ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಅವರಿಂದ ಕಳವಳ ವ್ಯಕ್ತ

ದಿಬ್ರುಗಢ (ಅಸ್ಸಾಂ) – ರಾಜ್ಯದಲ್ಲಿ ಈಗಿರುವ ಜನಸಂಖ್ಯಾ ಬೆಳವಣಿಗೆಯ ವೇಗ ಹೀಗೆಯೇ ಮುಂದುವರಿದರೆ, 2041ರ ವೇಳೆಗೆ ಅಸ್ಸಾಂನಲ್ಲಿ ಮುಸ್ಲಿಮರ ಜನಸಂಖ್ಯೆ ಹಿಂದೂಗಳ ಜನಸಂಖ್ಯೆಗೆ ಸಮಾನವಾಗಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಆತಂಕ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸರಮಾ ಅವರು 2011ರ ಜನಗಣತಿಯನ್ನು ಉಲ್ಲೇಖಿಸಿ, ಆ ಸಮಯದಲ್ಲಿ ಅಸ್ಸಾಂನ ಒಟ್ಟು ಜನಸಂಖ್ಯೆ 3 ಕೋಟಿ 12 ಲಕ್ಷ ಇತ್ತು ಎಂದು ಹೇಳಿದರು. ಅದರಲ್ಲಿ ಮುಸ್ಲಿಮರ ಸಂಖ್ಯೆ 1 ಕೋಟಿ 7 ಲಕ್ಷ (34.22%), ಆದರೆ ಹಿಂದೂಗಳ ಸಂಖ್ಯೆ 1 ಕೋಟಿ 92 ಲಕ್ಷ (61.47%) ಇತ್ತು.
Empirical data and past census records show that in a few years from now, Assam’s minority population will be close to 50%! pic.twitter.com/sTpV4ZbRzr
— Himanta Biswa Sarma (@himantabiswa) July 23, 2025
ಕೇವಲ 3% ಮುಸ್ಲಿಮರು ಮಾತ್ರ ಮೂಲ ಅಸ್ಸಾಂ ನಿವಾಸಿಗಳು, ಉಳಿದ 31% ಬಾಂಗ್ಲಾದೇಶಿ ನುಸುಳುಕೋರರು
ಮುಖ್ಯಮಂತ್ರಿ ಸರಮಾ ಅವರು, ಕೇವಲ 3% ಮುಸ್ಲಿಮರು ಮಾತ್ರ ಅಸ್ಸಾಂನ ಸ್ಥಳೀಯರು (ಅಸ್ಸಾಮಿಗಳು) ಆಗಿದ್ದಾರೆ, ಉಳಿದ 31% ಮುಸ್ಲಿಮರು ಬಾಂಗ್ಲಾದೇಶದಿಂದ ಬಂದ ನುಸುಳುಕೋರರು ಎಂದು ಹೇಳಿದರು. ಈ ಸ್ಥಿತಿ ಹೀಗೆಯೇ ಮುಂದುವರಿದರೆ, 2021, 2031 ಮತ್ತು 2041ರ ಜನಗಣತಿಗಳಲ್ಲಿ ಮುಸ್ಲಿಮರ ಪಾಲು 50% ಆಗುತ್ತದೆ ಮತ್ತು ಹಿಂದೂ ಸಮುದಾಯ ಅಲ್ಪಸಂಖ್ಯಾತವಾಗುತ್ತದೆ.
1951ರಲ್ಲಿ 3 ಇದ್ದ ಮುಸ್ಲಿಂ ಬಹುಸಂಖ್ಯಾತ ಜಿಲ್ಲೆಗಳು ಈಗ 11 ಆಗಿವೆ!
ಮುಖ್ಯಮಂತ್ರಿ ಸರಮಾ ಅವರು, 1951ರಿಂದ ಇಂದಿನವರೆಗೂ ಅಸ್ಸಾಂನ ಜನಸಂಖ್ಯೆಯ ರಚನೆಯಲ್ಲಿ ದೊಡ್ಡ ಬದಲಾವಣೆಗಳಾಗಿವೆ ಎಂದು ಹೇಳಿದರು. ಮುಸ್ಲಿಂ ಬಹುಸಂಖ್ಯಾತ ಜಿಲ್ಲೆಗಳ ಸಂಖ್ಯೆ ವೇಗವಾಗಿ ಹೆಚ್ಚಾಗಿದೆ. 2001ರಲ್ಲಿ ಅಸ್ಸಾಂನಲ್ಲಿ 23 ಜಿಲ್ಲೆಗಳಿದ್ದವು, ಅವುಗಳಲ್ಲಿ 6 ಜಿಲ್ಲೆಗಳು ಮುಸ್ಲಿಂ ಬಹುಸಂಖ್ಯಾತವಾಗಿದ್ದವು. ಇದರಲ್ಲಿ ಧುಬ್ರಿ (74.29%), ಗೋಲಪಾರಾ (53.71%), ಬಾರ್ಪೇಟಾ (59.37%), ನಗಾಂವ್ (51%), ಕರಿಮ್‌ಗಂಜ್ (52.3%) ಮತ್ತು ಹೈಲಾಕಂಡಿ (57.63%) ಸೇರಿವೆ. 2011ರಲ್ಲಿ ಜಿಲ್ಲೆಗಳ ಸಂಖ್ಯೆ 27ಕ್ಕೆ ಹೆಚ್ಚಾಯಿತು ಮತ್ತು ಮುಸ್ಲಿಂ ಬಹುಸಂಖ್ಯಾತ ಜಿಲ್ಲೆಗಳು 9 ಆದವು. ಅದರಲ್ಲಿ ಧುಬ್ರಿ (79.67%), ಗೋಲಪಾರಾ (57.52%), ಬಾರ್ಪೇಟಾ (70.74%), ಮೊರಿಗಾಂವ್ (52.56%), ನಗಾಂವ್ (55.36%), ಕರಿಮ್‌ಗಂಜ್ (56.36%), ಹೈಲಾಕಂಡಿ (60.31%), ಬೊಂಗೈಗಾಂವ್ (50.22%) ಮತ್ತು ದಾರಂಗ್ (64.34%) ಸೇರಿವೆ. ಪ್ರಸ್ತುತ ಮುಸ್ಲಿಂ ಬಹುಸಂಖ್ಯಾತ ಜಿಲ್ಲೆಗಳ ಸಂಖ್ಯೆ ಕನಿಷ್ಠ 11ಕ್ಕೆ ತಲುಪಿದೆ.
ಅಸ್ಸಾಂನ ಅಸ್ತಿತ್ವದ ಮೇಲಿನ ಜಿಹಾದ್!
ಮುಖ್ಯಮಂತ್ರಿ ಸರಮಾ ಅವರು ಈ ಜನಸಂಖ್ಯಾ ಬದಲಾವಣೆಯನ್ನು ಕೇವಲ ‘ಭೂಮಿ ಜಿಹಾದ್’ ಅಲ್ಲದೆ ‘ಅಸ್ಸಾಂನ ಅಸ್ತಿತ್ವದ ಮೇಲಿನ ಜಿಹಾದ್’ ಎಂದು ಕರೆದರು. ಅವರು, ಮುಸ್ಲಿಂ ನುಸುಳುಕೋರರು ಸರಕಾರಿ ಭೂಮಿ ಮತ್ತು ಅರಣ್ಯ ಪ್ರದೇಶಗಳನ್ನು ಅತಿಕ್ರಮಿಸುತ್ತಿದ್ದಾರೆ, ಇದರಿಂದ ಅಸ್ಸಾಂನ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ಗುರುತು ಅಪಾಯಕ್ಕೆ ಸಿಕ್ಕಿದೆ ಎಂದು ಹೇಳಿದರು. ಇದು ಹೀಗೆಯೇ ಮುಂದುವರಿದರೆ, ಮುಂದಿನ 20 ವರ್ಷಗಳಲ್ಲಿ ಅಸ್ಸಾಂನ ಮೂಲ ನಿವಾಸಿಗಳು ಅಲ್ಪಸಂಖ್ಯಾತರಾಗುತ್ತಾರೆ.
9 ಲಕ್ಷ ಎಕರೆ ಭೂಮಿ ಅತಿಕ್ರಮಣ!
ಮುಖ್ಯಮಂತ್ರಿ ಸರಮಾ ಅವರು, ಈ ಹಿಂದೆ ಕೂಡ ಅತಿಕ್ರಮಣ ವಿರೋಧಿ ಅಭಿಯಾನ ನಡೆಸಲಾಗಿತ್ತು ಎಂದು ಹೇಳಿದರು. ಪ್ರಸ್ತುತ ಸುಮಾರು 29 ಲಕ್ಷ ಬಿಘಾ, ಅಂದರೆ ಸುಮಾರು 9 ಲಕ್ಷ ಎಕರೆ ಭೂಮಿ ಅತಿಕ್ರಮಣಕ್ಕೊಳಗಾಗಿದೆ ಮತ್ತು ಆ ಭೂಮಿಯನ್ನು ಬಾಂಗ್ಲಾದೇಶಿ ನುಸುಳುಕೋರರು, ‘ಮಿಯಾಂ’ (ಬಂಗಾಳಿ ಮುಸ್ಲಿಮರು) ಮುಸ್ಲಿಮರು ಕಬಳಿಸಿದ್ದಾರೆ. ಈ ನುಸುಳುಕೋರರಿಗೆ ಅವರ ಮೂಲ ಜಿಲ್ಲೆಗಳಲ್ಲಿಯೂ ಭೂಮಿ ಇರುತ್ತದೆ, ಆದರೂ ಅವರು ನೂರಾರು ಕಿಲೋಮೀಟರ್ ದೂರ ಹೋಗಿ ಸರಕಾರಿ ಭೂಮಿಯನ್ನು ಅತಿಕ್ರಮಿಸುತ್ತಾರೆ, ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸುತ್ತಾರೆ ಮತ್ತು ಕ್ರಮೇಣ ದೊಡ್ಡ ಪ್ರಮಾಣದ ಮತಬ್ಯಾಂಕ್ ಆಗಿ ಬದಲಾಗುತ್ತಾರೆ. ಇದರಿಂದ ಸ್ಥಳೀಯ ರಾಜಕೀಯ ಪಕ್ಷಗಳು ಅವರ ಮೇಲೆ ಕ್ರಮ ಕೈಗೊಳ್ಳಲು ಹೆದರುತ್ತವೆ.
ಕಾಂಗ್ರೆಸ್ ರಕ್ಷಣೆಯಿಂದ ಜನಸಂಖ್ಯೆಯಲ್ಲಿ ಬದಲಾವಣೆಗಳು
ಮುಖ್ಯಮಂತ್ರಿ ಸರಮಾ ಅವರು, ಈ ಪ್ರಕ್ರಿಯೆ ಕಾಂಗ್ರೆಸ್ ರಕ್ಷಣೆಯಲ್ಲಿ ಅನೇಕ ವರ್ಷಗಳಿಂದ ನಡೆಯುತ್ತಿದೆ ಎಂದು ಆರೋಪಿಸಿದರು. ಎಲ್ಲಿ ಜನಸಂಖ್ಯಾ ಬದಲಾವಣೆಗಳಾದವೋ, ಅಲ್ಲಿ ಕಾಂಗ್ರೆಸ್‌ಗೆ ಇದ್ದಕ್ಕಿದ್ದಂತೆ ಹೆಚ್ಚು ಮತಗಳು ಬರಲು ಪ್ರಾರಂಭಿಸಿದವು.
ಸಂಪಾದಕೀಯ ನಿಲುವುಹೀಗಾದಾಗ ಅಸ್ಸಾಂ ಇಸ್ಲಾಮಿಕ್ ರಾಜ್ಯವಾದಂತೆ ಆಗುತ್ತದೆ ಮತ್ತು ಆಗ ಅಲ್ಲಿನ ಮತಾಂಧ ಮುಸ್ಲಿಮರು ಅಸ್ಸಾಂಗೆ ಪ್ರತ್ಯೇಕ ದೇಶದ ಅಥವಾ ಬಾಂಗ್ಲಾದೇಶಕ್ಕೆ ಸೇರುವಂತೆ ಬೇಡಿಕೆ ಇಡುತ್ತಾರೆ! ಈ ಬೇಡಿಕೆಗಾಗಿ ಅಲ್ಲಿ ಹಿಂದೂಗಳ ವಂಶಹತ್ಯೆ ನಡೆಸಲಾಗುವುದು, ಅವರನ್ನು ಓಡಿಸಲಾಗುವುದು ಮತ್ತು ಭಾರತೀಯ ಜಾತ್ಯತೀತ ರಾಜಕೀಯ ಪಕ್ಷಗಳು ಹಾಗೂ ಅವರ ನಾಯಕರು ಮುಸ್ಲಿಮರನ್ನೇ ಬೆಂಬಲಿಸುತ್ತಾರೆ! |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !