ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಂದ ಕಳವಳ ವ್ಯಕ್ತ
(ಎಐ ಎಂದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಅಂದರೆ ಕೃತಕ ಬುದ್ಧಿಮತ್ತೆ)

ನವ ದೆಹಲಿ – ಭಾರತ ಮತ್ತು ಅಮೆರಿಕಾದಲ್ಲಿ ಕೆಲವು ಯುವ ವಕೀಲರು ‘ಎಐ’ ಸಾಧನಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ರಾಜೇಶ ಬಿಂದಲ ಹೇಳಿದ್ದಾರೆ. ಇದರ ಮೂಲಕ ಅವರು ನಕಲಿ ನ್ಯಾಯಾಲಯದ ತೀರ್ಪುಗಳನ್ನು ಹುಡುಕುತ್ತಾರೆ ಮತ್ತು ಅದನ್ನು ಸರಿಯಾಗಿ ಪರಿಶೀಲಿಸದೆ ನ್ಯಾಯಾಲಯದಲ್ಲಿ ಸಲ್ಲಿಸುತ್ತಾರೆ. ಅನೇಕ ಬಾರಿ ಆ ತೀರ್ಪು ತಪ್ಪಾಗಿರುತ್ತದೆ, ಅಥವಾ ಎಐ ಸ್ವತಃ ಹೊಸ ನಕಲಿ ತೀರ್ಪನ್ನು ಸೃಷ್ಟಿಸಿರುತ್ತದೆ.
ನ್ಯಾಯಮೂರ್ತಿ ಬಿಂದಲ ಮಾತನಾಡಿ,
೧. ಯುವ ವಕೀಲರು ‘ಚಾಟ್ ಜಿಪಿಟಿ’ಯಂತಹ ‘ಎಐ’ ಸಾಧನಗಳಲ್ಲಿ ಕೇವಲ ೨-೩ ಪದಗಳನ್ನು ನಮೂದಿಸಿ ಹುಡುಕುತ್ತಾರೆ ಮತ್ತು ಅದರಿಂದ ಬಂದ ಉತ್ತರವನ್ನು ನ್ಯಾಯಾಲಯದಲ್ಲಿ ತೋರಿಸುತ್ತಾರೆ.
೨. ನ್ಯಾಯಾಧೀಶರು ತೀರ್ಪು ನೀಡುತ್ತಿದ್ದರೂ, ಅದರ ಹಿಂದಿನ ನಿಜವಾದ ಶ್ರಮ ಯುವ ವಕೀಲರ ಸಂಶೋಧನೆ ಮತ್ತು ಹಿರಿಯ ವಕೀಲರ ವಾದವಾಗಿರುತ್ತದೆ.
೩. ‘ಚಾಟ್ ಜಿಪಿಟಿ’ಯಿಂದ ಆದೇಶಗಳನ್ನು ಬರೆಯಲು ಬಳಸಬೇಡಿ! ಅದರಲ್ಲಿ ದೋಷಗಳಿರಬಹುದು. ಎಐ ಬಳಸಬೇಕಾದರೆ, ಅದಕ್ಕೆ ತರಬೇತಿ ಪಡೆಯಿರಿ ಎಂದು ಇತ್ತೀಚೆಗೆ ಕೇರಳ ಹೈಕೋರ್ಟ್ ಆದೇಶ ನೀಡಿತ್ತು!
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
ಹಸು ಹಿಂದೂಗಳಿಗೆ ಪವಿತ್ರ: ಅದರ ಹತ್ಯೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಹುದು! – ಗುಜರಾತ್ ಹೈಕೋರ್ಟ್
ಶನಿಶಿಂಗಣಾಪುರದ ಶ್ರೀ ಶನಿದೇವರ ಮೂರ್ತಿಯ ಸಂರಕ್ಷಣೆಗಾಗಿ ವಜ್ರಲೇಪನ ಮಾಡಲಾಗುವುದು !
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್