ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಅವರಿಂದ ಮಾಹಿತಿ

ಗೌಹತ್ತಿ(ಆಸ್ಸಾಂ) – ಆಸ್ಸಾಂನಲ್ಲಿ ಸುಮಾರು 29 ಲಕ್ಷ ಬಿಘಾ (ಅಂದರೆ 9 ಲಕ್ಷ .57 ಸಾವಿರ ಎಕರೆ) ಭೂಮಿ ಬಾಂಗ್ಲಾದೇಶಿ ನುಸುಳುಕೋರರು ಮತ್ತು ಬಂಗಾಳಿ ಮುಸ್ಲಿಮರ ವಶದಲ್ಲಿದೆ ಎಂದು ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಹೇಳಿದ್ದಾರೆ. “2021 ರಲ್ಲಿ ರಾಜ್ಯದಲ್ಲಿ ಭಾಜಪ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ಭೂಮಿಯನ್ನು ಮುಕ್ತಗೊಳಿಸಲು ವಿಶೇಷ ಅಭಿಯಾನವನ್ನು ನಡೆಸಲಾಗುತ್ತಿದೆ ಮತ್ತು ಇದನ್ನು ನಿಲ್ಲಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರಲಾಗುತ್ತಿದೆ” ಎಂದು ಮುಖ್ಯಮಂತ್ರಿ ಸರಮಾ ಈ ಸಂದರ್ಭದಲ್ಲಿ ಹೇಳಿದ್ದಾರೆ. ಅವರು ದರಂಗ್ ಜಿಲ್ಲೆಯ ಗೋರುಖುಟಿ ಬಹು ಉದ್ದೇಶಿತ ಕೃಷಿ ಯೋಜನೆಯ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. “ದರಂಗ್ ನಲ್ಲಿ ಇದುವರೆಗೆ 77 ಸಾವಿರ 420 ಬಿಘಾ ಭೂಮಿಯನ್ನು ಒತ್ತುವರಿ ಮುಕ್ತಗೊಳಿಸಲಾಗಿದೆ. ಈ ಒತ್ತುವರಿಯನ್ನು ಬಹುಸಂಖ್ಯಾತ ಬಂಗಾಳಿ ಮುಸ್ಲಿಮರು ಮಾಡಿದ್ದರು” ಎಂದು ಮುಖ್ಯಮಂತ್ರಿ ಸರಮಾ ಮಾಹಿತಿ ನೀಡಿದರು. (ಕೆಲವು ದಿನಗಳ ಹಿಂದೆ ಆಸ್ಸಾಂನ ಗ್ವಾಲಪಾಡಾ ಜಿಲ್ಲೆಯಲ್ಲಿ ನಡೆದ ಇದೇ ರೀತಿಯ ಕಾರ್ಯಾಚರಣೆಯನ್ನು ‘ಜಮಿಯತ್ ಉಲೆಮಾ-ಎ-ಹಿಂದ್’ ಸಂಘಟನೆಯು ತೀವ್ರವಾಗಿ ವಿರೋಧಿಸಿ, ಮುಸ್ಲಿಮರನ್ನು ಗುರಿಪಡಿಸಲಾಗಿದೆ ಎಂದು ಆರೋಪಿಸಿತ್ತು. ಆದ್ದರಿಂದ, ಬಾಂಗ್ಲಾದೇಶಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ಕಳುಹಿಸುವಾಗ, ಅಂತಹ ನುಸುಳುಕೋರಪರ ಸಂಘಟನೆಗಳ ಸದಸ್ಯರನ್ನೂ ಅಲ್ಲಿಗೆ ಶಾಶ್ವತವಾಗಿ ಕಳುಹಿಸಬೇಕು! – ಸಂಪಾದಕರು)
In the last 4 years, we have freed over 42,000 acres of land from encroachers and dedicated it to public use. pic.twitter.com/AaWDKMcNTK
— Himanta Biswa Sarma (@himantabiswa) July 21, 2025
ಮುಖ್ಯಮಂತ್ರಿ ಸರಮಾ ಮಾಹಿತಿ ನೀಡುತ್ತಾ,
1. ದರಂಗ್ ಜಿಲ್ಲೆಯ ಅಭಿಯಾನದ ನಂತರ ಬೋರಸೊಲ್ಲಾ, ಲುಮಡಿಂಗ, ಬುರಹಾಪಹಾಡ, ಪಾಭಾ, ಬತದ್ರಾ, ಚಾಪರ್ ಮತ್ತು ಪೈಕನ್ ಪ್ರದೇಶಗಳಲ್ಲೂ ಇದೇ ರೀತಿಯ ಕ್ರಮ ಕೈಗೊಳ್ಳಲಾಗಿದೆ.
2. ಕಳೆದ 4 ವರ್ಷಗಳಲ್ಲಿ ರಾಜ್ಯದಲ್ಲಿ 1 ಲಕ್ಷ 29 ಸಾವಿರ ಬಿಘಾ ಭೂಮಿಯನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ. ಈ ಭೂಮಿಯನ್ನು ಅರಣ್ಯ ಪ್ರದೇಶ ಮತ್ತು ಸ್ಥಳೀಯ ಜನರ ಬಳಕೆಗಾಗಿ ಬಳಸಲಾಗುವುದು.
🚨 Assam Land Grab by Infiltrators!
CM Himanta Biswa Sarma reveals:
📌 29 lakh bigahs (10 lakh acres) of land illegally occupied by Bangladeshi & Bengali Muslim infiltrators📌 BJP Govt freed 1.29 lakh bighas since 2021; despite global pressure!
🔥 Sarma slams past govts &… pic.twitter.com/e9saV0tTm0
— Sanatan Prabhat (@SanatanPrabhat) July 22, 2025
3. 2-3 ಅಭಿಯಾನಗಳ ನಂತರ ನಾವು ಭಯಪಡುತ್ತೇವೆ, ಮಣಿಯುತ್ತೇವೆ ಅಥವಾ ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ ಎಂದು ಯಾರಾದರೂ ಭಾವಿಸಿದರೆ, ಅದು ಅವರ ತಪ್ಪು ಕಲ್ಪನೆಯಾಗಿದೆ.
4. ಒಂದು ಕಾಲದಲ್ಲಿ ನಾವು ‘ಶಂಕರ-ಮಾಧವ’ ಬದಲಿಗೆ ‘ಶಂಕರ-ಅಜಾನ್’ ಎಂದು ಹೇಳಲು ಪ್ರಾರಂಭಿಸಿದ್ದೆವು. ಅಜಾನ್ ಪೀರ್ ಅವರ ಸ್ಥಾನದಲ್ಲಿ ಇರುತ್ತಾರೆ; ಆದರೆ ಮಾಧವದೇವ ಕೂಡ ನಮಗೆ ಅಷ್ಟೇ ಮುಖ್ಯವಾಗಿದ್ದಾರೆ. ಅವರೇ ನಮ್ಮ ಜನಾಂಗವನ್ನು ರಕ್ಷಿಸಲು ಸಮರ್ಥರು. (ಶ್ರೀಮಂತ ಶಂಕರದೇವ ಮತ್ತು ಶ್ರೀ ಶ್ರೀ ಮಾಧವದೇವ ಅವರು ಆಸ್ಸಾಂನ ಪೂಜ್ಯ ವೈಷ್ಣವ ಸಂತರಾಗಿದ್ದಾರೆ. ಅಜಾನ್ ಪೀರ್ 17 ನೇ ಶತಮಾನದಲ್ಲಿ ಇರಾಕ್‌ನಿಂದ ಆಸ್ಸಾಂಗೆ ಬಂದ ಮುಸ್ಲಿಂ ಪೀರರಾಗಿದ್ದರು.)
ಸಂಪಾದಕೀಯ ನಿಲುವು
|
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ