
ರಾಂಚಿ (ಜಾರ್ಖಂಡ್) – ಸನಾತನ ಸಂಸ್ಥೆಯು ಸ್ಥಾಪನೆಯಾಗಿ 25 ವರ್ಷ ಪೂರೈಸಿದ ಮತ್ತು ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ 83ನೇ ಜನ್ಮೋತ್ಸವದ ನಿಮಿತ್ತ ಮೇ 17 ರಿಂದ 19 ರವರೆಗೆ ಗೋವಾದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ಆಯೋಜಿಸಲಾಗಿತ್ತು. ಈ ಮಹೋತ್ಸವಕ್ಕೆ ಕೇಂದ್ರ ರಕ್ಷಣಾ ರಾಜ್ಯ ಸಚಿವ ಶ್ರೀ. ಸಂಜಯ ಸೇಠ್ ಅವರಿಗೂ ಆಹ್ವಾನ ನೀಡಲಾಗಿತ್ತು; ಆದರೆ ಅವರು ಇತರ ಕಾರ್ಯನಿಮಿತ್ತ ಭಾಗವಹಿಸಲು ಸಾಧ್ಯವಾಗಲಿಲ್ಲ. ಹಾಗಾಗಿ, ಹಿಂದೂ ಜನಜಾಗೃತಿ ಸಮಿತಿಯ ಪೂರ್ವ ಮತ್ತು ಈಶಾನ್ಯ ಭಾರತದ ಸಂಯೋಜಕ ಶ್ರೀ. ಶಂಭು ಗವಾರೆ ಅವರು ಶಂಖನಾದ ಮಹೋತ್ಸವದ ಆಯೋಜಕರ ಪರವಾಗಿ, ಈ ಮಹೋತ್ಸವದಲ್ಲಿ ನಡೆಸಲಾದ ಶತಚಂಡಿ ಯಜ್ಞ ಮತ್ತು ಮಹಾಧನ್ವಂತರಿ ಯಜ್ಞದ ಪವಿತ್ರ ಪ್ರಸಾದ, ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಸಂಕ್ಷಿಪ್ತ ಜೀವನಚರಿತ್ರೆಯ ಗ್ರಂಥ, ಹಾಗೂ ಶ್ರೀ ತಿರುಪತಿ ಬಾಲಾಜಿ ಅವರ ಬೆಳ್ಳಿಯ ವಿಗ್ರಹವನ್ನು ಶ್ರೀ. ಸೇಠ್ ಅವರಿಗೆ ಉಡುಗೊರೆಯಾಗಿ ನೀಡಿದರು. ಅವರಿಗೆ ಗೋವಾದಲ್ಲಿರುವ ಸನಾತನ ಆಶ್ರಮಕ್ಕೆ ಭೇಟಿ ನೀಡಲು ಆಹ್ವಾನವನ್ನೂ ಸಹ ನೀಡಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ರಾಂಚಿ ಸಂಯೋಜಕಿ ಪೂಜಾ ಚೌಹಾಣ್ ಉಪಸ್ಥಿತರಿದ್ದರು.

ಕೇಂದ್ರ ಸಚಿವ ಸೇಠ್ ಅವರಿಗೆ ಮಹೋತ್ಸವದ ಬಗ್ಗೆ ಮಾಹಿತಿ ನೀಡಿದಾಗ ಅವರಿಗೆ ಬಹಳ ಸಂತೋಷವಾಯಿತು. ಮಹೋತ್ಸವಕ್ಕೆ 30 ಸಾವಿರ ಭಕ್ತರು ಆಗಮಿಸಿದ್ದರು ಎಂದು ಕೇಳಿ ಸೇಠ್ ಪ್ರಭಾವಿತರಾದರು ಮತ್ತು ಈ ಮಾಹಿತಿಯನ್ನು ಇತರರಿಗೂ ತಿಳಿಸಿದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”