
ಸುವಾ (ಫಿಜಿ) – ಪೆಸಿಫಿಕ್ ಮಹಾಸಾಗರದಲ್ಲಿ ಆಸ್ಟ್ರೇಲಿಯಾ ದೇಶದ ಸಮೀಪವಿರುವ ದ್ವೀಪ ರಾಷ್ಟ್ರವಾದ ಫಿಜಿಯಲ್ಲಿನ ಐತಿಹಾಸಿಕ ಸಾಂಬುಲಾ ಶಿವ ದೇವಾಸ್ಥಾನದ ಮೇಲೆ ದಾಳಿ ನಡೆಸಿ, ದೇವಸ್ಥಾನ ಮತ್ತು ಒಳಗಿದ್ದ ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಿಂದ ಅಲ್ಲಿನ ಹಿಂದೂಗಳು ಆಕ್ರೋಶಗೊಂಡಿದ್ದಾರೆ. “ಫಿಜಿಯಲ್ಲಿ ವಾಸಿಸುವ ಭಾರತೀಯ ಮೂಲದ ನಾಗರಿಕರ ಮೇಲಿನ ದಾಳಿಗಳು ಹೆಚ್ಚಾಗುತ್ತಿವೆ ಮತ್ತು ಸರಕಾರ ಇದನ್ನು ನಿರ್ಲಕ್ಷಿಸುತ್ತಿದೆ” ಎಂದು ಫಿಜಿಯ ಮಾಜಿ ಅಟಾರ್ನಿ ಜನರಲ್ ಅಯ್ಯಾಜ್ ಸೈಯದ್ ಖಾಯುಮ್ ಹೇಳಿದ್ದಾರೆ. ಈ ಪ್ರಕರಣದಲ್ಲಿ 28 ವರ್ಷದ ಆರೋಪಿಯನ್ನು ಬಂಧಿಸಲಾಗಿದ್ದು, ಸುವಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆತನಿಗೆ 2 ವಾರಗಳ ನ್ಯಾಯಾಂಗ ಬಂಧನ ವಿಧಿಸಿದೆ. ಫಿಜಿ ಪೊಲೀಸ್ ಆಯುಕ್ತರು ಈ ಹೇಯ ಕೃತ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ನಾಗರಿಕರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಫಿಜಿಯಲ್ಲಿ ಶೇ.24 ಹಿಂದೂ ಜನಸಂಖ್ಯೆ ಇದೆ.
ಹಿಂದೂ ಸಮುದಾಯದ ಆಧ್ಯಾತ್ಮಿಕ ಭಾವನೆಗಳಿಗೆ ದೊಡ್ಡ ಆಘಾತ
ಫಿಜಿಯಲ್ಲಿನ ಶ್ರೀ ಸನಾತನ ಧರ್ಮ ಪ್ರತಿನಿಧಿ ಸಭೆಯು ಪ್ರಾರ್ಥನಾ ಸ್ಥಳಗಳ ಸುರಕ್ಷತೆಯನ್ನು ಹೆಚ್ಚಿಸುವಂತೆ ಮತ್ತು ಕಾನೂನನ್ನು ಹೆಚ್ಚು ಕಠಿಣಗೊಳಿಸುವಂತೆ ಸರಕಾರಕ್ಕೆ ಮನವಿ ಮಾಡಿದೆ. “ಫಿಜಿಯಲ್ಲಿ ಈ ಶಿವ ದೇವಸ್ಥಾನದ ಸುತ್ತ ಬೇಲಿ ಇತ್ತು. ಆರೋಪಿಯು ಬೇಲಿಯನ್ನು ಹಾರಿ ದೇವಸ್ಥಾನವನ್ನು ಪ್ರವೇಶಿಸಿದ್ದಾನೆ. ದೇವಸ್ಥಾನದ ಗರ್ಭಗುಡಿಯಲ್ಲಿನ ವಿಗ್ರಹಗಳನ್ನು ಅವನು ಧ್ವಂಸಗೊಳಿಸಿದ್ದಾನೆ. ಅಲ್ಲಿ ನಿರ್ವಹಣೆಗಾಗಿ ಇದ್ದ ವ್ಯಕ್ತಿಯ ಮೇಲೂ ದಾಳಿ ಮಾಡಿದ್ದಾನೆ” ಎಂದು ಶ್ರೀ ಸನಾತನ ಧರ್ಮ ಪ್ರತಿನಿಧಿ ಸಭೆಯ ಅಧ್ಯಕ್ಷ ಧೀರೇಂದ್ರ ನಂದ ತಿಳಿಸಿದ್ದಾರೆ. ಈ ಘಟನೆಯಿಂದ ಹಿಂದೂ ಸಮುದಾಯದ ಆಧ್ಯಾತ್ಮಿಕ ಭಾವನೆಗಳಿಗೆ ದೊಡ್ಡ ಆಘಾತವಾಗಿದೆ. ಅವರು ದುಃಖಿತರಾಗಿದ್ದಾರೆ ಎಂದು ನಂದ ಹೇಳಿದ್ದಾರೆ.
ಆರ್ಯ ಪ್ರತಿನಿಧಿ ಸಭೆಯು ಸಹ ಫಿಜಿಯಲ್ಲಿನ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದೆ. “ಆರ್ಯ ಸಭೆಯು ಇಂತಹ ಘಟನೆಗಳನ್ನು ಅಪರಾಧ ಕೃತ್ಯಗಳು ಮತ್ತು ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ತತ್ವದ ಮೇಲಿನ ದಾಳಿ ಎಂದು ನೋಡುತ್ತದೆ. ಪರಸ್ಪರ ಗೌರವ ಮತ್ತು ಶಾಂತಿಯುತವಾಗಿ ಬದುಕಲು ಅವಕಾಶ ನೀಡುವುದು ಫಿಜಿಯ ಬಹುಸಾಂಸ್ಕೃತಿಕ ಸಮಾಜ ವ್ಯವಸ್ಥೆಯ ಅಡಿಪಾಯವಾಗಿದೆ” ಎಂದು ಆರ್ಯ ಸಭೆ ಹೇಳಿದೆ.
ಸಂಪಾದಕೀಯ ನಿಲುವುಭಾರತದಲ್ಲೇ ಹಿಂದೂ ದೇವಸ್ಥಾನಗಳು ಅಸುರಕ್ಷಿತವಾಗಿದ್ದರೆ, ವಿದೇಶಗಳಲ್ಲಿ ಅವುಗಳ ಮೇಲೆ ದಾಳಿ ನಡೆಯುವುದರಲ್ಲಿ ಆಶ್ಚರ್ಯವೇನಿದೆ? |
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ಬೆಂಗಳೂರಿನಲ್ಲಿ ಕಸ ಹಾಯುವ ಸೈಬುಲ್ನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!
ಗುಜರಾತ್ನಲ್ಲಿ ನುಸುಳುಕೋರರ ವಿರುದ್ಧ ‘ಆಪರೇಷನ್ ಡೆಲ್ಟಾ ಹಂಟ್’: 2 ದಿನಗಳಲ್ಲಿ 501 ಬಾಂಗ್ಲಾದೇಶಿ ನಾಗರಿಕರ ಬಂಧನ !
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್