯಿಂದ ನಡೆಯುತ್ತಿರುವ ಕಾನೂನುಬಾಹಿರ ಮದರಸಗಳ ಮೇಲೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಕ್ರಮ ಕೈಗೊಳ್ಳಲಿದೆ

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಪ್ರಿಯಾಂಕ್ ಕನುಂಗೊ

ನವ ದೆಹಲಿ – ಬಿಹಾರ ರಾಜ್ಯದ ಭಾರತ-ನೇಪಾಳ ಗಡಿಯ ಸಮೀಪದ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕಾನೂನುಬಾಹಿರ, ನೋಂದಾಯಿಸದ ಮದರಸಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಾಧ್ಯಮಗಳು ಈ ಹಿಂದೆ ಬಹಿರಂಗಪಡಿಸಿವೆ. ಈ ಮಾಹಿತಿ ಹೊರಬಿದ್ದ ನಂತರ ರಾಷ್ಟ್ರೀಯ ಮಾನವ ಹಕ್ಕು ಆಯೋಗ ತಕ್ಷಣವೇ ಇದನ್ನು ಗಮನಿಸಿ ಕ್ರಮ ಕೈಗೊಳ್ಳಲು ಮುಂದಾಗಿದೆ.

ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಸದಸ್ಯ ಪ್ರಿಯಾಂಕ ಕಾನೂನಗೋ ಅವರು, ಈ ಮದರಸಗಳಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರಿಗೆ ನಕಲಿ ಭಾರತೀಯ ಗುರುತಿನ ಚೀಟಿಗಳನ್ನು ಒದಗಿಸಲಾಗುತ್ತಿದೆ, ಚಿಕ್ಕ ಮಕ್ಕಳಿಗೆ ಕಟ್ಟರವಾದ ಶಿಕ್ಷಣ ನೀಡಲಾಗುತ್ತಿದೆ ಮತ್ತು ವಿದೇಶಿ ನಿಧಿ ಹವಾಲಾ ಮಾರ್ಗದಲ್ಲಿ (ಅರಬ್ ಮತ್ತು ದಕ್ಷಿಣ ಏಷ್ಯಾದ ದೇಶಗಳು ಹಣ ವರ್ಗಾವಣೆಗಾಗಿ ಬಳಸುವ ಒಂದು ನಿರ್ದಿಷ್ಟ ವ್ಯವಸ್ಥೆ) ಬರುತ್ತಿದೆ ಎಂದು ಹೇಳಿದ್ದಾರೆ. ಈ ಪ್ರಕರಣಗಳು ಕೇವಲ ಧಾರ್ಮಿಕವಲ್ಲ, ಬದಲಿಗೆ ರಾಷ್ಟ್ರೀಯ ಭದ್ರತೆಗೆ ನೇರವಾಗಿ ಸಂಬಂಧಿಸಿವೆ. ಆದ್ದರಿಂದ, ಆಯೋಗವು ಕಠಿಣ ತನಿಖೆ ಮತ್ತು ಕ್ರಮಗಳನ್ನು ಪ್ರಾರಂಭಿಸಿದೆ. ಈ ಪ್ರಕರಣಗಳು ಬಿಹಾರ ಅಥವಾ ಗಡಿ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ. ಶಿಕ್ಷಣದ ಹೆಸರಿನಲ್ಲಿ ಕೆಲವು ಸಂಸ್ಥೆಗಳಿಂದ ಮಕ್ಕಳ ಮನಸ್ಸಿನಲ್ಲಿ ದ್ವೇಷ, ಮತಾಂಧತೆ ಮತ್ತು ವಿಭಜನೆಯ ಬೀಜಗಳನ್ನು ಬಿತ್ತಲಾಗುತ್ತಿದೆ ಎಂಬುದು ರಾಷ್ಟ್ರೀಯ ಎಚ್ಚರಿಕೆಯಾಗಿದೆ.

ಮಾಧ್ಯಮಗಳು ಏನು ಪ್ರಕಟಿಸಿವೆ?

ಬಿಹಾರದ ಮುಜಾಫರ್‌ಪುರ ಜಿಲ್ಲೆಯ ‘ಜಾಮಿಯಾ ನೂರಿಯಾ ಮಿರಾಜುಲ್ ಉಲೂಮ್’ ಮದರಸಾದ ಶಿಕ್ಷಕರೊಬ್ಬರು ತಮಗೆ ಹವಾಲಾ ಮೂಲಕ ಹಣ ಬರುತ್ತಿದೆ ಮತ್ತು ಅಲ್ಲಿ ಜಿಹಾದಿ ಸಿದ್ಧಾಂತದ ಶಿಕ್ಷಣ ನೀಡಲಾಗುತ್ತಿದೆ, ಎಂದು ಒಪ್ಪಿಕೊಂಡಿದ್ದಾರೆ.

ಸೀತಾಮಢಿಯ ‘ಮದರಸಾ ಇಸ್ಲಾಮಿಯಾ ಮಹಮೂದಿಯಾ’ ಸಂಸ್ಥೆಯು ನೋಂದಣಿ ಇಲ್ಲದೆ ಶೆಡ್‌ ಅಡಿಯಲ್ಲಿ ನಡೆಸಲ್ಪಡುತ್ತಿದೆ ಮತ್ತು ಅಲ್ಲಿ ಬಾಂಗ್ಲಾದೇಶಿ ಅಕ್ರಮ ವಲಸಿಗ ಮಕ್ಕಳಿಗೆ ನಕಲಿ ಗುರುತಿನ ಚೀಟಿಗಳ ಮೇಲೆ ಪ್ರವೇಶ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಕಟ್ಟರವಾದಿ ಮೌಲಾನಾ ಝಾಕಿರ್ ನಾಯ್ಕ್ ಅವರ ವೀಡಿಯೊಗಳನ್ನು ತೋರಿಸಲಾಗುತ್ತಿದೆ, ಇದು ಮುಸ್ಲಿಮೇತರರ ವಿರುದ್ಧ ದ್ವೇಷವನ್ನು ಸೃಷ್ಟಿಸುತ್ತದೆ.

‘ತಾಲೀಮ್-ಉಲ್-ಇಸ್ಲಾಂ’ ಎಂಬ ಪುಸ್ತಕದಲ್ಲಿ ಮುಸ್ಲಿಮೇತರರನ್ನು ‘ಕಾಫಿರ್’ ಎಂದು ಕರೆಯಲಾಗಿದೆ, ಇದು ಧಾರ್ಮಿಕ ದ್ವೇಷ ಮತ್ತು ಇಸ್ಲಾಮಿಕ್ ಕಟ್ಟರವಾದವನ್ನು ಉತ್ತೇಜಿಸುತ್ತದೆ.

ನೇಪಾಳದ ಗಡಿಯ ಸಮೀಪದಲ್ಲೂ ಇದೇ ರೀತಿಯ ಇಸ್ಲಾಮಿಕ್ ಶಾಲೆಗಳ ದೊಡ್ಡ ಜಾಲ ಕಾರ್ಯನಿರ್ವಹಿಸುತ್ತಿದೆ, ಅವುಗಳಿಗೆ ವಿದೇಶದಿಂದ ಹಣ ಬರುತ್ತಿದೆ ಮತ್ತು ಅವುಗಳ ಮೇಲೆ ಯಾರೂ ನಿಗಾ ಇಡುವುದಿಲ್ಲ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಸಂಪಾದಕೀಯ ನಿಲುವು

ಇಂತಹ ಮದರಸಗಳ ಮೇಲೆ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಕ್ರಮ ಕೈಗೊಳ್ಳುವುದು ಅಗತ್ಯ!