ದಾಳಿ ಮಾಡಿದವರು 5 ಅಪ್ರಾಪ್ತ ಮಕ್ಕಳು, 4 ಜನರ ಬಂಧನ

ಮೆಲ್ಬರ್ನ್ (ಆಸ್ಟ್ರೇಲಿಯಾ) – ಇಲ್ಲಿನ ‘ಸೆಂಟ್ರಲ್ ಸ್ಕ್ವೇರ್ ಶಾಪಿಂಗ್ ಸೆಂಟರ್’ ಹೊರಗೆ ಐವರು ಅಪ್ರಾಪ್ತ ಮಕ್ಕಳು ಭಾರತೀಯ ಮೂಲದ ಸೌರಭ ಆನಂದ ಅವರ ಮೇಲೆ ದಾಳಿ ಮಾಡಿ ಅವರ ಮಣಿಕಟ್ಟನ್ನು ಕತ್ತರಿಸಿದ್ದಾರೆ. ಒಬ್ಬ ಹುಡುಗ ಅವನರಿಗೆ ಗುದ್ದಿದರೆ, ಇನ್ನೊಬ್ಬನು ಅವರ ಕುತ್ತಿಗೆಗೆ ಚಾಕು ಹಿಡಿದನು. ಸೌರಭ ಆನಂದ ತಮ್ಮನ್ನು ರಕ್ಷಿಸಿಕೊಳ್ಳಲು ಕೈ ಎತ್ತಿದಾಗ, ಆ ಹುಡುಗ ಅದೇ ಚಾಕುವಿನಿಂದ ಆನಂದ ಅವರ ಮಣಿಕಟ್ಟನ್ನು ಕತ್ತರಿಸಿದ್ದಾನೆ. ಈ ಪ್ರಕರಣದಲ್ಲಿ, ಪೊಲೀಸರು ಐವರು ಆರೋಪಿಗಳಲ್ಲಿ ನಾಲ್ವರನ್ನು ಬಂಧಿಸಿದ್ದಾರೆ.
1. ಈ ಘಟನೆಯ ಬಗ್ಗೆ ಸೌರಭ ಆನಂದ, ಅವರು ಸಂಜೆ ಔಷಧಿ ಅಂಗಡಿಯಿಂದ ಔಷಧಿ ತೆಗೆದುಕೊಂಡು ಹಿಂತಿರುಗುತ್ತಿದ್ದರು. ಈ ಸಮಯದಲ್ಲಿ ಅವರು ಸ್ನೇಹಿತನೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದರು. ಆಗ ಐವರು ಮಕ್ಕಳು ಹಿಂಭಾಗದಿಂದ ಅವರ ಮೇಲೆ ದಾಳಿ ಮಾಡಿದರು. ಇದರಿಂದ ಅವರ ಬೆನ್ನುಮೂಳೆ ಮುರಿಯಿತು, ತಲೆಗೆ ಗಾಯಗಳಾಗಿವೆ. ಅವರ ಕೈ ಪೂರ್ಣವಾಗಿ ಕಳಚಿತ್ತು.
2. ಈ ಸಮಯದಲ್ಲಿ ಸೌರಭ ಆನಂದ ಅವರ ಕೂಗಾಟ ಕೇಳಿ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಹಲವು ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ಅವರ ಕೈಯನ್ನು ಮತ್ತೆ ಜೋಡಿಸಲಾಯಿತು.
ವೈದ್ಯರು ಅವರ ಸ್ಥಿತಿಯ ಸುಧಾರಣೆಯ ಬಗ್ಗೆ ಸದ್ಯಕ್ಕೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಕಳೆದ ಕೆಲವು ದಿನಗಳಲ್ಲಿ ಆಸ್ಟ್ರೇಲಿಯಾ ಮತ್ತು ಇತರ ದೇಶಗಳಲ್ಲಿ ಭಾರತೀಯರ ಮೇಲೆ ಜನಾಂಗೀಯ ದ್ವೇಷದಿಂದ ನಡೆಯುತ್ತಿರುವ ದಾಳಿಗಳ ಹಿಂದೆ ಅಂತರರಾಷ್ಟ್ರೀಯ ಪಿತೂರಿ ಇದೆಯೇ ಎಂದು ಭಾರತ ಸರಕಾರವು ತನಿಖೆ ನಡೆಸಬೇಕು ಮತ್ತು ಇಂತಹ ಘಟನೆಗಳನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು! |
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತಿದ ಮೆಹರಂಗ್ ಬಲೋಚ್ ಗೆ ಪಾಕಿಸ್ತಾನದಿಂದ ಜೀವಾವಧಿ ಶಿಕ್ಷೆ !