ಈಶ್ವರನ ಮೇಲೆ ಶ್ರದ್ಧೆ ಇರುವವರು ಮಾತ್ರ ವಾರಿಯಲ್ಲಿ ಬರಬೇಕು ಎಂಬ ಹೇಳಿಕೆ

ಮುಂಬಯಿ, ಜುಲೈ 10 (ವಿಶೇಷ ಪ್ರತಿನಿಧಿ) – ಇತ್ತೀಚೆಗೆ ನಡೆದ ಪಂಢರಪುರದ ಆಷಾಢ ಏಕಾದಶಿ ವಾರಿಯಲ್ಲಿ ಧರ್ಮದ್ರೋಹಿ ಕಬೀರ್ ಕಲಾ ಮಂಚ್ ಮತ್ತು ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ ಕಾರ್ಯಕರ್ತರಾದ ಸಚಿನ ಮಾಳಿ ಮತ್ತು ಶೀತಲ ಸಾಠೆ ಎಂಬ ದಂಪತಿಗಳು ‘ಸಂವಿಧಾನ ಸಮತಾ ದಿಂಡಿ’ ಹೆಸರಿನಲ್ಲಿ ಸಂವಿಧಾನ ಗ್ರಂಥವನ್ನು ಕೈಯಲ್ಲಿ ಹಿಡಿದು ಪ್ರಚಾರ ಮಾಡಿದ್ದರು. ಮೂಲತಃ, ಇವರಿಬ್ಬರೂ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಜುಲೈ 9 ರಂದು ಪತ್ರಕರ್ತರೊಂದಿಗೆ ಅನೌಪಚಾರಿಕವಾಗಿ ಮಾತನಾಡಿದಾಗ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಈ ಬಗ್ಗೆ ಕೇಳಿದಾಗ, ಅವರು, “ಪಂಢರಪುರದ ವಾರಿಯಲ್ಲಿ ‘ಸಗುಣ-ನಿರ್ಗುಣ’ ಯಾರಾದರೂ ಬರಬಹುದು; ಆದರೆ ಯಾರಿಗೆ ದೇವರ ಮೇಲೆ ಶ್ರದ್ಧೆ ಇದೆಯೋ, ಅಂತಹ ಭಕ್ತರು ಮಾತ್ರ ವಾರಿಯಲ್ಲಿ ಬರಬೇಕು ಎಂದು ನಿರೀಕ್ಷಿಸಲಾಗಿದೆ. ನಾಸ್ತಿಕರು, ಯಾರಿಗೆ ದೇವರ ಮೇಲೆ ಶ್ರದ್ಧೆ ಇಲ್ಲವೋ, ಅವರಿಗೆ ವಾರಿಯಲ್ಲಿ ಏನು ಸಂಬಂಧ? ಅವರು ವಾರಿಯಲ್ಲಿ ಬರುವುದು ತಪ್ಪು.” ಎಂದು ಹೇಳಿದರು.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಾತು ಮುಂದುವರೆಸಿ, “ನಾನು ಹಿಂದುತ್ವನಿಷ್ಠನಾಗಿದ್ದೇನೆ. ನಾಸ್ತಿಕರ ಕಾರ್ಯಕ್ರಮಗಳು ಮತ್ತು ಉತ್ಸವಗಳಲ್ಲಿ, ಹಿಂದುತ್ವನಿಷ್ಠರು ಅಥವಾ ಈಶ್ವರ ಮೇಲೆ ಶ್ರದ್ಧೆ ಇರುವ ಭಕ್ತರು ಹೋಗಿ ಅವರ ಪ್ರಚಾರ ಮಾಡಲಾಗುವುದಿಲ್ಲ, ಅದೇ ರೀತಿ ನಾಸ್ತಿಕರು ವಾರಿಗೆ ಬರುವ ಪ್ರಶ್ನೆಯೇ ಇಲ್ಲ” ಎಂದರು.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !