
ಕುರ್ನೂಲ್ (ಆಂಧ್ರ ಪ್ರದೇಶ) – ಭಾರತವು ‘ಯುಎವಿ ಲಾಂಚ್ಡ್ ಪ್ರಿಸೀಶನ್ ಗೈಡೆಡ್ ಮಿಸೈಲ್’ – ‘ಯು.ಎಲ್.ಪಿ.ಜಿ.ಎಮ್.-ವಿ೩’ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿದೆ. ಈ ಪರೀಕ್ಷೆಯನ್ನು ಆಂಧ್ರ ಪ್ರದೇಶದ ಕುರ್ನೂಲ್ ಜಿಲ್ಲೆಯ ‘ನ್ಯಾಷನಲ್ ಓಪನ್ ಏರಿಯಾ ರೇಂಜ್’ನಿಂದ ನಡೆಸಲಾಯಿತು. ಈ ಗಮನಾರ್ಹ ಯಶಸ್ಸಿನ ಬಗ್ಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ‘ಎಕ್ಸ್’ ಮೂಲಕ ಮಾಹಿತಿ ನೀಡಿದ್ದಾರೆ.
In a major boost to India’s defence capabilities, @DRDO_India has successfully carried out flight trials of UAV Launched Precision Guided Missile (ULPGM)-V3 in the National Open Area Range (NOAR), test range in Kurnool, Andhra Pradesh.
Congratulations to DRDO and the industry… pic.twitter.com/KR4gzafMoQ
— Rajnath Singh (@rajnathsingh) July 25, 2025
‘ಯು.ಎಲ್.ಪಿ.ಜಿ.ಎಮ್.-ವಿ೩’ ಎಂಬುದು ಭಾರತ ಸರಕಾರದ ‘ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ’ ಅಥವಾ ‘ಡಿ.ಆರ್.ಡಿ.ಓ.’ ಅಭಿವೃದ್ಧಿಪಡಿಸಿದ ಸ್ಥಳೀಯ ಆಧುನಿಕ ಕ್ಷಿಪಣಿ ವ್ಯವಸ್ಥೆಯಾಗಿದೆ.
🚀 Kurnool, Andhra Pradesh: India successfully tests ‘ULPGM-V3’ missile! 🇮🇳
🛰️ Launched from UAV (drone)
🎯 Precision air-to-surface strike capability🔬 Indigenously developed by DRDO in partnership with Adani Group & BDL
🛡️ Boosts India’s self-reliance in modern warfare
🗣️… pic.twitter.com/BfEoenoYiI
— Sanatan Prabhat (@SanatanPrabhat) July 25, 2025
ಈ ಕ್ಷಿಪಣಿಯನ್ನು ನೇರವಾಗಿ ಡ್ರೋನ್‌ನಿಂದ ಉಡಾಯಿಸಲಾಗುತ್ತದೆ. ಈ ವ್ಯವಸ್ಥೆಯನ್ನು ಆಧುನಿಕ ಯುದ್ಧದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ ಮತ್ತು ಇದು ಭಾರತದ ಆತ್ಮನಿರ್ಭರ ರಕ್ಷಣಾ ಸಾಮರ್ಥ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಈ ಕ್ಷಿಪಣಿ ವ್ಯವಸ್ಥೆಯು ಗಾಳಿಯಿಂದ ನೆಲದ ಮೇಲೆ ನಿಖರವಾಗಿ ಗುರಿ ಇಡುತ್ತದೆ. ಅದಾನಿ ಸಮೂಹ ಮತ್ತು ‘ಭಾರತ್ ಡೈನಾಮಿಕ್ಸ್ ಲಿಮಿಟೆಡ್’ (ಬಿ.ಡಿ.ಎಲ್.), ಇವು ಇದರ ಮುಖ್ಯ ಉತ್ಪಾದನಾ ಪಾಲುದಾರರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!