ವಿದೇಶಿ ನಾಯಿ ತಳಿಗಳನ್ನು ನಿಷೇಧಿಸಿ! – ‘ಪೇಟಾ’ದಿಂದ ಆಗ್ರಹ – Ban Foreign Dog Breeds PETA

ಮುಂಬಯಿ – ಭಾರತದ ಪ್ರಾಣಿ ಹಕ್ಕುಗಳ ಸಂಘಟನೆಯಾದ ‘ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್’ (ಪೇಟಾ) ವಿದೇಶಿ ನಾಯಿ ತಳಿಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿದೆ. ಹಿಂಸಾತ್ಮಕ ವಿದೇಶಿ ತಳಿಯಾದ ಪಿಟ್‌ಬುಲ್ ನಾಯಿಯೊಂದು ಚಿಕ್ಕ ಮಗುವಿನ ಮೇಲೆ ದಾಳಿ ಮಾಡಿದ ಭೀಕರ ಘಟನೆಯ ನಂತರ, ‘ಪೇಟಾ’ ಮತ್ತೊಮ್ಮೆ ತಳಿ ಅಭಿವೃದ್ಧಿಪಡಿಸಿದ ವಿದೇಶಿ ನಾಯಿಗಳ ತಳಿಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿದೆ. ಹೆಚ್ಚು ಜನರ ಜೀವ ಅಪಾಯಕ್ಕೆ ಸಿಲುಕುವ ಮೊದಲು ಮಹಾರಾಷ್ಟ್ರ ಸರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ‘ಪೇಟಾ’ ಕರೆ ನೀಡಿದೆ.