ದುರ್ಗ (ಛತ್ತೀಸ್‌ಗಢ)ದಲ್ಲಿ ಆದಿವಾಸಿ ಯುವತಿಯರನ್ನು ಮತಾಂತರ ಮಾಡಲು ಪ್ರಯತ್ನಿಸಿದ 3 ಜನರ ಬಂಧನ – Conversion Racket

ಬಂಧಿತರಲ್ಲಿ 2 ನನ್ಸ್ ಸೇರಿದ್ದಾರೆ

ದುರ್ಗ (ಛತ್ತೀಸ್‌ಗಢ) – ದುರ್ಗ ರೈಲ್ವೆ ನಿಲ್ದಾಣದಿಂದ ಇಬ್ಬರು ನನ್‌ ಮತ್ತು ಒಬ್ಬ ಯುವಕನನ್ನು ಮಹಿಳೆಯರ ಕಳ್ಳಸಾಗಣೆ ಮತ್ತು ಬಲವಂತದ ಮತಾಂತರದ ಪ್ರಯತ್ನದ ಆರೋಪದ ಮೇಲೆ ಬಂಧಿಸಲಾಗಿದೆ. ಈ ಮೂವರು ಮೂವರು ಆದಿವಾಸಿ ಯುವತಿಯರನ್ನು ಆಗ್ರಾಕ್ಕೆ ಕರೆದೊಯ್ಯುತ್ತಿದ್ದರು, ಅಲ್ಲಿ ಅವರನ್ನು ಮತಾಂತರಗೊಳಿಸಲು ಪ್ರಯತ್ನಿಸಲಾಗಿತ್ತು. ಬಜರಂಗ ದಳದ ಕಾರ್ಯಕರ್ತರ ಜಾಗರೂಕತೆಯಿಂದ ರೈಲ್ವೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಬಂಧಿತರಾದವರ ಹೆಸರುಗಳು ಸಿಸ್ಟರ್ ಪ್ರೀತಿ ಮೇರಿ, ವಂದನಾ ಫ್ರಾನ್ಸಿಸ್ ಮತ್ತು ಸುಖಮನ್ ಮಂಡಾವಿ ಎಂದ ಗುರುತಿಸಲಾಗಿದೆ.

1. ಆಗ್ರಾದಲ್ಲಿ ಉತ್ತಮ ಉದ್ಯೋಗ ಮತ್ತು ಉನ್ನತ ಶಿಕ್ಷಣ ದೊರೆಯುತ್ತದೆ ಎಂದು ಆಮಿಷ ಒಡ್ಡಲಾಗಿತ್ತು ಎಂದು ಆದಿವಾಸಿ ಯುವತಿಯರು ತಿಳಿಸಿದ್ದಾರೆ.

2. ಬಂಧಿತ ಆರೋಪಿಗಳು 8 ವರ್ಷಗಳ ಹಿಂದೆ ಕೋರ್ಬಾ ಜಿಲ್ಲೆಯ ದೂರದ ಕಾಡಿನಲ್ಲಿ ಮಿಷನರಿ ಆಸ್ಪತ್ರೆಯನ್ನು ನಡೆಸುತ್ತಿದ್ದರು. ಅಲ್ಲಿ, ಚಿಕಿತ್ಸೆಯ ಹೆಸರಿನಲ್ಲಿ ದಲಿತರು ಮತ್ತು ಆದಿವಾಸಿ ಜನರನ್ನು ಮೋಸಗೊಳಿಸಿ ಅವರನ್ನು ಮತಾಂತರ ಮಾಡಲಾಗುತ್ತಿತ್ತು. ನಂತರ ಅವರನ್ನು ಮಧ್ಯಪ್ರದೇಶಕ್ಕೆ ಕಳುಹಿಸಲಾಗುತ್ತಿತ್ತು.

ಸಂಪಾದಕೀಯ ನಿಲುವು

ದೇಶಾದ್ಯಂತ ಕಠಿಣ ಮತಾಂತರ ವಿರೋಧಿ ಕಾನೂನು ಇಲ್ಲದ ಕಾರಣ, ಇಂದಿಗೂ ಕ್ರೈಸ್ತ ಮಿಷನರಿಗಳು ರಾಜಾರೋಷವಾಗಿ ಮತಾಂತರ ನಡೆಸುತ್ತಿದ್ದಾರೆ !